/newsfirstlive-kannada/media/post_attachments/wp-content/uploads/2023/06/Cool-weather.jpg)
ಬೆಂಗಳೂರಿನಲ್ಲಿ ಚಳಿ ಚಳಿ ತಾಳೆನು ಈ ಚಳಿಯ ವಾತಾವರಣ!
ಸದ್ಯಕ್ಕೆ ಸಿಲಿಕಾನ್ ಸಿಟಿ ವೆದರ್​ಗೂ ಊಟಿ ವೆದರ್​ಗೂ ಏನ್ ಡಿಫರೆನ್ಸ್ ಇಲ್ಲ ಬಿಡಿ.. ಜನ ಮನೆಯಲ್ಲಿ ಇರಲಾಗದೇ ಹೊರಗೆ ಹೋಗೋಕೂ ಆಗದೇ ಜನ ಗಢ ಗಢ ಅಂತ ನಡುಗ್ತಿದ್ದಾರೆ. ಸ್ಯಾಡ್ ಪಾರ್ಟ್ ಏನಂದ್ರೆ, ರೋಗಗಳು ವಕ್ಕರಿಸೋದೇ ಈ ಟೈಮಲ್ಲಿ.. ಹೀಗಾಗಿ, ಈ ನಡುಗಿಸೋ ಚಳಿಯಲ್ಲಿ ನಮ್ಮನ್ನ ನಾವು ಕಾಪಾಡಿಕೊಳ್ಳೋದು ಹೇಗೆ? ಅಂತ ಅಂದರೇ ಈ ರಿಪೋರ್ಟ್ ನೋಡಿ..
ಆಸ್ಪತ್ರೆ ಹೊರಗೆ ರೋಗಿಗಳ ನರಳಾಟ.. ಕೆಮ್ಮು ಶೀತಾ.. ನೆಗಡಿ.. ಜ್ವರ.. ಒಂದಾ.. ಎರಡಾ.. ಅಯ್ಯೋ ದೇವ್ರೇ.. ಚಳಿ ತಾಳಲು ಆಗುತ್ತಿಲ್ಲ.. ಕೆಮ್ಮು ನಿಲ್ತಾ ಇಲ್ಲ.. ನೆಗಡಿ ಕಾಟ ಮತ್ತೊಂದ್ಕಡೆ.. ಈ ದೃಶ್ಯಗಳೆಲ್ಲಾ ಕಂಡು ಬಂದಿದ್ದು ನಗರದ ಕೆ.ಸಿ ಜನ್ರಲ್ ಆಸ್ಪತ್ರೆಯಲ್ಲಿ..
ಬೆಂಗಳೂರಲ್ಲಿ ಶುರು ಚಳಿ.. ಜೊತೆಗೆ ಆರೋಗ್ಯದ ಹಾವಳಿ
ಕೆಮ್ಮು, ಶೀತ ಅಂತ ಆಸ್ಪತ್ರೆಗೆ ಬಳಿಗೆ ಬರ್ತಿರೋ ರೋಗಿಗಳು
ಸಿಲಿಕಾನ್ ಸಿಟಿ ಈಗ ಕೂಲ್ ಸಿಟಿ ಆಗೋಗಿದೆ.. ಚಳಿ ತಾಳಲು ಸಾಧ್ಯವಾಗದೇ ಜನ ಗಢ ಗಢ ಅಂತ ನಡುಗುತ್ತಿದ್ದಾರೆ.. ಸ್ವೆಟರ್, ಜಾಕೆಟ್​ ಇಲ್ಲದೇ ಹೊರಗೆ ಕಾಲಿಡೋಕೂ ಆಗ್ತಿಲ್ಲ.. ಅಷ್ಟರ ಮಟ್ಟಿಗೆ ಚಳಿ ಇದೆ. ವಿಪರೀತ ಚಳಿ ಕಾಟ ಒಂದ್ಕಡೆಯಾದ್ರೆ, ರೋಗಗಳು ಹಾವಳಿ ಮತ್ತೊಂದ್ಕಡೆ.. ಹೀಗಾಗಿ, ಈ ಟೈಂನಲ್ಲಿ ಹೆಚ್ಚು ಕೇರ್ ತೆಗೆದುಕೊಳ್ಳೋದು ಅಗತ್ಯ ಅಂತಿದ್ದಾರೆ ಡಾಕ್ಟರ್​..
ಹಾಗಾದ್ರೆ, ಈ ಕಿರಿಕಿರಿ ಚಳಿಯಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? ಅಂದ್ರಾ?
ಚಳಿಗೆ ಮುನ್ನೆಚ್ಚರಿಕೆ ಏನು?
ಬೆಚ್ಚಗಿನ ಅಹಾರ ಸೇವನೆ ಮಾಡೋದು ಉತ್ತಮ
ಹೊರಗೆ ಹೋಗುವಾಗ ಸ್ವೆಟರ್ ಧರಿಸೋದು ಒಳ್ಳೇದು
ಅತಿಯಾಗಿ ಸ್ಮೋಕಿಂಗ್ ಮಾಡುವುದು ಒಳ್ಳೇದಲ್ಲ
ಪ್ರಿಡ್ಜ್​ನಲ್ಲಿ ಇಟ್ಟಿರೋ ಆಹಾರ ತಿನ್ನೋದು ಒಳ್ಳೇದಲ್ಲ
ಮುಂಜಾನೆ, ರಾತ್ರಿ ಹೊರಗೆ ಓಡಾಟ ಅವಾಯ್ಡ್ ಮಾಡ್ಬೇಕು
ಟ್ರಾವೆಲ್ ಮಾಡುವಾಗ ದಪ್ಪನೆ ಬಟ್ಟೆ ಧರಿಸೋದು ಒಳ್ಳೆದು
ಇಮ್ಯೂನಿಟಿ ಪವರ್ ಕಮ್ಮಿ ಇದ್ದವರಿಗೆ ಹೆಚ್ಚು ಕೇರ್ ಅಗತ್ಯ
ಮೂರು ದಿನಕ್ಕೂ ಹೆಚ್ಚು ಕಾಲ ಜ್ವರ ಇದ್ರೆ ವೈದರ ಭೇಟಿ
(ಬೆಚ್ಚಗಿನ ಆಹಾರ ಸೇವನೆ ಮಾಡೋದು ಉತ್ತಮ.. ಜೊತೆಗೆ ಹೊರಗೆ ಹೋಗುವಾಗ ಸ್ವೆಟರ್​ ಧರಿಸೋದು ಬಹಳ ಒಳ್ಳೇದು. ತುಂಬಾ ಮುಖ್ಯವಾಗಿ ಹೇಳೋದಾದ್ರೆ, ಈ ಸಮಯಲ್ಲಿ ಅತಿಯಾದ ಸ್ಮೇಕಿಂಗ್ ಮಾಡೋದು ಒಳ್ಳೇದಲ್ಲ.. ಫ್ರಿಡ್ಜ್​ನಲ್ಲಿ ಇಟ್ಟಿರೋ ಆಹಾರ ತಿನ್ನೋದು ಒಳ್ಳೇದಲ್ಲ.. ಮುಂಜಾನೆ, ರಾತ್ರಿ ಹೊರಗೆ ಓಡಾಟ ಅವಾಯ್ಡ್​ ಮಾಡಬೇಕು.. ಹಾಗೇ ಟ್ರಾವೆಲ್ ಮಾಡುವಾಗ ದಪ್ಪನೆ ಬಟ್ಟೆ ಧರಿಸೋದು ಒಳ್ಳೇದು.. ಇನ್ನು, ಇಮ್ಯೂನಿಟಿ ಪವರ್ ಕಮ್ಮಿ ಇದ್ದವರಿಗೆ ಹೆಚ್ಚು ಕೇರ್​​ ಅಗತ್ಯ.. ಮೂರು ದಿನಕ್ಕೂ ಹೆಚ್ಚು ಕಾಲ ಜ್ವರ ಇದ್ರೆ ವೈದ್ಯರನ್ನ ಭೇಟಿ ಮಾಡೋದು ಒಳ್ಳೇದು..)
/filters:format(webp)/newsfirstlive-kannada/media/media_files/2025/12/01/cold-weather-in-bangalore-2025-12-01-17-58-24.jpg)
ಸೆಲ್ಪ್​ ಲವ್ ಇಸ್ ದ ಬೆಸ್ಟ್​ ಲವ್ ಅಂತಾರಲ್ಲ ಹಾಗೇ.. ಸೆಲ್ಫ್​ ಕೇರ್​ ಅನ್ನೋದು ತುಂಬಾ ಮುಖ್ಯ.. ಹೊರಗೆ ಹೋಗುವಾಗ ಸ್ವೆಟರ್ ಹಾಕಿಕೊಳ್ಳಿ.. ಜೋಪಾನವಾಗಿರಿ..
ಚಂದನ ಶೆಟ್ಟಿ, ನ್ಯೂಸ್​ಫಸ್ಟ್​, ಬೆಂಗಳೂರು
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us