/newsfirstlive-kannada/media/media_files/2025/09/08/cancer-vaccine-in-russia04-2025-09-08-18-56-18.jpg)
ರಷ್ಯಾದಲ್ಲಿ ಕ್ಯಾನ್ಸರ್ ಲಸಿಕೆಯ ಸಂಶೋಧನೆ ಯಶಸ್ವಿ!
ಜಗತ್ತಿನಾದ್ಯಂತ ಹರಡಿರುವ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು..ಕ್ಯಾನ್ಸರ್ ಎಂಬ ಶಬ್ದ ಕೇಳಿದ್ರೆ ಸಾಕು ಒಂದು ರೀತಿ ಭಯ, ಆತಂಕ ಮೂಡುತ್ತೆ .ಈ ಕಾಯಿಲೆಗೆ ಪುರುಷರು ಮಹಿಳೆಯರು ಮಕ್ಕಳು, ವಯಸ್ಸಾದವರೂ ಎನ್ನುವ ಭೇದ ಭಾವವಿಲ್ಲ. ಅಷ್ಟೊಂದು ಭಯಾನಕ ಕಾಯಿಲೆ ಇದು. ಒಮ್ಮೆ ದೇಹವನ್ನು ಆವರಿಸಿದ್ರೆ, ಕೊನೆಗೆ ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಕಟುಸತ್ಯ.
ವಿವಿಧ ಬಗೆಯ ಕ್ಯಾನ್ಸರ್ಗೆ ವಿಶ್ವಾದ್ಯಂತ ವಾರ್ಷಿಕ ಸುಮಾರು 1 ಕೋಟಿ ಜನ ಬಲಿಯಾಗ್ತಿದ್ದಾರೆ. ಇದು ಒಂದೆಡೆಯಾದ್ರೆ ಪ್ರತಿವರ್ಷ ಸುಮಾರು 20 ಲಕ್ಷ ಜನರು ಇದರ ಸುಳಿಗೆ ಸಿಲುಕ್ತಿದ್ದಾರೆ. ಆಹಾರ, ಲೈಫ್ಸ್ಟೈಲ್, ಮಾಲಿನ್ಯದ ಕಾರಣದಿಂದ ದಿನದಿಂದ ದಿನಕ್ಕೆ ಕ್ಯಾನ್ಸರ್ಗೆ ಗುರಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಸದ್ಯ ರಷ್ಯಾ ವಿಜ್ಞಾನಿಗಳು ಕ್ಯಾನ್ಸರ್ಗೆ ಯಶಸ್ವಿ ಲಸಿಕೆ ಕಂಡುಹಿಡಿಯೋ ಮೂಲಕ ಮನುಕುಲದ ಪಾಲಿಗೆ ಹೊಸ ಆಶಾಭಾವ ಮೂಢಿಸಿದ್ದಾರೆ. ಪ್ರಾಣಾಂತಕವಾಗುವ ಕ್ಯಾನ್ಸರ್ ರೋಗವನ್ನ ಆರಂಭದಲ್ಲೇ ಕೊಲ್ಲುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
48 ರೋಗಿಗಳ ವಿರುದ್ಧ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ಯಶಸ್ವಿಯಾಗಿರುದಾಗಿ ಸಂಶೋಧಕರು ಪ್ರಕಟಿಸಿದ್ದಾರೆ.‘ಎಂಟೆರೊಮಿಕ್ಸ್ ವ್ಯಾಕ್ಸಿನ್’ ಹೆಸರಿನ ‘ಎಂಆರ್ಎನ್ಎ’ ಆಧರಿತ ಕ್ಯಾನ್ಸರ್ ಲಸಿಕೆ ಇದಾಗಿದೆ. ಕೋವಿಡ್ ವೈರಸ್ ವಿರುದ್ಧ ವಿಶ್ವದ ಮೊದಲ ಲಸಿಕೆ ‘ಸ್ಪುಟ್ನಿಕ್’ ಅಭಿವೃದ್ದಿಪಡಿಸಿದ್ದ ಸಂಶೋಧನ ಸಂಸ್ಥೆಯೇ ಇದನ್ನೂ ಕಂಡುಹಿಡಿದಿದೆ.
ಆರಂಭಿಕವಾಗಿ ಕರುಳು ಕ್ಯಾನ್ಸರ್ಗೆಂದು ಅಭಿವೃದ್ದಿಪಡಿಸಲಾದ ಈ ಲಸಿಕೆಯು ಇದೀಗ ಶ್ವಾಸಕೋಶದ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಮೆಂಧೋಜೀರಕ ಗ್ರಂಥಿ ಕ್ಯಾನ್ಸರ್ ಸೇರಿದಂತೆ ಬಹುತೇಕ ಎಲ್ಲಾ ಬಗೆಯ ಕ್ಯಾನ್ಸರ್ಗಳಿಂದಳೂ ರಕ್ಷಣೆ ನೀಡುತ್ತದೆ. ಲಸಿಕೆಯು ಯಾವುದೇ ಅಡ್ಡ ಪರಿಣಾಮವನ್ನ ಬೀರಿಲ್ಲವೆಂದು ಸಂಶೋಧಕರು ತಿಳಿಸಿದ್ದಾರೆ.
ಪ್ರಸ್ತುತ ಮಾನವನ ಮೇಲೆ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು, ಕ್ಯಾನ್ಸರ್ ರೋಗಿಗಳಿಗೆ ಪ್ರಯೋಗಾರ್ಥ ಉಚಿತವಾಗಿ ನೀಡಲಾಗುತ್ತಿದೆ. ಸದ್ಯ ರಷ್ಯಾ ಸರ್ಕಾರದ ಅಧಿಕೃತ ಅನುಮೋದನೆ ಬಾಕಿ ಇದೆ. ಕ್ಯಾನ್ಸರ್ ಲಸಿಕೆಯು ಶೇ.100 ರಷ್ಟು ಸಕ್ಸಸ್ ಆಗಿದೆ ಎಂದು ರಷ್ಯಾ ಹೇಳಿದೆ.
ರಷ್ಯಾದಲ್ಲಿ ಕ್ಯಾನ್ಸರ್ ಲಸಿಕೆಯ ಸಂಶೋಧನೆ ಯಶಸ್ವಿಯಾಗಿರುವುದರಿಂದ ಇದರ ಲಾಭ ಭಾರತದ ಕ್ಯಾನ್ಸರ್ ರೋಗಿಗಳಿಗೆ ಸಿಗುವ ನಿರೀಕ್ಷೆ ಇದೆ. ಭಾರತ ಹಾಗೂ ರಷ್ಯಾ ಪರಸ್ಪರ ಸ್ನೇಹಿ ರಾಷ್ಟ್ರಗಳು. ಅಮೆರಿಕಾದ ಒತ್ತಡಕ್ಕೂ ಬಗ್ಗದೇ ಭಾರತವು ರಷ್ಯಾದ ಜೊತೆ ಕಚ್ಚಾತೈಲ ಖರೀದಿ ಮುಂದುವರಿಸಿದೆ. ಹೀಗಾಗಿ ಭಾರತಕ್ಕೂ ರಷ್ಯಾ ದೇಶವು ಕ್ಯಾನ್ಸರ್ ಲಸಿಕೆಯನ್ನು ಮನವಿ ಮಾಡಿಕೊಂಡರೇ, ಪೂರೈಸಬಹುದು. ಭಾರತದಲ್ಲೂ ಲಕ್ಷಾಂತರ ಮಂದಿ ಪ್ರತಿ ವರ್ಷ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೂನ್ಯಕ್ಕೆ ಇಳಿಸಲಾಗಿದೆ.
ಈಗ ರಷ್ಯಾದಲ್ಲಿ ಈ ವರ್ಷವೇ ಕ್ಯಾನ್ಸರ್ ಲಸಿಕೆಯನ್ನು ರೋಗಿಗಳಿಗೆ ನೀಡಲಾಗುತ್ತಂತೆ. ರಷ್ಯಾದ ಸಂಶೋಧನೆ ಸಂಸ್ಥೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಲಸಿಕೆಗಳನ್ನು ಅಭಿವೃದ್ದಿಪಡಿಸಿದರೇ, ಅದನ್ನು ಭಾರತಕ್ಕೆ ನೀಡಿ ಎಂದು ಭಾರತ ಸರ್ಕಾರ ಮನವಿ ಮಾಡಿಕೊಳ್ಳಬಹುದು. ಭಾರತದ ಪಾಲಿಗೂ ಇದು ಆಶಾಕಿರಣ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.