/newsfirstlive-kannada/media/media_files/2025/12/15/heart-attacks-risk-in-winter-2025-12-15-16-26-36.jpg)
ಚಳಿಗಾಲಕ್ಕೂ ಹೃದಯಘಾತಕ್ಕೂ ಏನಾದ್ರೂ ಲಿಂಕ್ ಇದೆಯೇ? ಹೌದು ಎನ್ನುತ್ತಿದ್ದಾರೆ ಬೆಂಗಳೂರು ನಗರದ ವೈದ್ಯರು.
ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಕೇಸ್ ಹೆಚ್ಚಾಗುತ್ತಾವೆ. ಹೀಗಾಗಿ ಚಳಿಗಾಲದಲ್ಲಿ ಜನರು ತಮ್ಮ ಹೃದಯದ ಆರೋಗ್ಯದ ಕಡೆಗೆ ಗಮನ ನೀಡಬೇಕು.
ಮುಂದಿನ ನಾಲ್ಕು ದಿನಗಳ ಕಾಲ ಬೆಳಗ್ಗೆ 3ರಿಂದ 8 ಗಂಟೆಯವರೆಗೆ ಹೆಚ್ಚಿನ ಚಳಿ ಇರಲಿದೆ. ಆ ಸಮಯದಲ್ಲಿ ಮನುಷ್ಯನ ದೇಹದ ರಕ್ತದ ಒತ್ತಡ ಹೆಚ್ಚಿರುವ ಸಾಧ್ಯತೆ ಇರಲಿದೆ. ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣಗಳು ಶೇ.10ರಿಂದ 15ರಷ್ಟು ಹೆಚ್ಚಾಗುವ ಆತಂಕ ಇದೆ. ಮಕ್ಕಳು ಹಾಗೂ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಾವೆ ಅನ್ನುವ ಮಾಹಿತಿ ಇದೆ. ಚಳಿಗಾಲದಲ್ಲಿ ಬೆಳಗಿನ ವಾಕ್ ತಪ್ಪಿಸಿ, ಸಂಜೆಯ ವಾಕಿಂಗ್ ಉತ್ತಮ ಎಂದು ವೈದ್ಯರು ಹೇಳಿದ್ದಾರೆ. ಕರಿದ ಆಹಾರ ಸೇವನೆ ತಪ್ಪಿಸಿ, ಆರೋಗ್ಯಕರ ಜೀವನಶೈಲಿ ಅನುಸರಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಚಳಿಗಾಲದ ವೇಳೆ ಮನುಷ್ಯರ ದೇಹದ ರಕ್ತನಾಳಗಳು ಬ್ಲಾಕ್ ಆಗುತ್ತಾವೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತೆ. ಇದರಿಂದ ಹೃದಯಾಘಾತದ ಸಂಭವ ಕೂಡ ಇರುತ್ತೆ. ಇನ್ನೂ ಚಳಿಗಾಲದಲ್ಲಿ ಜನರ ದೈಹಿಕ ಚಟುವಟಿಕೆ ಸ್ಪಲ್ಪ ಕಡಿಮೆ ಇರುತ್ತೆ. ಅನಾರೋಗ್ಯಕರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತೆ. ಜೊತೆಗೆ ವಾಯು ಮಾಲಿನ್ಯದಿಂದ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us