/newsfirstlive-kannada/media/media_files/2025/09/08/kerala-infant-mortality-rate-2025-09-08-17-58-56.jpg)
ಕೇರಳದಲ್ಲಿ ನವಜಾತ ಶಿಶು ಮರಣ ಪ್ರಮಾಣ 5 ಕ್ಕೆ ಇಳಿಕೆ!
ಕೇರಳ ರಾಜ್ಯದ ಶಿಶು ಮರಣ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕೇರಳದಲ್ಲಿ ಅಮೆರಿಕಾಗಿಂತಲೂ ಕಡಿಮೆ ಪ್ರಮಾಣದಲ್ಲಿ ಶಿಶುಗಳ ಸಾವುಗಳು ವರದಿಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.. ಕೇರಳದಲ್ಲಿ ಪ್ರತಿ 1000 ಮಗುವಿನ ಜನನಗಳಲ್ಲಿ ಕೇವಲ 5 ಮಕ್ಕಳು ಸಾವನಪ್ಪುತ್ತಿದ್ದಾರೆ ಎಂದು ಮಾದರಿ ನೋಂದಣಿ ಸಂಸ್ಥೆಯ ವರದಿ ತಿಳಿಸಿದೆ.
ಸೆಪ್ಟೆಂಬರ್​1ರ ಸೋಮವಾರ ಬಿಡುಗಡೆಯಾದ ರಾಷ್ಟ್ರೀಯ ಶಿಶು ಮರಣ ದರ ವರದಿ ಪ್ರಕಾರ ದೇಶದಲ್ಲಿ ಶಿಶುಗಳ ಮರಣ ಪ್ರಮಾಣವು 25 ಇದೆ. ಅಂದರೆ ಜನಿಸುವ ಪ್ರತಿ 1000 ಜೀವಂತ ಶಿಶುಗಳಲ್ಲಿ 25 ಮಗು ಸಾವನ್ನಪ್ಪುತ್ತಿವೆ. ಈ ಸರಾಸರಿಗೆ ಹೋಲಿಸಿದ್ರೆ ಕೇರಳ ರಾಜ್ಯದಲ್ಲಿನ ಶಿಶು ಮರಣ ಪ್ರಮಾಣವು ಐದು ಪಟ್ಟು ಕಡಿಮೆಯಾಗಿದೆ.
ಇನ್ನು, ಈ ಬಗ್ಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಮಾತನಾಡಿ, ಕೇರಳದಲ್ಲಿ ಶಿಶು ಮರಣ ಪ್ರಮಾಣವು ದೇಶದಲ್ಲೇ ಅತ್ಯಂತ ಕಡಿಮೆ. ಮಾತ್ರವಲ್ಲ, ಅಮೆರಿಕಕ್ಕಿಂತಲೂ ಕಡಿಮೆಯಾಗಿದೆ. ಕೇರಳದಲ್ಲಿನ ಶಿಶು ಮರಣ ಪ್ರಮಾಣವು 2022ರಲ್ಲಿ 1000ಕ್ಕೆ 5.6 ಇತ್ತು. ಈಗ, 5ಕ್ಕೆ ಇಳಿದಿದೆ. ದೇಶದ ಉಳಿದ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ 28 ಆಗಿದ್ರೆ, ನಗರ ಪ್ರದೇಶಗಳಲ್ಲಿ 19 ರಷ್ಟಿದೆ. ಆದ್ರೆ ಕೇರಳದ ಶಿಶು ಮರಣ ಪ್ರಮಾಣದಲ್ಲಿ ನಗರ-ಗ್ರಾಮೀಣ ವ್ಯತ್ಯಾಸವಿಲ್ಲ. ಇದು ಕೇರಳದ ಜನರು ಯಾವುದೇ ನಗರ-ಗ್ರಾಮೀಣ ಅಂತರವಿಲ್ಲದೆ ಆರೋಗ್ಯ ಸೇವೆಗಳನ್ನು ಪಡೆಯಬಹುದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/09/08/kerala-infant-mortality-rate-veena-george-2025-09-08-18-04-02.jpg)
ಕೇರಳದ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್
ಇನ್ನು, ರಾಜ್ಯ ಆರ್ಥಿಕ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ, ಕೇರಳದ ಶಿಶು ಮರಣ ಪ್ರಮಾಣ 2010ರಲ್ಲಿ 7.42 ರಷ್ಟಿತ್ತು. 2012 ರಲ್ಲಿ ಈ ಅಂಕಿ ಅಂಶವು 8.2ಕ್ಕೆ ಏರಿತ್ತು. ಅಂದಿನಿಂದ, ಆರೋಗ್ಯ ಕ್ಷೇತ್ರದಲ್ಲಿ ತೆಗೆದುಕೊಳ್ಳಲಾದ ಅಗತ್ಯ ಕ್ರಮಗಳಿಂದಾಗಿ, ಈಗ ಶಿಶು ಮರಣ ಪ್ರಮಾಣವು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us