/newsfirstlive-kannada/media/post_attachments/wp-content/uploads/2024/05/Govindappa-Siddapura.jpg)
ಬಾಗಲಕೋಟೆ: ಹೃದಯಾಘಾತದಿಂದ ಚುನಾವಣಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ಘಟನೆ ಮುಧೋಳ ನಗರದಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಗೋವಿಂದಪ್ಪ ಸಿದ್ದಾಪುರ ಎಂದು ಗುರುತಿಸಲಾಗಿದೆ.
ಬಸ್ ನಿಲ್ದಾಣದ ಗೇಟ್ ಬಳಿಯೇ ಗೋವಿಂದಪ್ಪ ಸಿದ್ದಾಪುರ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳಲು ಬಸ್ ಹತ್ತಲು ಬಂದಿದ್ದರು. ಆದರೆ ಬಸ್ ಹತ್ತುವ ಮುನ್ನವೇ ಗೋವಿಂದಪ್ಪ ಸಿದ್ದಾಪುರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
[caption id="attachment_62476" align="alignnone" width="800"]ಗೋವಿಂದಪ್ಪ ಸಿದ್ದಾಪುರ[/caption]
ಇದನ್ನೂ ಓದಿ: ಸೆಕೆ ಎಂದು ಈಜಲು ಹೋಗಿ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದವನು ಮತ್ತೆ ಮೇಲೆ ಬರಲೇ ಇಲ್ಲ
ಮೃತಪಟ್ಟ ಗೋವಿಂದಪ್ಪ ಸಿದ್ದಾಪುರ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದಾರೆ. ಜಮಖಂಡಿ ತಾಲ್ಲೂಕಿನ ಬಿದರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದಾರೆ. ಜಮಖಂಡಿ ತಾಲ್ಲೂಕಿನ ಮೈಗೂರು ಪ್ರಾಥಮಿಕ ಶಾಲೆ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ