ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ.. ಸಿದ್ದರಾಮಯ್ಯ ಸರ್ಕಾರಕ್ಕೆ ಇವತ್ತು ಮಹತ್ವದ ದಿನ

author-image
Ganesh
Updated On
KSCAಗೆ ತಾತ್ಕಾಲಿಕ ರಿಲೀಫ್ ಕೊಟ್ಟ ಹೈಕೋರ್ಟ್​.. RCB ನಿಖಿಲ್ ಸೋಸಲೆ ವಿಚಾರಣೆ ಏನಾಯ್ತು..?
Advertisment
  • ಹೈಕೋರ್ಟ್​ನಲ್ಲಿಂದು ಕಾಲ್ತುಳಿತ ದುರಂತದ ಬಗ್ಗೆ ವಿಚಾರಣೆ
  • ನ್ಯಾಯಾಲಯಕ್ಕೆ ಉತ್ತರಿಸಲು ರಾಜ್ಯ ಸರ್ಕಾರ ತಯಾರಿ
  • RCB ಮಾರ್ಕೆಟಿಂಗ್ ಹೆಡ್​ಗೆ ಇವತ್ತಾದ್ರೂ ಸಿಗುತ್ತಾ ಖುಷ್?

11 ಅಮಾಯಕರನ್ನ ಬಲಿ ತೆಗೆದುಕೊಂಡ ಕಾಲ್ತುಳಿತ ಪ್ರಕರಣ ಹೈಕೋರ್ಟ್​ ಕಟಕಟೆಯಲ್ಲಿ ನಿಂತಿದೆ. ಪ್ರಕರಣದ ಬಗ್ಗೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಹೈಕೋರ್ಟ್​, ಸರ್ಕಾರದ ವೈಫಲ್ಯ, KSCA ನಿರ್ಲ್ಯಕ್ಷದ ಬಗ್ಗೆ ​​​​ ತರಾಟೆಗೆ ತೆಗೆದುಕೊಂಡು ವಿಚಾರಣೆಯನ್ನ ಜೂನ್​ಕ್ಕೆ 10ಕ್ಕೆ ಮುಂದೂಡಿತ್ತು.

ಕಪ್​ ಗೆದ್ದ ಸಂಭ್ರಮ ಕಸಿದುಕೊಂಡ ಕಾಲ್ತುಳಿತದ ಘಟನೆ ಹೈಕೋರ್ಟ್​ ಮೆಟ್ಟಿಲೇರಿದೆ. ಘಟನೆ ಬಗ್ಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದ ಹೈಕೋರ್ಟ್​ ದುರಂತವನ್ನ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದ ನ್ಯಾಯಾಲಯ ಚಾಟಿ ಬೀಸಿತ್ತು. ಇಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಹೈಕೋರ್ಟ್​ನತ್ತ ರಾಜ್ಯದ ಜನರ ಗಮನ ಶಿಫ್ಟ್ ಆಗಿದೆ.

ನ್ಯಾಯಾಲಯಕ್ಕೆ ಉತ್ತರಿಸಲು ರಾಜ್ಯ ಸರ್ಕಾರದ ತಯಾರಿ

ಹೈಕೋರ್ಟ್ ವಿಚಾರಣೆಗೆ ಮೊದಲು ನಿನ್ನೆ ಸಂಜೆ, ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ರು. ಕಾನೂನು ಸಚಿವರು, ಗೃಹ ಸಚಿವರು, ಸಿಎಸ್, ಅಡ್ವೋಕೇಟ್ ಜನರಲ್ ಸೇರಿ ಹಲವರು ಭಾಗಿಯಾಗಿದ್ರು. ಈ ಸಭೆಯಲ್ಲಿ ಚರ್ಚಿಸಿ ಕೋರ್ಟ್​ಗೆ ಏನ್ ಉತ್ತರಿಸಬೇಕೆಂದು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಸರಿಗಮಪ ಸೀಸನ್ 21; ವಿಜೇತೆ ಬೀದರ್​ನ ಶಿವಾನಿ ಸ್ವಾಮಿಗೆ 15 ಲಕ್ಷ ಮೌಲ್ಯದ ಚಿನ್ನದ ನಾಣ್ಯ ನೀಡಿ ಗೌರವ

ಕೋರ್ಟ್​ನಲ್ಲಿ ಸರ್ಕಾರದ ನಿಲುವು ಏನು?

  • ಸಂಭ್ರಮಾಚರಣೆ ದಿನದಂದು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ
  •  ಆರ್‌ಸಿಬಿ ವಿಜಯೋತ್ಸವ 3 ಹಂತದಲ್ಲಿ ನಡೆಸುವ ಆಲೋಚನೆ ಇತ್ತು
  •  ವಿಧಾನಸೌಧದ ಮೆಟ್ಟಿಲ ಮೇಲೆ ಸರ್ಕಾರದಿಂದ ಸನ್ಮಾನ ಕಾರ್ಯಕ್ರಮ
  •  ಸಾರ್ವಜನಿಕರಿಗೆ ತೊಂದರೆ ಕಾರಣಕ್ಕೆ ವಿಕ್ಟರಿ ಪರೇಡ್​ಗೆ ಅನುಮತಿ ನೀಡಿಲ್ಲ
  •  ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎಯಿಂದ ಚಿನ್ನಸ್ವಾಮಿಯಲ್ಲಿ ವಿಜಯೋತ್ಸವ
  •  ಕ್ರೀಡಾಂಗಣದ ಗೇಟ್​ಗಳನ್ನ ತೆರೆಯುವ, ಮುಚ್ಚುವ ಅಧಿಕಾರ ಸರ್ಕಾರದ್ದಲ್ಲ
  •  ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಅವಘಡ ನಡೆದಿಲ್ಲ
  •  ಕೋರ್ಟ್​ಗೆ ಮನವರಿಕೆ ಮಾಡಿಕೊಡುವ ಸಂಬಂಧ ಸಭೆಯಲ್ಲಿ ಚರ್ಚೆ

ಹೈಕೋರ್ಟ್​ ಇಂದು ನಡೆಸಲಿರೋ ವಿಚಾರಣೆ ಸರ್ಕಾರದ ದೃಷ್ಟಿಯಲ್ಲೂ ಮಹತ್ವದ್ದಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ಆಯಾಮ ತಂದುಕೊಡೋ ಸಾಧ್ಯತೆ ಇದೆ.

RCB ಮಾರ್ಕೆಟಿಂಗ್ ಹೆಡ್​ಗೆ ಇವತ್ತಾದ್ರೂ ಸಿಗುತ್ತಾ ಖುಷ್?

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಆರ್‌ಸಿಬಿ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್​ನ ಏಕಸದಸ್ಯ ಪೀಠ ವಾದ-ಪ್ರತಿವಾದ ಆಲಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಹೀಗಾಗಿ ನಿಖಿಲ್ ಸೋಸಲೆಗೂ ಇವತ್ತು ಬಿಗ್ ಡೇ.

ಒಟ್ನಲ್ಲಿ ಹೈಕೋರ್ಟ್​ ಕಟೆ ಕಟೆಯಲ್ಲಿ ನಿಂತಿರೋ ಕಾಲ್ತುಳಿತ ದುರಂತ ಅಸುನೀಗಿದ 11 ಮಂದಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಆಶಾಭಾವನೆ ಮೂಡಿಸಿದೆ.. ರಾಜ್ಯ ಸರ್ಕಾರಕ್ಕ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಇಂದಿನ ಹೈಕೋರ್ಟ್ ವಿಚಾರಣೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಕಾಲ್ತುಳಿತದ ಡ್ಯಾಮೇಜ್, ಸಿಎಂ-ಡಿಸಿಎಂಗೆ ದಿಢೀರ್ ಬುಲಾವ್.. ದೆಹಲಿಯಲ್ಲಿ ಇಂದು ‘ಹೈ’ ಟಾಕ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment