/newsfirstlive-kannada/media/post_attachments/wp-content/uploads/2025/06/HEART-ATTACK.jpg)
ಇದು ನಿಜಕ್ಕೂ ಹೃದಯಕ್ಕೆ ಘಾಸಿಯಾಗುವ ವಿಚಾರ. ಇತ್ತೀಚೆಗೆ ಯುವಕರ ಹೃದಯದ ಲಬ್​ಡಬ್​ ಹೆಚ್ಚಾಗಿದೆ. ಹೃದಯ ಹಿಂಡುತ್ತಿದೆ. ಜೀವ ಬೆಂಡಾಗುತ್ತಿದೆ. ಹಾಸನ ಜಿಲ್ಲೆ ಹೃದಯಾಘಾತಗಳ ಹಾಟ್​ಸ್ಪಾಟ್ ಆಗಿ ಬದಲಾಗಿದೆ. ಬೀದರ್​ನ ಒಂದೇ ಗ್ರಾಮದಲ್ಲಿ 6 ಜನರು ಜೀವ ಕಳೆದುಕೊಂಡಿರೋದು ಆತಂಕ ಮೂಡಿಸಿದೆ.
ಹಾಸನ ಜಿಲ್ಲೆ ಹಾರ್ಟ್​ ಅಟ್ಯಾಕ್ ಕೇಸ್​ಗಳ ಹಾಟ್​ಸ್ಪಾಟ್ ಆಗಿ ಬದಲಾಗಿದೆ. ಹಾಸನ ಜಿಲ್ಲೆ ಒಂದರಲ್ಲೇ ಕಳೆದ 40 ದಿನಗಳಲ್ಲಿ 19 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದು ಆತಂಕ ಹೆಚ್ಚಿಸಿದೆ. ಎರಡು ದಿನಗಳಿಗೆ ಒಬ್ಬರಂತೆ ಹೃದಯ ಸ್ತಂಭನಕ್ಕೆ ಉಸಿರು ಚೆಲ್ತಿದ್ದಾರೆ.. ಇವತ್ತು ಜಿಲ್ಲೆಯಲ್ಲಿ ಹೃದಯ ಸ್ತಂಭನಕ್ಕೆ ನಾಲ್ವರ ಸಾವಾಗಿದೆ.
ಬೇಲೂರು ಪಟ್ಟಣ ನಿವಾಸಿ 50 ವರ್ಷದ ಲೇಪಾಕ್ಷಿ ಹಾಗೂಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಯೋಧ ಲೋಹಿತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೂ ಅಲ್ಲದೇ 57 ವರ್ಷದ ಕುಮಾರ್, 58 ವರ್ಷದ ಮುತ್ತಯ್ಯ ಸಾವನ್ನಪ್ಪಿದ್ದಾರೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಕಂಡು ಕೇಳರಿಯದ ಘಟನೆಗೆ ಹಾಸನ ಸಾಕ್ಷಿಯಾಗ್ತಿದೆ.
ಅತ್ತ ಗಡಿ ಜಿಲ್ಲೆಯ ಬೀದರ್​​ ಜನರ ಹೃದಯ ಬಡಿತ ಹೆಚ್ಚಾಗಿಸಿದೆ. ಕೇವಲ 2 ತಿಂಗಳ ಅಂತರದಲ್ಲಿ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ 6 ಮಂದಿ ಹಾರ್ಟ್​ ಅಟ್ಯಾಕ್​ನಿಂದ ಸಾವಿನ ಮನೆ ಸೇರಿದ್ದಾರೆ. ಜನರ ಸರಣಿ ಸಾವಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಅಂದಹಾಗೆ ಕಳೆದ 4 ತಿಂಗಳಲ್ಲಿ 3-4 ಗ್ರಾಮಗಳಲ್ಲಿ 13 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇತ್ತ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 70ರಿಂದ 80 ಜೀವಕಳೆದುಕೊಳ್ತಿದ್ದಾರೆ. ಪ್ರತಿನಿತ್ಯ 300ರಿಂದ 400 ರೋಗಿಗಳು ಚಿಕಿತ್ಸೆಗೆ ಬರ್ತಿದ್ದು ಇವರಲ್ಲಿ ಬಹುತೇಕ ಯುವ ಸಮೂಹದವರೇ ಆಗಿದ್ದಾರೆ. ಏಪ್ರಿಲ್ ತಿಂಗಳಲ್ಲಿ 109 ಮಂದಿ ಸಾವನ್ನಪ್ಪಿದ್ದು, ಮೇ ತಿಂಗಳಲ್ಲಿ 106 ಮಂದಿ ಮೃತರಾಗಿದ್ದಾರೆ. ಈ ಮಧ್ಯೆ ವೈದ್ಯಕೀಯ ವಿದ್ಯಾರ್ಥಿ 26 ವರ್ಷದ ವೈಭವ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ವಿಜಯಪುರ ಮೂಲದ ವೈಭವ್ ಎಂಬಿಬಿಎಸ್​ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಹೃದಯಾಘಾತ ಹೆಚ್ಚಳ ಪ್ರಕರಣವನ್ನು ಸಂಸದ ಡಾ.ಸಿ.ಎನ್. ಮಂಜುನಾಥ್, ಪ್ರಧಾನಿ ಮೋದಿ ಗಮನ ಸೆಳೆಯಲು ಮುಂದಾಗಿದ್ದಾರೆ.
ಯುವ ಸಮುದಾಯದಲ್ಲಿ ಹೃದಯಾಘಾತ ವಿಚಾರದ ಬಗ್ಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ ಹೃದಯಘಾತ ಯಾಕೆ ಆಗ್ತಿದೆ ಏನು ಅಂತ ಕಾರಣ ವಿವರಣೆ ಕೊಡಲು ಹೇಳ್ತೀನಿ ಎಂದಿದ್ದಾರೆ. ಹೃದಯಾಘಾತ ಹೆಚ್ಚಳಕ್ಕೆ ಸರ್ಕಾರ ಅಲರ್ಟ್ ಆಗಿದ್ದು ಸಂಶೋಧನೆಗಾಗಿ 10 ತಜ್ಞರ ತಂಡ ರಚಿಸಲು ತೀರ್ಮಾನಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಬಾಳಿ ಬದುಕಬೇಕಿದ್ದ ಯುವಕರೇ ಅತಿ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗ್ತಿರೋದು ಆತಂಕಕಾರಿ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ