Advertisment

ತೂಕ ಹೆಚ್ಚಾಗ್ತೀನಿ ಎಂದು ತಿನ್ನೋದು ಬಿಟ್ಟಿದ್ದೀರಾ? ಹಾಗಾದ್ರೆ ಈ ಆಹಾರ ಸೇವಿಸಿ ಫಿಟ್​ ಆಗಿರಿ..!

author-image
Ganesh Nachikethu
Updated On
ತೂಕ ಹೆಚ್ಚಾಗ್ತೀನಿ ಎಂದು ತಿನ್ನೋದು ಬಿಟ್ಟಿದ್ದೀರಾ? ಹಾಗಾದ್ರೆ ಈ ಆಹಾರ ಸೇವಿಸಿ ಫಿಟ್​ ಆಗಿರಿ..!
Advertisment
  • ಹೊಟ್ಟೆ ತುಂಬಾ ತಿನ್ನೋ ಆಸೆ; ಆದ್ರೆ ತೂಕ ಹೆಚ್ಚಾಗೋ ಭಯ..!
  • ತೂಕ ಹೆಚ್ಚಾಗುತ್ತೆ ಅಂತ ಹೊಟ್ಟೆ ಹಸಿಕೊಂಡ್ರೆ ಆರೋಗ್ಯಕ್ಕೆ ಅಪಾಯ
  • ಈ ಆಹಾರ ಎಷ್ಟು ತಿಂದ್ರೂ ಯಾವುದೇ ಕಾರಣಕ್ಕೂ ತೂಕ ಹೆಚ್ಚಾಗಲ್ಲ

ಹೊಟ್ಟೆ ತುಂಬಾ ತಿನ್ನಲು ಆಸೆ. ಆದರೆ ತೂಕ ಹೆಚ್ಚಾಗುತ್ತದೆ, ದೇಹದ ಗಾತ್ರ ಬದಲಾಗುತ್ತದೆ ಎಂದು ತಿನ್ನೋಕೆ ಭಯ ಬೀಳುವವರೇ ಜಾಸ್ತಿ. ಆದರೆ ಇಂತಹ ಸಮಸ್ಯೆಗಳಿಗೆ ಫುಲ್​ ಸ್ಟಾಪ್ ನೀಡುವ ಆಹಾರಗಳಿವೆ. ಆದರೆ ಅವುಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲವಷ್ಟೆ. ಒಂದು ವೇಳೆ ನಿಮಗೂ ಆರೋಗ್ಯದ ಬಗ್ಗೆ ಕಾಳಜಿ ಇದ್ದು, ದೇಹವನ್ನು ಸಮತೋಲನದಲ್ಲಿಡುವ ಆರೋಗ್ಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ.

Advertisment

ಓಟ್ಸ್​

ಇದು ಆರೋಗ್ಯಕರ ಆಹಾರವಾಗಿದ್ದು, ಕಾರ್ಬೋಹೈಡ್ರೇಟನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ಆರೋಗ್ಯವು ಸಮತೋಲನದಲ್ಲಿ ಇರುತ್ತದೆ. ಓಟ್ಸ್​ ಜೊತೆಗೆ ಹಣ್ಣು-ಹಾಲನ್ನು ಸೇವಿಸುದರಿಂದ ಹಸಿವನ್ನು ನೀಗಿಸಬಹುದಾಗಿದೆ.

ಪಾಪ್​ ಕಾರ್ನ್​

ತೂಕ ಹೆಚ್ಚಾಗಬಾರದು. ದೇಹದ ತೂಕ ಸಮತೋಲನದಲ್ಲಿರಬೇಕು ಎಂದು ಬಯಸುವವರಿಗೆ ಪಾಪ್​ ಕಾರ್ನ್​ ಕೂಡ ಬೆಸ್ಟ್​ ಫುಡ್​. ಇದು ಕಡಿಮೆ ಕ್ಯಾಲರಿ ಹೊಂದಿರುವ ಕಾರಣ ತೂಕ ಹೆಚ್ಚಾಗುವುದಿಲ್ಲ.

ಅವಕಾಡೊ

ಹಸಿವಾದಾಗ ನಿಜವಾಗಲೂ ತಡೆಯೋಕೆ ಆಗಲ್ಲ. ಹಾಗಂತ ಆಹಾರ ಬಿಡುವುದು ಎಷ್ಟು ಸರಿ?. ಒಂದು ವೇಳೆ ಆರೋಗ್ಯದ ಮೇಲೆ ಕಾಳಜಿ ಇದ್ದವರು ಅವಕಾಡೊ ಸೇವಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ತೀರಾ ಕಡಿಮೆ.

Advertisment

publive-image

ಮೊಸರು

ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರದಲ್ಲಿ ಇದು ಕೂಡ ಒಂದು. ಆದರೆ ಕೆನೆ ತೆಗೆದ ಮೊಸರು ಸೇವಿಸುವುದು ಬೆಸ್ಟ್​​. ಲಸ್ಸಿ ಮಾಡಿ ಕುಡಿದರೆ ಹಸಿವು ನೀಗಿಸಬಹುದು.

ಪೀನಟ್​ ಬಟರ್​

ಇದು ಪ್ರೋಟಿನ್​ ಹೊಂದಿರುತ್ತವೆ ನಿಜ. ಆದರೆ ದೇಹದ ತೂಕ ಹೆಚ್ಚಾಗುವುದಿಲ್ಲ. ಇದನ್ನು ಮಕ್ಕಳಿಗೆ ನೀಡುವುದರಿಂದ ಶಕ್ತಿ ವೃದ್ಧಿಸುತ್ತದೆ. ದೊಡ್ಡವರು ಕೂಡ ಇದನ್ನು ತಿನ್ನಬಹುದು.

ಹಣ್ಣುಗಳು

ಹಸಿವು ಮತ್ತು ತೂಕ ಹೆಚ್ಚಾಗದಂತೆ ಜಾಗರೂಕತೆವಹಿಸುವವರು ಹಣ್ಣುಗಳನ್ನು ಸೇವಿಸುವುದು ಬೆಸ್ಟ್​. ಕಾಲಘಟ್ಟಕ್ಕೆ ತಕ್ಕಂತೆ ಬೆಳೆಯುವ ಹಣ್ಣುಗಳಿಂದ ದೇಹದ ಆರೋಗ್ಯದ ಜೊತೆಗೆ ತೂಕವನ್ನು ಸಮತೋಲನದಲ್ಲಿ ಇಡಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment