/newsfirstlive-kannada/media/media_files/2025/09/05/khara-mixtures-colour-2025-09-05-12-26-23.jpg)
ಖಾರಾ ಮಿಕ್ಚರ್ ನಲ್ಲೂ ಕೃತಕ ಬಣ್ಣ ಬಳಕೆ ಧೃಢ!
ಸಿಹಿ ತಿಂಡಿಗಳ ಜೊತೆಗೆ, ಮಿಕ್ಚರ್‌ನಲ್ಲೂ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಖಾರ ತಿಂಡಿ ತಿನಿಸುಗಳಿಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಧೃಡಪಟ್ಟಿದೆ. ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರೀಕ್ಷೆಯಲ್ಲಿ ಧೃಡಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಅಧಿಕೃತ ವರದಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಕೈ ಸೇರಲಿದೆ. ಮಿಕ್ಚರ್ ಸೇರಿ ಖಾರಾ ತಿಂಡಿಗಳಲ್ಲೂ ಕೃತಕ ಬಣ್ಣ ಬಳಕೆ ವಿಚಾರ ಈಗ ಧೃಢಪಟ್ಟಿದೆ. ಕೃತಕ ಬಣ್ಣ ಬಳಕೆ ಧೃಡವಾಗಿರುವ ಹಿನ್ನೆಲೆ ಕ್ರಮಕ್ಕೆ ಚಿಂತನೆಯನ್ನು ನಡೆಸಲಾಗುತ್ತಿದೆ. ವರದಿ ಸಲ್ಲಿಕೆ ನಂತರ ತೀರ್ಮಾನದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಮಾಹಿತಿ ನೀಡುವರು.
ಖಾರಾ ಪದಾರ್ಥಗಳಲ್ಲೂ ಕೃತಕ ಬಣ್ಣ ಬಳಕೆ ಧೃಢ!
ಆಹಾರ ಪದಾರ್ಥಗಳಲ್ಲಿ ಅಸುರಕ್ಷಿತ ಹಾಗೂ ನಿಷೇಧಿತ ಕೃತಕ ಬಣ್ಣಗಳ ಬಳಕೆ ಪತ್ತೆಗೆ ಸಂಬಂಧಿಸಿದಂತೆ ಅಭಿಯಾನವನ್ನು ಕರ್ನಾಟಕದ ಸರ್ಕಾರದ ಆರೋಗ್ಯ ಇಲಾಖೆ ನಡೆಸುತ್ತಿದೆ. 2024–25 ಹಾಗೂ 2025-–26ನೇ ಸಾಲಿಗೆ 19 ಅಭಿಯಾನಗಳನ್ನು ಇಲಾಖೆ ನಡೆಸಿದೆ. ವಿವಿಧ ಆಹಾರ ತಿನಿಸುಗಳ ಸಾವಿರಾರು ಮಾದರಿಗಳನ್ನು ಸಂಗ್ರಹಿಸಿದೆ . ಈ ಮಾದರಿಗಳನ್ನು ಇಲಾಖೆಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ಅಸುರಕ್ಷಿತ ಮಾದರಿಗಳನ್ನು ಪತ್ತೆ ಮಾಡಲಾಗಿದೆ. ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಕೃತಕ ಬಣ್ಣ ಬಳಕೆ ಮಾಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. 2014ರ ಫೆಬ್ರವರಿ ತಿಂಗಳಿಂದ ಈ ವಿಶೇಷ ಅಭಿಯಾನ ಪ್ರಾರಂಭವಾಗಿದೆ. 2025ರ ಮೇ ಅಂತ್ಯದ ವೇಳೆಗೆ 19 ಬಗೆಯ ತಿನಿಸು ಹಾಗೂ ಪಾನೀಯಗಳ 3,787 ಮಾದರಿಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಮಾದರಿಗಳನ್ನು ಬೀದಿ ಬದಿ ಆಹಾರದ ಮಳಿಗೆಗಳು ಹಾಗೂ ಹೋಟೆಲ್‌ಗಳಿಂದ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ 374 ಮಾದರಿಗಳು ಅಸುರಕ್ಷಿತವೆಂಬ ವರದಿಗಳು ಬಂದಿವೆ. ಜಿಲೇಬಿ, ಕೇಕ್, ಖೋವಾ, ಚಟ್ನಿಗಳು, ಸಾಸ್‌ಗಳು, ಕಬಾಬ್ ಪರೀಕ್ಷೆ ಮಾಡಲಾಗಿದೆ. ಶರಬತ್ತು, ಐಸ್‌ಕ್ರೀಂ, ಹಣ್ಣಿನ ಜ್ಯೂಸ್‌ಗಳು, ತಂಪು ಪಾನೀಯಗಳ ಮಾದರಿಗಳನ್ನೂ ಸಂಗ್ರಹಿಸಿ, ವಿಶ್ಲೇಷಣೆ ಮಾಡಲಾಗಿದೆ. ಗೋಬಿ ಮಂಚೂರಿ ಮತ್ತು ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿರ್ಬಂಧಿಸಿ ಆದೇಶ. ಬಾಂಬೆ ಮಿಠಾಯಿಗಳಿಗೆ ಸಹ ಕೃತಕ ಬಣ್ಣ ಬಳಕೆ ನಿರ್ಬಂಧಿಸಿ, ಆದೇಶ ಹೊರಡಿಸಿದೆ.