ನಾನು 15 ದಿನದ ಬಳಿಕ ಸಾಯ್ತೀನಿ ಎಂದು ಪತ್ರ ಬರೆದಿದ್ದ ಹಿರಿಯ ಕಲಾವಿದ ಇನ್ನಿಲ್ಲ; ಆಗಿದ್ದೇನು?

author-image
admin
Updated On
ನಾನು 15 ದಿನದ ಬಳಿಕ ಸಾಯ್ತೀನಿ ಎಂದು ಪತ್ರ ಬರೆದಿದ್ದ ಹಿರಿಯ ಕಲಾವಿದ ಇನ್ನಿಲ್ಲ; ಆಗಿದ್ದೇನು?
Advertisment
  • ಈ ಕಾಲದಲ್ಲೂ ಸಾವಿನ ಮುನ್ಸೂಚನೆ ಮೊದಲೇ ಗೊತ್ತಾಗುತ್ತಾ?
  • ಸಂಬಂಧಿಕರು ಊರಿನ ಸ್ನೇಹಿತರಿಗೆ ಸಾವಿನ ಸೀಕ್ರೆಟ್ ಹೇಳಿದ್ದರು
  • ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ನಿಧನ

ವಿಜಯನಗರ: ಈ ಕಾಲದಲ್ಲೂ ಸಾವಿನ ಮುನ್ಸೂಚನೆ ಮೊದಲೇ ಗೊತ್ತಾಗುತ್ತಾ? ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ 15 ದಿನದ ಮುಂಚೆಯೇ ಸಾಯೋ ಸೂಚನೆ ನೀಡಿದ್ದ ಹಿರಿಯ ನಾಟಕ ಕಲಾವಿದ ಚಂದ್ರಪ್ಪ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಝೀರೋ ಸ್ಟೇಜ್.. ಕ್ಯಾನ್ಸರ್​ನ ಈ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು..! 

ಹರಪನಹಳ್ಳಿ ತಾಲೂಕು ಅರಸಿಕೇರೆಯ ಚಂದ್ರಪ್ಪ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಇತ್ತೀಚೆಗೆ ಚಂದ್ರಪ್ಪನವರು ಸಂಬಂಧಿಕರು ಊರಿನ ಸ್ನೇಹಿತರಿಗೆ ಒಂದು ಪತ್ರ ಬರೆದು ಸಾವಿನ ಸೀಕ್ರೆಟ್​ ಹೇಳಿದ್ದಾರೆ. ಈ ಪತ್ರ ಬರೆದ 15 ದಿನದ ಬಳಿಕ ಕಲಾವಿದ ಚಂದ್ರಪ್ಪನವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

publive-image

ಹಿರಿಯ ಕಲಾವಿದ ಚಂದ್ರಪ್ಪನವರು ಹರಪನಹಳ್ಳಿ ತಾಲೂಕು ಪಂಚಾಯ್ತಿಯ ಸದಸ್ಯರೂ ಆಗಿದ್ದರು. ನಾಟಕದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಇವರು ರಾಜ್ಯದ ವಿವಿಧೆಡೆ 267ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿಗಳಿಸಿದ್ದರು. ಜಗಜ್ಯೋತಿ ಬಸವೇಶ್ವರ, ದುರ್ಗದ ದೊರೆ ಸೇರಿದಂತೆ 50ಕ್ಕೂ ಹೆಚ್ಚು ನಾಟಕಗಳಲ್ಲಿ ಚಂದ್ರಪ್ಪನವರು ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದರು. ಹಲವು ನಾಟಕಗಳನ್ನು ನಿರ್ದೇಶನ ಮಾಡಿ, ಸಂಗೀತ ಸಂಯೋಜನೆ ಕೂಡ ಮಾಡಿ ಸಾಕಷ್ಟು ಖ್ಯಾತಿಗಳಿಸಿದ್ದರು.

publive-image

ಖ್ಯಾತ ನಾಟಕಕಾರ ಚಂದ್ರಪ್ಪನವರು ಸಾವಿಗೂ 15 ದಿನ ಮುನ್ನ ಸ್ನೇಹಿತರು, ಸಂಬಂಧಿಕರಿಗೆ ಪತ್ರ ಬರೆದು ತನಗೆ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದರು. ಈ ಪತ್ರ ಬರೆದು 15 ದಿನಕ್ಕೆ ಸರಿಯಾಗಿ ಚಂದ್ರಪ್ಪನವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಅಚ್ಚರಿಗೆ ಕಾರಣವಾಗಿದೆ.

publive-image

‘ನಾನು 15 ದಿನದ ಬಳಿಕ ಸಾಯ್ತೀನಿ’
ಸಾಯುವ 15 ದಿನದ ಮುಂಚೆ ಚಂದ್ರಪ್ಪ ಬರೆದಿದ್ದ ಪತ್ರದಲ್ಲಿ ಏನಿದೆ ಅಂತ ನೋಡೋದಾದ್ರೆ. ಅರಸಿಕೇರೆಯ ಶ್ರೀ ಕೋಲ ಶಾಂತೇಶ್ವರ ಮಹಾ ಸ್ವಾಮೀಗಳು ಹಾಗೂ ಪೂಜ್ಯ ಗ್ರಾಮ ದೇವತೆ ದುರ್ಗಮ್ಮ ದೇವಿಯ ಪಾದಗಳಿಗೆ ನಮಸ್ಕರಿಸುತ್ತಾ ಹಾಗೂ ಊರಿನ ಗುರು- ಹಿರಿಯರಿಗೆ ವಂದಿಸಿ ನನ್ನ ಕೊನೆಯ ನಮಸ್ಕಾರ ತಿಳಿಸುತ್ತೇನೆ.

ನನ್ನ ಮಕ್ಕಳಾದ ದುರುಗೇಶ, ಹುಲಿಗೆಮ್ಮ ಮತ್ತು ಇಂದಿರಾ ಹಾಗೂ ಮೊಮ್ಮಕ್ಕಳಿಗೆ ಕೊನೆಯ ಆಶೀರ್ವಾದಗಳು. ನನ್ನ ಸೊಸೆ ಉಮಾ ನನ್ನ ಮಗಳಂತೆ ನೋಡಿಕೊಂಡಿದ್ದಾಳೆ. ನನ್ನ ಮಗನ ಪಾತ್ರ ದೊಡ್ಡದು. ನನಗಾಗಿ ಹೆಚ್ಚಿನ ಹಣ ಖರ್ಚು ಮಾಡಿ ನನ್ನ ಆರೋಗ್ಯ ಉಳಿಸಿಕೊಳ್ಳಲು ಪ್ರಯತ್ನಿಸಿದ. ಇಂಥಾ ಮಗ ಎಲ್ಲಾ ತಂದೆ, ತಾಯಿಗೂ ಸಿಗಲಿ ಎಂದು ಆಶಿಸುತ್ತಾ ಮಗನಾದ ದುರುಗೇಶನಿಗೆ ನನ್ನ ಕೊನೆಯ ಕಿವಿಮಾತು ಹೇಳುತ್ತೇನೆ.

ನಾನು ಹೋದ ಮೇಲೆ ನಿಮ್ಮ ತಂಗಿ, ಅಳಿಯಂದಿರನ್ನು ಕಡೆಗಣಿಸದೆ ಅವರ ಮಕ್ಕಳನ್ನು ನಿನ್ನ ಮಕ್ಕಳಂತೆ ನೋಡಿಕೋ. ನಿನಗೆ ತುಂಬಾ ಕಷ್ಟ ಕೊಟ್ಟಿದ್ದೇನೆ ಕ್ಷಮಿಸು. ಕೊನೆಯದಾಗಿ ಊರಿನ ಎಲ್ಲಾ ಗುರು, ಹಿರಿಯರಿಗೆ ಕೊನೆಯ ನಮಸ್ಕಾರಗಳು.
- ಚಂದ್ರಪ್ಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment