/newsfirstlive-kannada/media/media_files/2025/10/15/brushing-6-2025-10-15-13-58-12.jpg)
/newsfirstlive-kannada/media/media_files/2025/10/15/brushing-5-2025-10-15-13-48-49.jpg)
ಹಲ್ಲು ಉಜ್ಜುವುದು ಎಂದರೆ ಕೇವಲ ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಮತ್ತು ಬಾಯಿಯನ್ನು ತಾಜಾವಾಗಿಟ್ಕೊಳ್ಳೋದು ಮಾತ್ರವಲ್ಲ! ನೀವು ಸರಿಯಾಗಿ ಹಲ್ಲುಜ್ಜದಿದ್ದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ಮಧುಮೇಹದಂಥ ಗಂಭೀರ ಕಾಯಿಲೆಗಳು ಬರುವ ಅಪಾಯ ಹೆಚ್ಚಿರುತ್ತದೆ. ದಿನಕ್ಕೆ ಎರಡು ಪ್ರಮುಖ ಸಮಯಗಳಲ್ಲಿ ಹಲ್ಲುಜ್ಜಬೇಕೆಂದು ವೈದ್ಯರು ಸೂಚಿಸ್ತಾರೆ.
/newsfirstlive-kannada/media/media_files/2025/10/15/brushing-4-2025-10-15-13-49-04.jpg)
ಬ್ಯಾಕ್ಟೀರಿಯಾಗಳಿಂದ ದೂರ
ಬೆಳಗ್ಗೆ ಎದ್ದ ತಕ್ಷಣ ಮಾಡಬೇಕಾದ ಮೊದಲ ಕೆಲಸ ಹಲ್ಲುಗಳನ್ನು ಉಜ್ಜುವುದು. ನಿದ್ರೆಯ ಸಮಯದಲ್ಲಿ ಲಾಲಾರಸದ ಉತ್ಪಾದನೆ ಕಡಿಮೆಯಾಗಿರುತ್ತದೆ. ಆಗ ಬಾಯಿ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿ ಮಾರ್ಪಡುತ್ತದೆ. ಬ್ಯಾಕ್ಟೀರಿಯಾಗಳಿಂದ ಬಿಡುಗಡೆಯಾಗುವ ಆಮ್ಲ ರಾತ್ರಿಯಿಡೀ ಹಲ್ಲಿನ ದಂತಕವಚವನ್ನು ಹಾನಿ ಮಾಡುತ್ತದೆ. ಬೆಳಗ್ಗೆ ಹಲ್ಲು ತಿಕ್ಕೋದ್ರಿಂದ ರಾತ್ರಿಯಿಡೀ ಸಂಗ್ರಹವಾಗಿರುವ ಆ ಆಮ್ಲ ಮತ್ತು ಬ್ಯಾಕ್ಟೀರಿಯಾವನ್ನ ತೆಗೆದು ಹಾಕುತ್ತದೆ.
/newsfirstlive-kannada/media/media_files/2025/10/15/brushing-1-2025-10-15-13-49-42.jpg)
ಒಸುಡು ಕಾಯಿಲೆ
ರಾತ್ರಿ ಮಲಗುವ ಮುನ್ನ ಹಲ್ಲು ತಿಕ್ಕೋದು ಮುಖ್ಯ. ರಾತ್ರಿ ಸುಮಾರು ಎಂಟು ಗಂಟೆಗಳ ಕಾಲ ನಿದ್ರಿಸುತ್ತೇವೆ. ಈ ದೀರ್ಘ ಅವಧಿಯಲ್ಲಿ ಹಲ್ಲುಜ್ಜದಿದ್ದರೆ, ಆಹಾರ ಕಣಗಳ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಕಡಿಮೆ ಲಾಲಾರಸ ಉತ್ಪಾದನೆಯಿಂದಾಗಿ ಹಲ್ಲುಕುಳಿಗಳು ಮತ್ತು ಒಸಡು ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
/newsfirstlive-kannada/media/media_files/2025/10/15/brushing-2-2025-10-15-13-50-05.jpg)
ವರದಿ ಏನು ಹೇಳುತ್ತದೆ..?
ಡಯಾಬೆಟೋಲಾಜಿಯಾದಲ್ಲಿ (Diabetologia) ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಆಗಾಗ ಹಲ್ಲು ಉಜ್ಜುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹಲ್ಲು ತಿಕ್ಕೋರಿಗೆ ಮಧುಮೇಹ ಬರುವ ಅಪಾಯವು ಶೇಕಡಾ 8 ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ದಂತ ಕಾಯಿಲೆ ಇರೋರಿಗೆ ಮಧುಮೇಹ ಬರುವ ಅಪಾಯ ಶೇಕಡಾ 9 ರಷ್ಟು ಹೆಚ್ಚಾಗಿದೆ. 15 ಅಥವಾ ಅದಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡವರಿಗೆ ಶೇಕಡಾ 21 ರಷ್ಟು ಹೆಚ್ಚಿನ ಅಪಾಯವಿದೆ.
/newsfirstlive-kannada/media/media_files/2025/10/15/brushing-2025-10-15-13-50-21.jpg)
ಹಲ್ಲು ಉಜ್ಜುವುದು ಹೇಗೆ..?
ಹಲ್ಲುಜ್ಜುವುದು ಎಂದರೆ ಬ್ರಷ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವುದಲ್ಲ. ಅದಕ್ಕೆ ಸರಿಯಾದ ತಂತ್ರವಿದೆ. ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ಶಿಫಾರಸಿನ ಪ್ರಕಾರ, ನೀವು ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಫ್ಲೋರೈಡ್ ಟೂತ್ಪೇಸ್ಟ್ನೊಂದಿಗೆ ಹಲ್ಲುಜ್ಜಬೇಕು. ಸರಿಯಾಗಿ ಹಲ್ಲುಜ್ಜುವುದರಿಂದ ಪ್ಲೇಕ್ ರಚನೆ ತಡೆಯಬಹುದು. ಪ್ಲೇಕ್ ಬ್ಯಾಕ್ಟೀರಿಯಾದ ಪದರವಾಗಿದೆ. ಇದು ಹಲ್ಲು ಕೊಳೆತ ಮತ್ತು ಒಸಡು ಕಾಯಿಲೆಗೆ ಕಾರಣವಾಗುತ್ತದೆ.
/newsfirstlive-kannada/media/media_files/2025/10/15/brushing-3-2025-10-15-13-48-34.jpg)
ಬ್ರಷ್ ಹೇಗಿರಬೇಕು?
ಮಧ್ಯಮ ಅಥವಾ ಮೃದುವಾದ ಬಿರುಗೂದಲುಗಳನ್ನು ಹೊಂದಿರುವ ಬ್ರಷ್ ಬಳಸುವಂತೆ NHS ಶಿಫಾರಸು ಮಾಡುತ್ತದೆ. ಹಲ್ಲುಗಳನ್ನು ಸರಿಯಾಗಿ ಉಜ್ಜಿ ಆರೈಕೆ ಮಾಡಿದರೆ ಅನೇಕ ದೀರ್ಘಕಾಲದ ಕಾಯಿಲೆಗಳು ದೂರವಾಗುತ್ತವೆ.