/newsfirstlive-kannada/media/media_files/2025/12/15/egg-sampla-testing-2025-12-15-12-22-14.jpg)
ಎಗ್ಗೋಸ್ ಕಂಪನಿಯ ಮೊಟ್ಟೆ ಪರೀಕ್ಷೆಗಾಗಿ ಲ್ಯಾಬ್‌ಗೆ ರವಾನೆ
ಎಗ್ಗೋಸ್​ ಮೊಟ್ಟೆಗಳು ಕ್ಯಾನ್ಸರ್​ ಕಾರಕ ಎಂಬ ವರದಿಗಳ ಹಿನ್ನಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಆಲರ್ಟ್ ಆಗಿದೆ. - ಎಗ್ಗೋಸ್ ಕಂಪನಿಯ ಮೊಟ್ಟೆ ಸ್ಯಾಂಪಲ್ಸ್​ ಸಂಗ್ರಹಿಸಿ ಲ್ಯಾಬ್​​​ ಗೆ ಕಳುಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​​ ಅವರು FSSAIಗೆ ಸೂಚನೆ ನೀಡಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮಾದರಿಗಳ ಸಂಗ್ರಹ ಮಾಡಲಾಗುತ್ತೆ. GBA ವ್ಯಾಪ್ತಿಯ 10 ಕಡೆಗಳಲ್ಲಿ ಮೊಟ್ಟೆಗಳ ಸ್ಯಾಂಪಲ್ಸ್​ ಸಂಗ್ರಹ ಮಾಡಲಾಗಿದೆ. ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್​ಗೆ FSSAI ಅಧಿಕಾರಿಗಳು ಕಳುಹಿಸಿದ್ದಾರೆ. 14 ದಿನಗಳಲ್ಲಿ ಮೊಟ್ಟೆಗಳ ಅಸಲಿಯತ್ತು ಬಯಲಾಗಲಿದೆ. ಲ್ಯಾಬ್​ ನಿಂದ 14 ದಿನಗಳ ಬಳಿಕ ಪಕ್ಕಾ ರಿಪೋರ್ಟ್ ಸಿಗಲಿದೆ. ಆರಂಭದಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಎಗ್ಗೋಸ್ ಬ್ರ್ಯಾಂಡ್​​ ನ​ ಮೊಟ್ಟೆಗಳ ಸ್ಯಾಂಪಲ್​​ ಸಂಗ್ರಹ ಮಾಡಲಾಗಿದೆ. ವರದಿ ಆಧರಿಸಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಯಾಂಪಲ್​​​ ಸಂಗ್ರಹಿಸಲು FSSAI ನಿರ್ಧಾರ ಕೈಗೊಂಡಿದೆ. ಅನುಮಾನ ಬಂದ್ರೆ ಇತರೆ ಮೊಟ್ಟೆಗಳ ಸ್ಯಾಂಪಲ್​​ ಕೂಡ ಸಂಗ್ರಹಿಸಿ ಲ್ಯಾಬ್​ ಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ ಎಂದು ನ್ಯೂಸ್​ಫಸ್ಟ್​ ಗೆ FSSAI ಪರಿಶೀಲನಾ ತಂಡದ (ಸ್ಕ್ವಾಡ್​) ಉಪ ಆಯುಕ್ತ ಡಾ. ಸುರೇಶ್​ ಮಾಹಿತಿ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/12/15/egg-samples-testing-by-fssai-2025-12-15-12-30-09.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us