/newsfirstlive-kannada/media/post_attachments/wp-content/uploads/2024/10/SSP-PRASANN-KUMAR-2.jpg)
ದರ್ಶನ್‌ಗೆ ಜಾಮೀನು ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದು ಕೋರ್ಟ್ ತೀರ್ಮಾನ ಮಾಡುತ್ತೆ. ಬಹುಶಃ ಇನ್ನು ಎರಡು-ಮೂರು ದಿನದಲ್ಲಿ ಅಂತಹದ್ದೊಂದು ತೀರ್ಪು ಹೊರಬರಬಹುದು. ಆದ್ರೆ, ಇಬ್ಬರು ಲಾಯರ್‌ಗಳ ವಾದ, ಪ್ರತಿವಾದ ಮಾತ್ರ ಭರ್ಜರಿಯಾಗಿತ್ತು. ಹಾಗೇ ಪ್ರಸನ್ನ ಕುಮಾರ್ ಅವ್ರು ಕೊಟ್ಟಿರೋ ಇನ್ನಷ್ಟು ಕೌಂಟರ್‌ಗಳು ಹೇಗಿದ್ವು ಅನ್ನೋದರ ವಿವರ ಈ ಲೇಖನದಲ್ಲಿದೆ.
ಇದನ್ನೂ ಓದಿ:ಈತನ ತಂದೆ ಇಮ್ರಾನ್ ಹಶ್ಮಿ, ತಾಯಿ ಸನ್ನಿ ಲಿಯೋನ್! ನಗುವ ಮೊದಲು ಈ ಸ್ಟೋರಿ ಓದಿ
ಕೋರ್ಟ್‌ನಲ್ಲಿ ವಾದ ಪ್ರತಿವಾದ ಇದ್ದೇ ಇರುತ್ತೆ. ಆದ್ರೆ, ದರ್ಶನ್ ಕೇಸ್ ಹೈವೋಲ್ಟೇಜ್ ಕೇಸ್ ಆಗಿತ್ತು. ಇಬ್ಬರು ದಿಗ್ಗಜ ಲಾಯರ್‌ಗಳು ಅಖಾಡಕ್ಕಿಳಿದಿದ್ರು. ಹೀಗಾಗಿ ಭಾರೀ ಕುತೂಹಲ ಸೃಷ್ಟಿಯಾಗಿತ್ತು. ದರ್ಶನ್‌ಗೆ ಬೇಲ್ ಬೇಕು ಅಂತಾ ಸಿವಿ ನಾಗೇಶ್ ಅವ್ರು ಯಾವ ಪಾಯಿಂಟ್‌ಗಳನ್ನು ಇಟ್ಟುಕೊಂಡು ವಾದ ಮಾಡ್ತಾರೆ? ಅದ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವ್ರು ಯಾವ ರೀತಿಯಲ್ಲಿ ಕೌಂಟರ್ ಕೊಡ್ತಾರೆ ಅನ್ನೋ ಕುತೂಹಲವಿಲ್ಲ. ನಿರೀಕ್ಷೆಯಂತೆ ಇಬ್ಬರೂ ವಕೀಲರು ಪ್ರಬಲವಾದ ಮಾಡಿದ್ದಾರೆ.
ಕೌಂಟರ್-01
ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷ್ಯ ಉಲ್ಲೇಖ ಅಗತ್ಯವಿಲ್ಲ!
ಕೋರ್ಟ್‌ನಲ್ಲಿ ಪ್ರತಿಯೊಂದು ಸಾಕ್ಷ್ಯವೂ ಮುಖ್ಯವಾಗುತ್ತೆ. ಪೊಲೀಸರು ಸ್ವಲ್ಪ ಎಡವಟ್ಟು ಮಾಡಿಕೊಂಡರೂ ಅದು ವಕೀಲರ ಪ್ರಬಲವಾದಕ್ಕೆ ಶಕ್ತಿ ಸಿಕ್ಕಂತೆ ಆಗುತ್ತೆ. ಹೀಗಾಗಿ ಗಂಭೀರ ಪ್ರಕರಣಗಳಲ್ಲಿ ಪೊಲೀಸರು ಭಾರೀ ಜಾಗೃತೆಯಿಂದ ತನಿಖೆ ಮಾಡುತ್ತಾರೆ. ಸಾಕ್ಷ್ಯಗಳ ಗುಡ್ಡೆಯನ್ನೇ ಹಾಕ್ತಾರೆ. ಅಷ್ಟಕ್ಕೂ ಈ ಮಾತು ಏಕೆ ಅಂದ್ರೆ, ದರ್ಶನ್ ಕೇಸ್‌ನಲ್ಲಿ ಪೊಲೀಸರು ಕೋರ್ಟ್‌ಗೆ ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಆದರೆ, ಆ ಅರ್ಜಿಗಳಲ್ಲಿ ಸಾಕ್ಷ್ಯಗಳ ಹೆಸರನ್ನು ಉಲ್ಲೇಖ ಮಾಡಿಲ್ಲ ಯಾಕೆ ಅಂತ ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್ ಪ್ರಶ್ನೆ ಮಾಡಿದ್ರು. ಅಷ್ಟೇ ಅಲ್ಲ, ಇದು ಅನುಮಾನ ಹುಟ್ಟಿಸುತ್ತಿದೆ ಅನ್ನೋ ರೀತಿಯಲ್ಲಿ ಉಲ್ಲೇಖ ಮಾಡಿದ್ದರು. ನಾಗೇಶ ಅವರ ಈ ವಾದಕ್ಕೆ ಪ್ರತಿವಾದ ಮಾಡಿದ ಎಸ್‌ಪಿಪಿ ಪ್ರಸನ್ನ ಕುಮಾರ್, ರಿಮ್ಯಾಂಡ್ ಅರ್ಜಿಯಲ್ಲಿ ಕೇವಲ ಗ್ರೌಂಡ್ ಮಾತ್ರ ಹೇಳಬೇಕು. ಆದರೆ ಇಡೀ ಅಂಶಗಳು ರಿಮ್ಯಾಂಡ್ ಅರ್ಜಿಯಲ್ಲಿ ಇರಬೇಕು ಅಂತಿಲ್ಲ. ಅದನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿದೆ. ರಿಮ್ಯಾಂಡ್ ಅರ್ಜಿಯ ಜೊತೆ ಕೇಸ್ ಡೈರಿಯ ಸಲ್ಲಿಕೆ ಮಾಡಲಾಗಿದೆ. ಪ್ರತಿ ಬಾರಿ ಹಾಜರು ಪಡಿಸಿದಾಗಲೂ ಸಲ್ಲಿಕೆ ಮಾಡಲಾಗಿದೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ಇರಬೇಕು ಅನ್ನೋದು ಅಗತ್ಯವಿಲ್ಲ. ಎಲ್ಲಾ ಸಮಯದಲ್ಲಿ ಉಲ್ಲೇಖಿಸಬೇಕು ಅಂತೆನಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ರೇಣುಕಾ ಮರ್ಮಾಂಗದ ಫೋಟೋ, ದರ್ಶನ್ ಪ್ಯಾಂಟ್ ಬಿಚ್ಚು ಅಂತ ಹೇಳಿದ್ದಕ್ಕೆ ಸಾಕ್ಷಿ ಇದೆ; SPP ಪ್ರಸನ್ನ ಕುಮಾರ್
ಕೌಂಟರ್2
ಮಣ್ಣಿನ ಶಂಕೆಗೆ ಪ್ರತಿವಾದ ಕೊಟ್ರು!
ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ಏನ್ ಮಾಡಿದ್ರು ಅಂದ್ರೆ ದರ್ಶನ್ ಶೂ ವಶಕ್ಕೆ ಪಡೆಯಲಾಗಿತ್ತು. ಆ ಶೂವಿನಲ್ಲಿರೋ ಮಣ್ಣಿಗೂ? ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದ ಸ್ಥಳದಲ್ಲಿರೋ ಮಣ್ಣಿಗೂ ಹೋಲಿಕೆಯಾಗಿತ್ತು. ಮಣ್ಣನ್ನು ಲ್ಯಾಬ್‌ಗೆ ಕಳುಹಿಸಿದಾಗ ಪತ್ತೆಯಾಗಿದೆ ಅನ್ನೋದನ್ನು ಉಲ್ಲೇಖಿಸಿದ್ರು. ಆದ್ರೆ, ಇದೇ ವಿಚಾರದಲ್ಲಿ ವಾದ ಮಾಡಿದ್ದ ಸಿವಿ ನಾಗೇಶ್ ಪಂಚನಾಮೆಯಲ್ಲಿ ಪಟ್ಟಣಗೆರೆಯಲ್ಲಿ ಮಣ್ಣನ್ನು ವಶಕ್ಕೆ ಪಡೆಯಲಾಗಿದೆ ಅಂತಾ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಆದ್ರೆ, ಶೂವಿನಲ್ಲಿರೋ ಮಣ್ಣಿಗೂ? ಆ ಸ್ಥಳದ ಮಣ್ಣಿಗೂ ಹೋಲಿಕೆ ಇದೆ ಅನ್ನೋ ರಿಪೋರ್ಟ್ ಕೊಡಲಾಗಿದೆ. ಹಾಗಾದ್ರೆ, ಶೂವಿನಲ್ಲಿ ಯಾವ್ ರೀತಿಯ ಮಣ್ಣು ಪತ್ತೆಯಾಗಿದೆಯೋ? ಅದೇ ರೀತಿಯ ಮಣ್ಣನ್ನು ಸಂಗ್ರಹ ಮಾಡಿ ಕೊಟ್ಟಿರಬಹುದಲ್ಲ ಅನ್ನೋ ಅನುಮಾನ ವ್ಯಕ್ತಪಡಿಸಿದ್ರು. ಅದಕ್ಕೂ ಪ್ರಸನ್ನ ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ
ಶೂನಲ್ಲಿರೋ ಮಣ್ಣನ್ನು ಚೆಕ್ ಮಾಡಲಾಗಿದೆ
ಪೊಲೀಸರು ಶೂ ವಶಪಡಿಸಿಕೊಂಡಾಗ ಅದರಲ್ಲಿರೋ ಮಣ್ಣನ್ನು ನೋಡಿದ್ದಾರೆ. ಆನಂತರ ಆ ಮಣ್ಣಿಗೂ? ಪಟ್ಟಣಗೆರೆ ಸ್ಥಳದಲ್ಲಿ ಕೃತ್ಯ ನಡೆದಿರೋ ಮಣ್ಣಿಗೂ? ಹೋಲಿಕೆ ಇದೆಯಾ ಅನ್ನೋದನ್ನು ಚೆಕ್ ಮಾಡಲು ಲ್ಯಾಬ್‌ಗೆ ಕಳುಹಿಸಿದ್ದಾರೆ. ಅದರಲ್ಲಿ ಹೋಲಿಕೆಯಾಗಿದೆ. ಹೀಗಾಗಿ ಪಂಚನಾಮೆ ಸಂದರ್ಭದಲ್ಲಿ ಮಣ್ಣನ್ನು ವಶಕ್ಕೆ ಪಡೆದಿದ್ದು ಅಲ್ಲ ಎಂದು ಎಸ್‌ಪಿಪಿ ಕೌಂಟರ್ ಕೊಟ್ಟಿದ್ದಾರೆ.
ಕೌಂಟರ್-3
ಸಾಕ್ಷ್ಯಕ್ಕೆ ಬೇಕು ಅಂತಾನೇ ಹಣ ಸಂಗ್ರಹ!
ರೇಣುಕಾಸ್ವಾಮಿ ಹತ್ಯೆಯ ನಂತರ ದರ್ಶನ್ ಮನೆಯನ್ನು ಪೊಲೀಸರು ಪರಿಶೀಲನೆ ಮಾಡಿದರು ಆ ವೇಳೆ ಲಕ್ಷ ಲಕ್ಷ ಹಣ ಪತ್ತೆಯಾಗಿತ್ತು. ಆ ಹಣದಲ್ಲಿ ಸ್ವಲ್ಪ ಹಣವನ್ನು ಸಾಕ್ಷ್ಯನಾಶಕ್ಕೆ ಬಳಸಿದರು ಅನ್ನೋ ಉಲ್ಲೇಖವಿದೆ. ಈ ಬಗ್ಗೆ ಪೊಲೀಸ್ರು ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ದರ್ಶನ್ ಮೋಹನ್ ರಾಜ್ ಎಂಬವರ ಬಳಿ ಸಾಕ್ಷ್ಯ ನಾಶಕ್ಕಾಗಿಯೇ ಹಣ ಪಡಿದುಕೊಂಡಿದ್ದರು ಅನ್ನೋ ಉಲ್ಲೇಖ ಮಾಡಿದ್ರು. ಇದನ್ನು ಸಿವಿ ನಾಗೇಶ್ ಅವ್ರು ಪ್ರಶ್ನೆ ಮಾಡಿದ್ರು. ಮೋಹನ್ ರಾಜ್ ಅವರಿಗೆ ದರ್ಶನ್ ಹಣ ಪಡೆದಿದ್ದು ಮೇ 1ನೇ ತಾರೀಕು. ಇದನ್ನು ದರ್ಶನ್ ಮತ್ತು ಮೋಹನ್ ರಾಜ್ ಇಬ್ಬರು ಒಪ್ಪಿಕೊಂಡಿದ್ದಾರೆ. ಆದರೆ, ಮೇ 1ಕ್ಕೆ ರೇಣುಕಾಸ್ವಾಮಿ ಯಾರು ಅನ್ನೋದು ದರ್ಶನ್‌ಗೆ ಗೊತ್ತೆ ಇರಲಿಲ್ಲ ಅಂತ ಹೇಳಿದ್ರು. ಇದಕ್ಕೆ ಪ್ರಸನ್ನ ಕುಮಾರ್ ಪ್ರತಿವಾದಿಸಿದ್ದೇ ಅದ್ಭುತ
ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿದೆ!
ಆರೋಪಿ ದರ್ಶನ್ ಮೋಹನ್ ರಾಜ್ ಬಳಿ ಹಣ ಪಡೆದಿದ್ದಾರೆ. ಪರಿಚಯ ಇರೋದ್ರಿಂದ ಹಣ ಪಡೆದಿದ್ದೇನೆ ಅಂತಾ ದರ್ಶನ್ ಹೇಳಿದ್ದಾರೆ. ಹಾಗೆಯೇ, ಮುಂದೆ ಸಾಕ್ಷಿಗಳಿಗೆ ಬೇಕಾಗುತ್ತೆ ಅಂತಾ ಇಟ್ಟುಕೊಂಡಿರುತ್ತೇನೆ ಅಂತಾ ದರ್ಶನ್ ತಮ್ಮ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ.
ಕೌಂಟರ್-4
ಮಹಜರಿನಲ್ಲಿ ಕೊಂಬೆ ಮೇಲೆ ರಕ್ತ ಪತ್ತೆ!
ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಅಮಾನುಷ ಹಲ್ಲೆ ನಡೆಸಿದೆ ಅನ್ನೋದು ವರದಿಯಾಗಿತ್ತು. ಹಾಗೇ ಪೊಲೀಸರು ಸ್ಥಳ ಮಹಜರಿಗೆ ಹೋದಾಗ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲು ಬಳಸಿರೋ ದೊಣ್ಣೆ, ಮರದ ಕೊಂಬೆ, ನೀರಿನ ಬಾಟಲ್, ಹಗ್ಗವನ್ನು ವಶಕ್ಕೆ ಪಡೆದಿದ್ದರು. ಹಾಗೆಯೇ ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಮರದ ಕೊಂಬೆಯನ್ನು ಬಳಸಲಾಗಿದ್ದು, ಅದರಲ್ಲಿ ರಕ್ತದ ಕಲೆ ಇತ್ತು ಅನ್ನೋದನ್ನು ಸ್ಥಳ ಮಹಜರು ವೇಳೆ ಪೊಲೀಸರು ಉಲ್ಲೇಖ ಮಾಡಿದ್ರು. ಅದನ್ನೇ ಕೋರ್ಟ್‌ಗೂ ಸಲ್ಲಿಕೆ ಮಾಡಿದ್ರು. ಆದರೆ, ಲ್ಯಾಬ್‌ನಲ್ಲಿ ಮರದ ಕೊಂಬೆಯಲ್ಲಿ ರಕ್ತ ಪತ್ತೆಯಾಗಿಲ್ಲ ಅಂತ ಬಂದಿತ್ತು. ಇದನ್ನು ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್ರವರು ನ್ಯಾಯಾಧೀಶರ ಗಮನಕ್ಕೆ ತಂದಿದ್ರು. ಇದೀಗ ಇದಕ್ಕೆ ಪ್ರಸನ್ನ ಕುಮಾರ್ ಅವರು ಕೌಂಟರ್ ಕೊಟ್ಟಿದ್ದಾರೆ.
ED ಈಡಿ ಮಹಜರ್ ಅನರ್ಹ ಆಗಲ್ಲ.
96 ವಸ್ತುಗಳನ್ನು FSL ಗೆ ಕಳಿಸಲಾಗಿತ್ತು. ಅದರಲ್ಲಿ ಅನೇಕ ವಸ್ತುಗಳಲ್ಲಿ ರಕ್ತ ಪತ್ತೆಯಾಗಿದೆ. ಸ್ಥಳ ಮಹಜರಿನಲ್ಲಿ ಪೊಲೀಸ್ರು ಉಲ್ಲೇಖ ಮಾಡಿದಕ್ಕೂ? ಲ್ಯಾಬ್ ವರದಿ ಬಂದಿರೋದಕ್ಕೂ ಸರಿ ಇದೆ. ಆದ್ರೆ, 2 ಮರದ ಕೊಂಬೆ ಮೇಲೆ ರಕ್ತ ಪತ್ತೆಯಾಗಿಲ್ಲ ಅನ್ನೋದು ಇದೆ. ಆದರೆ, ಆ ಎರಡು ಕೊಂಬೆಯಲ್ಲಿ ಮಾತ್ರ ಪತ್ತೆಯಾಗಿಲ್ಲ ಅಂದ ಮಾತ್ರಕ್ಕೆ ಮಹಜರ್ ವೇಳೆ ಪತ್ತೆಯಾಗಿಲ್ಲ ಅಂತಾ ಹೇಳಲು ಆಗಲ್ಲ. ED ಮಹಜರ್ ಅನರ್ಹ ಆಗಲ್ಲ ಎಂದು ಪ್ರತಿವಾದ ಮಂಡನೆ ಮಾಡಿದ್ರು.
ಕೌಂಟರ್-5
ತರ್ಜುಮೆ ಮಾಡಿಸಲಾಗಿದೆ
ವಕೀಲರು ಚಾರ್ಜ್‌ಶೀಟ್ ಅನ್ನು ಅದೆಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್ ಪ್ರತಿಯೊಂದು ಸಾಕ್ಷಿಯನ್ನು ಗಂಭೀರವಾಗಿ ನೋಡಿದ್ದಾರೆ. ಅಲ್ಲಿರೋ ದೋಷಗಳನ್ನೇ ನ್ಯಾಯಾಧೀಶರ ಮುಂದೆ ಇಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಾಣಿಸೋದು ಅಂದ್ರೆ ಸಾಕ್ಷಿ ನಂಬರ್ 69 ನರೇಂದ್ರ ಸಿಂಗ್. ಆತನಿಗೆ ಕನ್ನಡ ಬರೋದಿಲ್ಲ. ಹಾಗಿದ್ರೆ, ಹೇಗೆ ಕನ್ನಡ ಸ್ಟೇಟ್‌ಮೆಂಟ್ ಕೊಡಿಸಿದ್ದೀರಿ ಅಂತಾ ಸಿವಿ ನಾಗೇಶ್ ಅವ್ರು ಪ್ರಶ್ನೆ ಮಾಡಿದ್ರು. ಇನ್ನು ಇದಕ್ಕೂ ಕೂಡ ಎಸ್‌ಪಿಪಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್.. ಪಟ್ಟಣಗೆರೆ ಶೆಡ್ ರಕ್ತಚರಿತ್ರೆಯ ಒಂದೊಂದು ಅಕ್ಷರವನ್ನೂ ಓದಿದ SPP ಪ್ರಸನ್ನ ಕುಮಾರ್
ಸಾಕ್ಷಿ 69 ಆಗಿರೋ ನರೇಂದ್ರ ಸಿಂಗ್‌ಗೆ ಕನ್ನಡ ಬರಲ್ಲ ಅಂತಾ ಹೇಳಿದ್ದಾರೆ. ಮೊರಾರ್ಜಿ ದೇಸಾಯಿ ಶಾಲೆ ಟೀಚರ್ ಮೂಲಕ ಸಾಕ್ಷಿಯ ಹೇಳಿಕೆಯನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿಸಲಾಗಿದೆ. ಅದು ನ್ಯಾಯಾಲಯದಲ್ಲಿ ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ ನಲ್ಲಿ ರೆಕಾರ್ಡ್ ಮಾಡಲಾಗಿದೆ. ಸ್ವತಃ 164 ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಪ್ರಸನ್ನ ಕುಮಾರ್ ಹೇಳಿದ್ರು.
ಕೌಂಟರ್-6
ಆರೋಪಿಗಳ ಮೊಬೈಲ್‌ನಲ್ಲಿ ಫೋಟೋ ಪತ್ತೆ!
ದರ್ಶನ್‌ಗೆ ಯಾಕೆ ಜಾಮೀನು ಕೊಡಬಾರದು ಅನ್ನೋ ನಿಟ್ಟಿನಲ್ಲಿ ಪ್ರಸನ್ನ ಕುಮಾರ್ ಅವ್ರು ಬಲವಾದ ವಾದ ಮಂಡಿಸಿದ್ದಾರೆ. ಆರೋಪಿಗಳ ವಿರುದ್ಧ ಇರೋ ಸಾಕ್ಷ್ಯಗಳನ್ನು ನ್ಯಾಯಾಧೀಶರ ಮುಂದೆ ಇಟ್ಟಿದ್ದಾರೆ. ಅದರಲ್ಲಿಯೂ ಆರೋಪಿಗಳು ಜೂನ್ 8ನೇ ತಾರೀಖು ಸ್ಥಳದಲ್ಲಿ ಇದ್ದಿದ್ದು. ಹಾಗೆಯೇ ಆರೋಪಿಗಳು ಫೋನ್‌ನಲ್ಲಿ ಮಾತಾಡಿರೋದು, ಸಿಸಿಟಿವಿಯಲ್ಲಿ ಚಿತ್ರ ಸೆರೆಯಾಗಿರೋದು. ಎಲ್ಲವನ್ನು ನ್ಯಾಯಾಧೀಶರ ಮುಂದೆ ಇಟ್ಟಿದ್ದಾರೆ.
ಇನ್ನೊಂದು ವಿಚಾರ ಅಂದ್ರೆ, ಆರೋಪಿ ಪ್ರದೂಷ್ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಹತ್ಯೆಯಾದ್ಮೇಲೆ ತೆಗೆದಿರೋ ಫೋಟೋ ಪತ್ತೆಯಾಗಿದೆ ಅನ್ನೋದನ್ನ ಕೋರ್ಟ್ ಮುಂದೆ ಇಟ್ಟಿದ್ದಾರೆ. ಈ ರೀತಿಯಾಗಿ ಕೋರ್ಟ್‌ನಲ್ಲಿ ಸಿವಿ ನಾಗೇಶ್ ಮತ್ತು ಪ್ರಸನ್ನ ಕುಮಾರ್ ಅವರು ವಾದ ಪ್ರತಿವಾದ ಮಾಡಿದ್ದಾರೆ. ಆದ್ರೆ, ದರ್ಶನ್‌ಗೆ ಜಾಮೀನು ಸಿಗುತ್ತೋ ಇಲ್ವೋ ಅನ್ನೋದಕ್ಕೆ ಕಾಲವೇ ಉತ್ತರ ನೀಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ