/newsfirstlive-kannada/media/post_attachments/wp-content/uploads/2024/04/HEALTH_EGG_4.jpg)
/newsfirstlive-kannada/media/post_attachments/wp-content/uploads/2024/04/EGG.jpg)
ಮೂಳೆಗಳು - ಮೆದುಳಿಗೆ ಶಕ್ತಿ
ಮೊಟ್ಟೆಗಳು ನಿಮ್ಮ ಸ್ನಾಯುಗಳಿಗೆ ಮಾತ್ರವಲ್ಲದೆ ಮೂಳೆಗಳಿಗೂ ಒಳ್ಳೆಯದು. ಮೊಟ್ಟೆಯಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ ಹೆಚ್ಚಿರುತ್ತದೆ. ಮೂಳೆ ಸಾಂದ್ರತೆಯನ್ನು ಸುಧಾರಿಸಲು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯಕ. ಮೊಟ್ಟೆಗಳಲ್ಲಿರುವ ಕೋಲೀನ್.. ಇದು ಮೆದುಳಿನ ಕಾರ್ಯ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ.
/newsfirstlive-kannada/media/post_attachments/wp-content/uploads/2024/08/EGG-HEALTH-BENIFITS.jpg)
ಕಣ್ಣು ಮತ್ತು ಹೃದಯದ ಆರೋಗ್ಯ
ಮೊಟ್ಟೆಗಳು ನಿಮ್ಮ ಕಣ್ಣುಗಳಿಗೆ ಪ್ರಯೋಜನ ನೀಡುತ್ತವೆ. ಅವುಗಳಲ್ಲಿರುವ ರೋಗ ನಿರೋಧಕಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ನಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
/newsfirstlive-kannada/media/post_attachments/wp-content/uploads/2024/04/HEALTH_EGG_1.jpg)
ಹೃದಯದ ಆರೋಗ್ಯ
ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಇದ್ದರೂ ಮಿತವಾಗಿ ಮೊಟ್ಟೆಗಳನ್ನು ಸೇವಿಸೋದ್ರಿಂದ ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಸಮತೋಲಿತ ಆಹಾರದ ಭಾಗವಾಗಿದ್ದಾಗ ಮೊಟ್ಟೆಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
/newsfirstlive-kannada/media/post_attachments/wp-content/uploads/2024/04/HEALTH_EGG_2.jpg)
ಪ್ರೋಟೀನ್
ಫಿಟ್ನೆಸ್ ಉತ್ಸಾಹಿಗಳಿಗೆ ಮತ್ತು ಆರೋಗ್ಯವಾಗಿರಲು ಎರಡು ಬೇಯಿಸಿದ ಮೊಟ್ಟೆಗಳು ಸುಮಾರು 12 ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್ ಒದಗಿಸುತ್ತವೆ. ಈ ಪ್ರೋಟೀನ್ ಸ್ನಾಯುಗಳನ್ನು ಬಲಿಷ್ಠತೆಗೆ ಕಾರಣವಾಗುತ್ತದೆ. ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/08/EGG-OTHERS222-1.jpg)
ದಿನಕ್ಕೆ ಕೇವಲ ಬೇಯಿಸಿದ 2 ಮೊಟ್ಟೆಗಳು ನಿಮ್ಮ ದೈನಂದಿನ ಆಹಾರದಲ್ಲಿ ಅಗತ್ಯವಾದ ಜೀವಸತ್ವಗಳು, ಪ್ರೋಟೀನ್ ಮತ್ತು ರೋಗ ನಿರೋಧಕಗಳನ್ನು ಸೇರಿಸಬಹುದು. ಇದು ಬಲವಾದ ಮೂಳೆಗಳು, ಸುಧಾರಿತ ಮೆದುಳಿನ ಕಾರ್ಯ, ಉತ್ತಮ ಕಣ್ಣಿನ ಆರೋಗ್ಯ ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ ಕೊಡುಗೆ ನೀಡುತ್ತದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us