/newsfirstlive-kannada/media/post_attachments/wp-content/uploads/2025/07/HEART-ATTACK-5.jpg)
ದಾವಣಗೆರೆ/ ಧಾರವಾಡ: ರಾಜ್ಯದಲ್ಲಿ ಹೃದಯಾಘಾತದಿಂದ ಆಗುತ್ತಿರುವ ಮರಣ ಮೃದಂಗ ಮುಂದುವರಿದಿದೆ. ಧಾರವಾಡ ಹಾಗೂ ದಾವಣಗೆರೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ಉದ್ಯಮಿ ಮಗ ನಿಧನ
ದಾವಣಗೆರೆ ನಗರದ ಜಯನಗರದಲ್ಲಿ 22 ವರ್ಷದ ಕಾಲೇಜು ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಜೀವ ಕಳೆದುಕೊಂಡಿದ್ದಾನೆ. ಉದ್ಯಮಿ ರೇಖಾ ಮುರ್ಗೇಶ್ ಪುತ್ರ ಅಕ್ಷಯ್ (22) ಮೃತ ದುರ್ದೈವಿ. ಕುಸಿದು ಬೀಳುತ್ತಿದ್ದಂತೆಯೇ ಅಕ್ಷಯ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬದುಕುಳಿಯಲಿಲ್ಲ.
ಇದನ್ನೂ ಓದಿ: ಪರಾರಿ ಆಗಿರುವ ಉಗ್ರನ ತಾಯಿಯೂ ಅರೆಸ್ಟ್.. ಬೆಂಗಳೂರಲ್ಲಿ ಉಗ್ರರ ಜೈಲು ಜಾಲ ಹೇಗೆ ನಡೀತಿತ್ತು..?
UPSC ಓದುತ್ತಿದ್ದ ಯುವತಿ
ಯುಪಿಎಸ್‌ಸಿ ತಯಾರಿ ಮಾಡುತ್ತಿದ್ದ ಯುವತಿ ಹೃದಯಾಘಾತಕ್ಕೆ ನಿಧನರಾದ ಘಟನೆ ಧಾರವಾಡ ನಗರದ ಪುರೋಹಿತ್ ನಗರದಲ್ಲಿ ನಡೆದಿದೆ. ಜೀವಿತಾ ಕುಸಗೂರ (26) ಮೃತ ಯುವತಿ. ನಿನ್ನೆ ಬೆಳಗ್ಗೆ ಮನೆಯಲ್ಲಿ ತಲೆ ಸುತ್ತು ಬರುತ್ತಿದೆ ಎಂದು ಸುಸ್ತಾಗಿ ಕುಳಿತಿದ್ದಳು. ನಂತರ ಕುಟುಂಬದವರು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಮಾರ್ಗ ಮಧ್ಯದಲ್ಲೇ ಯುವತಿಯ ಜೀವ ಹೋಗಿದೆ. ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೊರಿಸಿದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ತಿಳಿಸಿದ್ದಾರೆ. ಎಂಎಸ್ಸಿ ಅಗ್ರಿ ಮಾಡಿದ್ದ ಯುವತಿ, ಯುಪಿಎಸ್‌ಸಿ ಮಾಡುವ ಕನಸು ಕಂಡು ತಯಾರಿಯಲ್ಲಿದ್ದರು. ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದು, ಮಗಳು ಯುಪಿಎಸ್​​ಸಿ ಪಾಸ್ ಮಾಡಲಿ ಅಂತಾ ಕನಸು ಕಂಡಿದ್ದರು.
ಇದನ್ನೂ ಓದಿ: ಐಸಿಸಿ ಅಂಪೈರ್ ಪಾಕಿಸ್ತಾನದಲ್ಲಿ ಹಠಾತ್ ನಿಧನ.. ವಯಸ್ಸು ಕೇವಲ 41.. ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ