VIDEO: ಹೃದಯಾಘಾತ.. BMTC ಬಸ್‌ನಲ್ಲೇ ಪ್ರಾಣ ಬಿಟ್ಟ ಡ್ರೈವರ್‌; ಎದೆ ನಡುಗಿಸುವ ದೃಶ್ಯ ಸೆರೆ!

author-image
admin
Updated On
VIDEO: ಹೃದಯಾಘಾತ.. BMTC ಬಸ್‌ನಲ್ಲೇ ಪ್ರಾಣ ಬಿಟ್ಟ ಡ್ರೈವರ್‌; ಎದೆ ನಡುಗಿಸುವ ದೃಶ್ಯ ಸೆರೆ!
Advertisment
  • ಡ್ರೈವಿಂಗ್ ವೇಳೆಯೇ ಹೃದಯಾಘಾತದಿಂದ ಕುಸಿದು ಬಿದ್ದ ಚಾಲಕ
  • ಬಸ್​​ನಲ್ಲಿದ್ದ 50 ಮಂದಿಯ ಪ್ರಾಣಕ್ಕೆ ಶ್ರೀರಕ್ಷೆಯಾದ ಕಂಡಕ್ಟರ್‌
  • ಸಮಯಪ್ರಜ್ಞೆ ಮೆರೆದ BMTC ನಿರ್ವಾಹಕನ ಸಾಹಸಕ್ಕೆ ಮೆಚ್ಚುಗೆ

ಬೆಂಗಳೂರು: ಸಾವು ಅದ್ಯಾವಾಗ ಹೇಗೆ ಬರುತ್ತೆ ಅಂತ ಯಾರು ಊಹಿಸೋದಕ್ಕೆ ಸಾಧ್ಯನೇ ಇಲ್ಲ. ಚಲಿಸುತ್ತಿದ್ದ ಬಸ್​​ನಲ್ಲೇ.. ಅದು ಕೂಡ ಬಸ್​​ನ ಚಾಲಕನದ್ದೇ ನಡೆದ ಈ ದುರಂತದ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ. ಇದರ ಮಧ್ಯೆ ಬಸ್​​ನಲ್ಲಿದ್ದ 50ಕ್ಕೂ ಹೆಚ್ಚು ಮಂದಿಯ ಪ್ರಾಣಕ್ಕೆ ಶ್ರೀರಕ್ಷೆಯಾದ ಕಂಡಕ್ಟರ್‌ ಸಾಹಸವಂತೂ ನಿಜಕ್ಕೂ ಮೈಜುಮ್ಮೆನ್ನಿಸುತ್ತೆ.


">November 6, 2024

ಅಬ್ಬಾ.. ಈ ದೃಶ್ಯವನ್ನ ನೋಡಿದ್ರೆ ಎಂತ ದುರಂತ ಸಂಭವಿಸುವುದರಲ್ಲಿತ್ತು ಅನ್ನೋದು ಗೊತ್ತಾಗುತ್ತೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಯಶವಂತಪುರ ಬಳಿ ನಡೆದ ಆಘಾತಕಾರಿ ಘಟನೆಯಿದು. ಡ್ರೈವಿಂಗ್ ವೇಳೆಯೇ ಹೃದಯಾಘಾತದಿಂದ ಬಿಎಂಟಿಸಿ ಡಿಪೋ 40 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ 39 ವರ್ಷದ ಚಾಲಕ ಕಿರಣ್​ ಸಾವನ್ನಪ್ಪಿದ್ದಾರೆ. ನೆಲಮಂಗಲದಿಂದ ಯಶವಂತಪುರ ಕಡೆ ಬರುವಾಗ ಏಕಾಏಕಿ ಎದೆನೋವು ಕಾಣಿಸಿಕೊಂಡ ಪರಿಣಾಮ, ಬಸ್‌ನಲ್ಲಿಯೇ ಕುಸಿದು ಬಿದ್ದಿದ್ದಾರೆ.

publive-image

ಬಸ್​​ ರನ್ನಿಂಗ್​ನಲ್ಲಿರುವಾಗಲೇ ಡ್ರೈವರ್‌ ಕಿರಣ್​ ಸಾವಾಗಿದೆ. ಈ ಬಸ್​ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾ ಇದ್ದರು. ಅವರ ಪಾಲಿಗೆ ರಕ್ಷಕನಾಗಿದ್ದು ಅದೇ ಬಸ್​ನಲ್ಲಿದ್ದ ಕಂಡಕ್ಟರ್​​. ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಎಂತವರಾದ್ರೂ ವಿಚಲಿತರಾಗ್ತಾರೆ. ಆದರೆ ಡ್ರೈವರ್​ ಕಿರಣ್​ ಕುಸಿದು ಬೀಳುತ್ತಿದ್ದಂತೆಯೇ ಅಲರ್ಟ್​ ಆದ ಬಸ್​ ಕಂಡಕ್ಟರ್ ಓಬಳೇಶ್​ ಒಂದು ಸೆಕೆಂಡ್​ ಕೂಡ ವೇಸ್ಟ್​​ ಮಾಡದೆ ಡ್ರೈವರ್​ ಸೀಟ್​ಗೆ ಜಂಪ್​ ಮಾಡಿ, ​ಬಸ್​ನ ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾರೆ. ಬಳಿಕ ಚಾಲಕನನ್ನ ಆಸ್ಪತ್ರೆಗೆ ಶಿಫ್ಟ್​​ ಮಾಡಿದ್ದಾರೆ.

ಇದನ್ನೂ ಓದಿ: Justice For Sandhya: ಸಂಧ್ಯಾ ಸಾವಿಗೆ ಕನಿಕರ ತೋರಲಿಲ್ಲವೇ ಪೊಲೀಸರು? ಕೋರ್ಟ್‌ ಮೆಟ್ಟಿಲೇರಿದ ಪತಿ ಶಿವಕುಮಾರ್! 

[caption id="attachment_95684" align="aligncenter" width="800"]publive-image ಡ್ರೈವರ್ ಕಿರಣ್ ಹಾಗೂ ಕಂಡಕ್ಟರ್ ಓಬಳೇಶ್‌[/caption]

ಈ ಘಟನೆಗೆ ಸಂಬಂಧಪಟ್ಟಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ನ್ಯೂಸ್​​ಫಸ್ಟ್​​ ಮೂಲಕ ಸಮಯಪ್ರಜ್ಞೆ ಮೆರೆದ ನಿರ್ವಾಹಕ ಓಬಳೇಶ್​​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ನರಳಾಡಿ ಸಾವನ್ನಪ್ಪುವ ಬಿಎಂಟಿಸಿ ಬಸ್ ಡ್ರೈವರ್ ಸಾವು ಒಂದು ದುರಂತವಾದ್ರೆ, ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ ಕಂಡಕ್ಟರ್​​ ಸಮಯಪ್ರಜ್ಞೆಗೆ ನಿಜಕ್ಕೂ ಹ್ಯಾಟ್ಸ್‌ ಆಫ್​ ಹೇಳಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment