ಮಕ್ಕಳಲ್ಲಿ ಹೆಚ್ಚಾದ ಮೊಬೈಲ್ ಅಡಿಕ್ಷನ್: ನಿಮ್ಹಾನ್ಸ್ ಮೊರೆ ಹೋದ ಪೋಷಕರು, ವೈದ್ಯರು ಹೇಳಿದ್ದೇನು?

ಎಳೆಯ ಮಕ್ಕಳಲ್ಲಿ ಕೋವಿಡ್ ಬಳಿಕ ಮೊಬೈಲ್ ಅಡಿಕ್ಷನ್ ಹೆಚ್ಚಾಗಿದೆ. ಊಟ ಮಾಡಲು ಕೂಡ ಮಕ್ಕಳಿಗೆ ಮೊಬೈಲ್ ಕೊಡಬೇಕಾದ ಸ್ಥಿತಿ ಬಂದಿದೆ. ಮೊಬೈಲ್ ಅಡಿಕ್ಷನ್ ನಿಂದ ಹೈರಣಾದ ಪೋಷಕರು ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ಮೊರೆ ಹೋಗಿದ್ದಾರೆ. ವೈದ್ಯರು ಇದಕ್ಕೆ ಕೆಲ ಪರಿಹಾರ ಸೂಚಿಸಿದ್ದಾರೆ. ಅದೇನು? ಇಲ್ಲಿದೆ ಓದಿ.

author-image
Chandramohan
ಅತಿಯಾದ ಸ್ಕ್ರೀನ್ ಟೈಮ್ ತುಂಬಾ ಡೇಂಜರ್; ನಿಮ್ಮ ಮಗುವಿನ ಮೇಲೆ ಎಷ್ಟು ಕೆಟ್ಟ ಪರಿಣಾಮ ಆಗ್ತದೆ?

ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ನಿಂದ ಹತ್ತಾರು ಸಮಸ್ಯೆ!

Advertisment
  • ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ನಿಂದ ಹತ್ತಾರು ಸಮಸ್ಯೆ!
  • ಮಕ್ಕಳ ಮೊಬೈಲ್ ಅಡಿಕ್ಷನ್ ತಪ್ಪಿಸಲು ನಿಮ್ಹಾನ್ಸ್ ವೈದ್ಯರ ಮೊರೆ ಹೋದ ಪೋಷಕರು

ಊಟ ಮಾಡಿಲ್ಲಾ ಅಂದ್ರು ಮೊಬೈಲ್​, ಹಠ ಮಾಡಿದ್ರು ಮೊಬೈಲ್​, ಮಲಗೋದಕ್ಕೂ ಮೊಬೈಲ್​, ಕೈ ಕಟ್ಟಿ ಕೂರೋದಕ್ಕೂ ಮೊಬೈಲ್​.. ಹೀಗೆ ಪೇರೆಂಟ್ಸ್​​ ಮಕ್ಕಳಿಗೆ ಮೊಬೈಲ್​ ಕೊಟ್ಟು ಕೊಟ್ಟು ಇವತ್ತು ಮೊಬೈಲ್​ ಅಡಿಕ್ಷನ್​ ಮಕ್ಕಳಲ್ಲಿ ಹೆಚ್ಚಾಗಿದೆ. ಇದ್ರೀಂದ ಬೇಸತ್ತ ಪೋಷಕರು ಇದೀಗ ನಿಮಾನ್ಸ್ ಮೊರೆ ಹೋಗ್ತಿದ್ದಾರೆ. ಮಕ್ಕಳ ಮೊಬೈಲ್​ ಗೀಳು ಕಡಿಮೆ ಮಾಡಲು ಇದೀಗ ‘ಶಟ್’ ಓಪನ್​ ಆಗಿದೆ. ಹಾಗಿದ್ರೆ ಏನಿದು ಬನ್ನಿ ನೋಡೋಣ. 
ಇದು ಮೊಬೈಲ್​​ ಯುಗ.. ಜಾಲತಾಣಗಳ ಜಮಾನ.. ಇಂದು ಮೊಬೈಲ್ ಪೋನ್ ಇಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಫೇಸ್‌ಬುಕ್‌, ವಾಟ್ಸಪ್, ಯೂಟೂಬ್, ಶೇರ್​ಚಾಟ್, ಇನ್​​ಸ್ಟಾಗ್ರಾಮ್ ‌ಹೀಗೆ ಪಟ್ಟಿ ಮಾಡುತ್ತಾ ನಿಂತರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. ಅಷ್ಟರಮಟ್ಟಿಗೆ ಮೊಬೈಲ್​ ಫೋನ್​ಗಳಿಗೆ ದಾಸರಾಗಿದ್ದೇವೆ.. ಪೋಷಕರ ಮೊಬೈಲ್ ಗೀಳು ಮಕ್ಕಳ ಮೇಲೆ ಕೂಡ  ಪರಿಣಾಮ ಬೀರುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮಗುಗೆ ಊಟ ಮಾಡಿಸೋದ್ರಿಂದ ಮಲಗಿಸೋವರೆಗೂ  ಎಲ್ಲದಕ್ಕೂ ಮಕ್ಕಳ ಕೈನಲ್ಲಿ ಮೊಬೈಲ್​ ಕೊಟ್ಟು ಬಿಡ್ತಾರೆ ಪೋಷಕರು. ಇದೀಗ ಮಾಡಿದ್ದೋಣ ಮರಾಯ ಅನ್ನೋ ಹಾಗೆ ಮಕ್ಕಳ ಮೊಬೈಲ್​ ಅಡಿಕ್ಷನ್ ಪೋಷಕರಿಗೆ ಗೋಳು ಕೊಡ್ತಿದೆ. 

ಕೋವಿಡ್ ಬಳಿಕ ಹೆಚ್ಚಾಯ್ತು ಮಕ್ಕಳಲ್ಲಿ ಮೊಬೈಲ್ ಗೀಳು
ಅಡಿಕ್ಷನ್ ದೂರಾಗಿಸಲು ‘ನಿಮಾನ್ಸ್’ ಮೊರೆ ಹೋದ ಪೋಷಕರು
ಹೌದು, ಮಕ್ಕಳನ್ನ ಸುಮ್ಮನಿರಿಸೋಕೆ ಅಂತ ಕೈನಲ್ಲಿ ಇಟ್ಟ ಮೊಬೈಲ್​ ಗೀಳಾಗಿ ಬದಲಾಗಿದ್ದು, ಪೋಷಕರಿಗೆ ಗೋಳು ತರಿಸಿದೆ. ಶಾಕಿಂಗ್​ ಅಂದ್ರೆ ಗೇಮಿಂಗ್, ಅಶ್ಲೀಲ ಚಟಗಳಿಗೂ ಮಕ್ಕಳು ಅಡಿಕ್ಟ್​ ಆಗ್ತಿದ್ದಾರೆ. ಇದೀಗ ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಕಂಗಾಲಾದ 8000ಕ್ಕೂ ಹೆಚ್ಚು ಪೋಷಕರು ಅಡಿಕ್ಷನ್ ದೂರವಾಗಿಸಲು ನಿಮಾನ್ಸ್ ಮೊರೆ ಹೋಗ್ತಿದ್ದಾರೆ. ಇನ್ನ  ಈ ಸಮಸ್ಯೆಗೆ ಪರಿಹಾರವಾಗಿ ನಿಮ್ಹಾನ್ಸ್ ‘ಶಟ್’ ಎಂಬ ಕ್ಲಿನಿಕ್ ಮೂಲಕ ಪೋಷಕರಿಗೆ ಆನ್‌ಲೈನ್ ತರಬೇತಿಯನ್ನ ಕೂಡ ಶುರು ಮಾಡಿದೆ. 
ಏನಿದು ‘ಶಟ್’..?
ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ ಮೂಲಕ ಸೆಷನ್​
ಸಾಮಾಜಿಕ ಜಾಲತಾಣದ ಅಡಿಕ್ಷನ್ ದೂರ ಮಾಡಲು ತರಬೇತಿ 
ಅಡಿಕ್ಷನ್ ಬಿಡಿಸುವುದು ಹೇಗೆ ಅಂತ ಪೋಷಕರಿಗೆ ಆನ್ಲೈನ್ ಸೆಷನ್
ಗೇಮಿಂಗ್ & ಅಶ್ಲೀಲತೆಯ ವ್ಯಸನ ಮುಕ್ತರಾಗುವ ಬಗ್ಗೆಯೂ ತರಬೇತಿ
ಮುಂದಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್​ಗಳಲ್ಲಿ ಆರಂಭ 
ಕಳೆದ ವರ್ಷ ಆರಂಭವಾದ ಈ ಸೆಶನ್​ಗೆ ಎಲ್ಲೆಡೆ ಉತ್ತಮ ಸ್ಪಂದನೆ 
(ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ ಅಂದ್ರೆ ಶಟ್​ ಹೆಸರಲ್ಲಿ ಸೆಷನ್​ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣದ ಅಡಿಕ್ಷನ್ ದೂರ ಮಾಡಲು ಈ ಮೂಲಕ ತರಬೇತಿ ನೀಡಲಾಗುತ್ತದೆ. ಅಡಿಕ್ಷನ್ ಬಿಡಿಸುವುದು ಹೇಗೆ ಅಂತ ಪೋಷಕರಿಗೆ ಆನ್ಲೈನ್ ಸೆಷನ್ ನಡೆಸಲಾಗುತ್ತದೆ. ಗೇಮಿಂಗ್ & ಅಶ್ಲೀಲತೆಯ ವ್ಯಸನ ಮುಕ್ತರಾಗುವ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್​ಗಳಲ್ಲಿ ಈ ಸೆಷನ್​ ಆರಂಭವಾಗಲಿದೆ. ಕಳೆದ ವರ್ಷ ಆರಂಭವಾದ ಈ ಸೆಶನ್​ಗೆ ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ) 


ಮೊಬೈಲ್ ಅಡಿಕ್ಷನ್ ಸಿಂಟಮ್ಸ್ ಏನು?


ಮೊಬೈಲ್, ಗೇಮ್, ಡ್ರಗ್ಸ್ ಮೇಲೆ ಅತಿಯಾದ ಆಸಕ್ತಿ
ಅದೇ ಕೆಲಸವನ್ನು ಮತ್ತೆ ಮತ್ತೆ ಮಾಡೋದು 
ಆ ವಸ್ತು ಕೊಡದಿದ್ದರೆ ಕೋಪ ಮತ್ತು ಚಡಪಡಿಕೆ
ಒಂಟಿತನ, ಮನೆಯವರ ಜೊತೆ ಮಾತನಾಡಲ್ಲ
ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದು
ರಾತ್ರಿ ಹೊತ್ತು ನಿದ್ದೆ ಸಮಸ್ಯೆ ಕಾಡುವುದು
ಊಟದಲ್ಲಿ ಆಸಕ್ತಿ ಕಡಿಮೆಯಾಗುವುದು 
ಹಣ ಕಳವು ಮಾಡುವುದು/ಸುಳ್ಳು ಹೇಳುವುದು
ಗಮನ ಕೇಂದ್ರೀಕರಿಸಲು ಕಷ್ಟ ಸಾಧ್ಯವಾಗುವುದು
ಮನೋಭಾವದಲ್ಲಿ ಅಚಾನಕ್ ಬದಲಾವಣೆಯಾಗುವುದು


(ಮೊಬೈಲ್, ಗೇಮ್, ಡ್ರಗ್ಸ್ ಅಥವಾ ಯಾವುದಾದರೂ ವಸ್ತುವಿನ ಮೇಲೆ ಅತಿಯಾದ ಆಸಕ್ತಿ ಉಂಟಾಗುತ್ತದೆ. ಅದೇ ಕೆಲಸವನ್ನು ಮತ್ತೆ ಮತ್ತೆ ಮಾಡೋದು. ಆ ವಸ್ತು ಕೊಡದಿದ್ದರೆ ಕೋಪ, ಚಡಪಡಿಕೆ ಹೆಚ್ಚಾಗೋದು. ಒಂಟಿತನ, ಮನೆಯವರ ಜೊತೆ ಮಾತನಾಡದೇ ಇರುವುದು. ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದು. ನಿದ್ರೆ ಸಮಸ್ಯೆ ಉಂಟಾಗುವುದು. ಊಟದಲ್ಲಿ ಆಸಕ್ತಿ ಕಡಿಮೆಯಾಗುವುದು ಅಥವಾ ಹೆಚ್ಚು ತಿನ್ನುವುದು. ಹಣ ಕಳವು ಮಾಡುವುದು ಅಥವಾ ಸುಳ್ಳು ಹೇಳುವುದು. ಗಮನ ಕೇಂದ್ರೀಕರಿಸಲು ಕಷ್ಟ ಸಾಧ್ಯವಾಗುವುದು. ಮನೋಭಾವದಲ್ಲಿ ಅಚಾನಕ್ ಬದಲಾವಣೆಯಾಗುವುದು). 

child digital addiction

ಅತಿಯಾದ್ರೆ ಅಮೃತ ಕೂಡ ವಿಷ ಆಗುತ್ತೆ ಅಂತಾರೆ. ಸೋ ಪೋಷಕರೇ ದಯವಿಟ್ಟು ಗಮನಿಸಿ. ನಿಮ್ಮ ನಡೆಯೇ ಮುಂದೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತೆ. ಹೀಗಾಗಿ ಆದಷ್ಟು ಮಕ್ಕಳನ್ನ ಮೊಬೈಲ್​ನಿಂದ ದೂರವಿಡಿ. 


ಚಂದನಾ ಶೆಟ್ಟಿ, ನ್ಯೂಸ್​ಫಸ್ಟ್​, ಬೆಂಗಳೂರು 

children children mobile addiction
Advertisment