Advertisment

ಕೂತಲ್ಲೇ, ನಿಂತಲ್ಲೇ ಹೃದಯ ಹಿಂಡ್ತಿದ್ದಾನೆ ಯಮ.. ಬೆಳ್ಳಂಬೆಳಗ್ಗೆ 6 ಪ್ರಕರಣ ಬೆಳಕಿಗೆ..

author-image
Ganesh
Updated On
ಕೂತಲ್ಲೇ, ನಿಂತಲ್ಲೇ ಹೃದಯ ಹಿಂಡ್ತಿದ್ದಾನೆ ಯಮ.. ಬೆಳ್ಳಂಬೆಳಗ್ಗೆ 6 ಪ್ರಕರಣ ಬೆಳಕಿಗೆ..
Advertisment
  • ನಿನ್ನೆ ಸಂಜೆಯಿಂದ ಹೃದಯಾಘಾತಕ್ಕೆ 6 ಮಂದಿ ಕಣ್ಣುಚ್ಚಿದ್ದಾರೆ
  • ಹೊಲದಲ್ಲಿ ಕೆಲಸ ಮಾಡ್ತಿದ್ದ 36 ವರ್ಷದ ರೈತ ಇನ್ನಿಲ್ಲ
  • ಜಿಮ್​ನಲ್ಲಿದ್ದ ಇಂಜಿನಿಯರ್, ಗ್ರಾಪಂ ಸದಸ್ಯ ಕೊನೆಯುಸಿರು​

ಮೈಸೂರು/ಹಾಸನ: ರಾಜ್ಯದಲ್ಲಿ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಸರಣಿ ಪ್ರಕರಣಗಳು ಮುಂದುವರಿದಿವೆ. ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆವರೆಗೆ ಒಟ್ಟು 6 ಮಂದಿ ಜೀವ ಕಳೆದುಕೊಂಡಿರುವ ವರದಿಯಾಗಿದೆ. ಅವರಲ್ಲಿ ಹಾಸನದಲ್ಲಿ ಮೂರು ಪ್ರಕರಣ ಬೆಳಕಿಗೆ ಬಂದಿದೆ.

Advertisment

ಜಿಮ್ ಮಾಡ್ತಿದ್ದಾಗ ಹೃದಯಾಘಾತ

ಹಾಸನದ ಎಂಜಿನಿಯರ್​​ಗೆ ಮೈಸೂರಲ್ಲಿ ಹೃದಯಾಘಾತವಾಗಿದೆ. ಜಿಮ್​ನಲ್ಲಿ ಥ್ರಡ್ ಮಿಲ್ ಮಾಡುವಾಗಲೇ 51 ವರ್ಷದ ಬಿ.ಎನ್.ಶ್ರೀಧರ್ ಕುಸಿದು ಬಿದ್ದು ಜೀವ ಕಳೆದುಕೊಂಡಿದ್ದಾರೆ. ಮೈಸೂರಿನ ವಿಜಯನಗರದ ಜಿಮ್​​ನಲ್ಲಿ ದುರ್ಘಟನೆ ನಡೆದಿದೆ. ಇವರು ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಜುಂಜನಹಳ್ಳಿ ಗ್ರಾಮದವರು.

ಯಾವುದೇ ಪ್ರಯೋಜನ ಆಗಿಲ್ಲ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪದ ಚಿಕ್ಕನಾಯಕನಹಳ್ಳಿ ಸಿ.ಬಿ ವಿರುಪಾಕ್ಷ (70) ಅನ್ನೋದು ಹೃದಯಾಘಾತಕ್ಕೆ ಜೀವ ಕಳೆದುಕೊಂಡಿದ್ದಾರೆ. ಆರೋಗ್ಯವಾಗಿದ್ದ ವಿರೂಪಾಕ್ಷಗೆ ಕಳೆದ ರಾತ್ರಿ 11:30ರ ಸುಮಾರಿಗೆ ದಿಢೀರ್ ಅಂತಾ ಎದುನೋವು ಕಾಣಿಸಿಕೊಂಡು ಅನಾಹುತ ಸಂಭವಿಸಿದೆ. ತಕ್ಷಣವೇ ಸಕಲೇಶಪುರ ಕ್ರಾಫರ್ಡ್ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ.

ಗ್ರಾಪಂ ಸದಸ್ಯ ಬಲಿ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಲ್ಲಾರೆ ಗ್ರಾಮದ ಸಂತೋಷ್ ಎಂಬಾತ ಹೃದಯಾಘಾತಕ್ಕೆ ಜೀವ ಕಳೆದುಕೊಂಡಿದ್ದಾರೆ. 38 ವರ್ಷದ ಇವರು ಕಾರಗೋಡು ಗ್ರಾಪಂ ಸದಸ್ಯರಾಗಿದ್ದರು. ರಾತ್ರಿ ಮಲಗಿದ್ದಲ್ಲಿಯೇ ಸಂತೋಷ್‌ಗೆ ಹೃದಯಾಘಾತವಾಗಿದೆ.

Advertisment

ತೆಂಗಿನಕಾಯಿ ವ್ಯಾಪಾರಿ ಅಂತ್ಯ

ತರೀಕೆರೆ ತಾಲೂಕಿನ ಶಿವನಿ ಗ್ರಾಮದಲ್ಲಿ 29 ವರ್ಷದ ಹರೀಶ್ ಅನ್ನೋ ಯುವಕ ದುರಂತ ಅಂತ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಹರೀಶ್, ಬೆಳಗಿನ ಜಾವ 2.30ಕ್ಕೆ ವಾಂತಿ ಮಾಡಿಕೊಂಡಿದ್ದರು. ಗ್ಯಾಸ್​ಟ್ರಿಕ್ ಎಂದು ಮಾತ್ರೆ ನುಂಗಿಸಿ ಮನೆಯವರು ಮಲಗಿಸಿದ್ದರು. ಮತ್ತೆ ಕುಸಿದು ಬಿದ್ದ ಯುವಕ ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ.

ನಡೆದುಕೊಂಡು ಹೋಗ್ತಿದ್ದಾಗ ಬಂದ ಯಮ

ದಾವಣಗೆರೆಯಲ್ಲೂ ಹೃದಯಾಘಾತ ಸಂಭವಿಸಿದೆ. ತಾಲೂಕಿನ ಐಗೂರು ಗೊಲ್ಲರಟ್ಟಿ ಜಯಪ್ಪ (44) ಅನ್ನೋರು ಬಾಪುಜಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಗೆ ನಡೆದುಕೊಂಡು ಹೋಗುವಾಗ ಹೃದಯಾಘಾತ ಸಂಭವಿಸಿದೆ. ಸದ್ಯ ಅವರಿಗೆ ಆಸ್ಪತ್ರೆಯ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ಪ್ರಾಣಬಿಟ್ಟಿದ್ದಾರೆ.

ಯುವ ರೈತ ನಿಧನ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸಂತೋಷ್ ಇಂಡಿ (36) ಎಂಬ ಯುವ ರೈತ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡ್ತಿರುವಾಗ ಲೋ ಬಿಪಿಯಿಂದ ಕುಸಿದುಬಿದ್ದ ಪ್ರಾಣ ಕಳೆದುಕೊಂಡಿದ್ದಾನೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment