/newsfirstlive-kannada/media/media_files/2025/07/31/dinesh-gundurao-2025-07-31-21-40-03.jpg)
ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಸಿರಫ್ ಸೇವನೆಯಿಂದ ಎಳೆಯ ಕಂದಮ್ಮನಗಳು ಪ್ರಾಣ ಕಳೆದುಕೊಂಡಿವೆ. ಜೀವ ಉಳಿಸುತ್ತೆ ಎಂದು ಕೊಟ್ಟ ಕಫ್ ಸಿರಫ್ ಪ್ರಾಣ ತೆಗೆದಿದೆ. ಇದರಿಂದಾಗಿ ಈಗ ರಾಜ್ಯದಲ್ಲೂ ಸಿರಫ್ ಬಳಕೆ ಬಗ್ಗೆ ಪೋಷಕರು ಮತ್ತು ವೈದ್ಯರಿಗೆ ಗೈಡ್ ಲೈನ್ಸ್ ನೀಡಲು ರಾಜ್ಯದ ಆರೋಗ್ಯ ಇಲಾಖೆ ಪ್ಲ್ಯಾನ್ ಮಾಡಿದೆ. ಆರೋಗ್ಯ ಇಲಾಖೆ ಸಿದ್ದಪಡಿಸಿರುವ ಗೈಡ್ ಲೈನ್ಸ್ ವಿವರ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ. ಅದನ್ನು ಇಲ್ಲಿ ನೀಡುತ್ತಿದ್ದೇವೆ.
ಮಕ್ಕಳಿಗೆ, ಖಾಸಗಿ ಆಸ್ಪತ್ರೆಗಳಿಗೆ, ಪೋಷಕರಿಗೆ ಪ್ರತ್ಯೇಕ ಗೈಡ್ ಲೈನ್ಸ್ ಅನ್ನು ನೀಡಲಾಗುತ್ತಿದೆ.
ಹೇಗಿರಲಿದೆ ಗೈಡ್‌ಲೈನ್ಸ್?
ಮಕ್ಕಳ ಸಿರಪ್ ವಿತರಣೆಗೆ ಗೈಡ್ ಲೈನ್ಸ್ ಏನು?
1. ಕಫ ಸಪರೇಟ್ ಮಾಡುವ ಸಿರಪ್ ಕೊಡಬಾರದು
2. ಕಫ ಹೊರಗಡೆ ತರುವುದಕ್ಕೆ ರೇರ್ ಕೇಸ್ ಇದ್ದರೆ ಜಾಗ್ರತೆಯಿಂದ ಸಿರಪ್ ಕೊಡಬಹುದು
3. ಓರಲ್ ಮೆಡಿಸನ್ ಮಕ್ಕಳಿಗೆ ಕೊಡಬಾರದು, ಡಾಕ್ಟರ್ ಕೂಡ ಪ್ರಿಸ್ಕ್ಷನ್ (ಚೀಟಿ) ಬರೆಯಬಾರದು
4. ಎರಡರಿಂದ ಎರೂವರೆ ವರ್ಷದ ಮಕ್ಕಳಿಗೆ ಸಿರಪ್ ಕೊಡಬಾರದು
5. ವೀಸಿಂಗ್ ಆದರೆ ಓರಲ್ ಮೆಡಿಸನ್ ಕೊಡಬಾರದು
6. ವೀಸಿಂಗ್‌ಗೆ ಮಾತ್ರೆ ಮತ್ತು ಇನ್ ಹೇಲರ್ ಕೊಡಬೇಕು, ಓರಲ್ ಕೊಡಬಾರದು. ವೀಸಿಂಗ್ ಅಂದ್ರೆ ಮೂಗು ಕಟ್ಟಿಕೊಂಡಂತಾದಾಗ ಉಸಿರಾಟದ ವೇಳೆ ಉಂಟಾಗುವ ಜೋರು ಶಬ್ಧ.
ಖಾಸಗಿ ಆಸ್ಪತ್ರೆ, ಸಣ್ಣ ಖಾಸಗಿ ಕ್ಲಿನಿಕ್‌ಗಳಿಗೆ ಏನು ಮಾರ್ಗಸೂಚಿ?
1. ಡೆತ್ ಮುಂಚಿತವಾಗಿ ಕಾಂಪ್ಲಿಕೇಷನ್ ಆಗಿರುತ್ತೆ ಅಂತಹ ಕೇಸ್ ರಿಪೋರ್ಟ್ ಆಗಬೇಕು
2. ಖಾಸಗಿ ಕ್ಲಿನಿಕ್ ಗಳು ಸಿರಪ್ ಬರೆಯಬಾರದು
3. ಖಾಸಗಿ ಆಸ್ಫತ್ರೆಯವರು ಗಂಭೀರ ಪ್ರಕರಣಗಳನ್ನ ವರದಿ ಮಾಡಬೇಕು.
4. ಫಾರ್ಮಸಿ ಸಾಫ್ಟ್‌ವೇರ್ ಸೆಂಟ್ರಲ್ ಮಾಡಬೇಕು
5. ಮಾನಿಟರಿಂಗ್ ಸ್ಟ್ರಾಂಗ್ ಆಗಬೇಕು
ಮಕ್ಕಳಿಗೆ ಸಿರಪ್ ಕೊಡುವ ಮುನ್ನ ಪೋಷಕರೇನು ಮಾಡಬೇಕು?
1. ಸಿರಪ್ ಓಪನ್ ಮಾಡಿದ ತಕ್ಷಣ ಒಂದು ತಿಂಗಳ ಒಳಗಡೆ ಬಳಸಬೇಕು
2. ಸಿರಪ್ ಅನ್ನು ಓಪನ್ ಮಾಡಿದ ನಂತ್ರ 6 ತಿಂಗಳು, 1 ವರ್ಷದವರೆಗೂ ಬಳಸಬಾರದು
3. ಡಾಕ್ಟರ್ ಕೊಟ್ಟಿದ್ದಾರೆ ಅಂತಹ ಡಾಕ್ಟರ್ ಅನ್ನು ಕಾಂಟ್ಯಾಕ್ಟ್ ಮಾಡದೇ ಅದೇ ಸಿರಪ್ ಕೊಂಡುಕೊಂಡು ಬಳಸಬಾರದು
4. ಕಳೆದ ಬಾರಿ ಡಾಕ್ಟರ್ ಸೂಚಿಸಿದ್ದ ಸಿರಪ್ ಅನ್ನು ಪದೇ ಪದೇ ಬಳಸಬಾರದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.