newsfirstkannada.com

ಯುವಕರಲ್ಲೇ ಹಾರ್ಟ್ ಅಟ್ಯಾಕ್ ಹೆಚ್ಚು; ಕಾರಣವೇನು? ನೀವು ಓದಲೇಬೇಕಾದ ಸ್ಟೋರಿ..!

Share :

Published February 27, 2024 at 5:47am

Update February 27, 2024 at 5:48am

    ಕೋವಿಡ್​ ಲಸಿಕೆ ಹಾಕಿದ್ಮೇಲೆ ಯುವಕರಲ್ಲಿ ಹೃದಯಾಘಾತ ಹೆಚ್ಚು!

    ವೈದ್ಯರ ಮಾತು ನಿರ್ಲಕ್ಷಿಸಿದ್ರೆ ಯುವಕರೇ ಅಪಾಯ ಕಟ್ಟಿಟ್ಟ ಬುತ್ತಿ

    ಕಟ್ಟುನಿಟ್ಟಾಗಿದ್ದವರಿಗೂ ಹಾರ್ಟ್​ ಅಟ್ಯಾಕ್​ ಆಗೋಕೆ ಕಾರಣವೇನು?

ಕೊರೊನಾ ಲಸಿಕೆ ಪಡೆದ್ಮೇಲೆ ಯುವಕ-ಯುವತಿಯರು ಹೆಚ್ಚಾಗಿ ರೋಗಗಳಿಗೆ ತುತ್ತಾಗ್ತಿದ್ದಾರಾ? ಅದರಲ್ಲೂ ಕೋವಿಡ್​ ವ್ಯಾಕ್ಸಿನ್ ಪಡೆದ ವ್ಯಕ್ತಿಗಳಲ್ಲಿಯೇ ಹೃದಯಸಂಬಂಧಿ ಕಾಯಿಲೆ ಜಾಸ್ತಿ ಆಗ್ತಿದ್ಯಾ ಎನ್ನುವ ಅನುಮಾನ ಕಾಡ್ತಿದೆ. ಹೀಗಂತ ಖ್ಯಾತ ಹೃದ್ರೋಗ ತಜ್ಞರೇ ಇಂಥಹದೊಂದು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದು, ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಯುವ ಜನತೆ ಹೆಚ್ಚಾಗಿ ಕಾಯಿಲೆಗಳಿಗೆ ತುತ್ತಾಗ್ತಿದ್ದಾರೆ. ಅದರಲ್ಲೂ ಹೃದಯಾಘಾತ ಎನ್ನುವುದು ಸದ್ದಿಲ್ಲದೇ ಅನೇಕರಿಗೆ ಯಮಪಾಶವಾಗಿ ಪರಿಣಮಿಸಿದೆ. 30 ರಿಂದ 40 ವರ್ಷದ ಆಸುಪಾಸಿನ ಯುವಕ-ಯುವತಿಯರಲ್ಲೇ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸಖತ್ ಫಿಟ್ ಆಗಿ ಕಟ್ಟುನಿಟ್ಟಾಗಿ ಡಯೆಟ್ ಮಾಡುತ್ತಿದ್ದವರಿಗೆ ಹಾರ್ಟ್ ಅಟ್ಯಾಕ್​ ಆಗಿರುವ ಪ್ರಕರಣಗಳು ವರದಿಯಾಗ್ತಿರುವುದು ಜನಸಾಮಾನ್ಯರನ್ನ ಭಯಪಡಿಸುವಂತೆ ಮಾಡಿದೆ. ಯಾವುದೇ ಕಾಯಿಲೆಗಳಿಲ್ಲದೇ ಹಲವು ಸೆಲೆಬ್ರಿಟಿಗಳು ಸಣ್ಣ ವಯಸ್ಸಿನಲ್ಲಿಯೇ ಬಲಿಯಾದುದು ಇನ್ನಷ್ಟು ಕಳವಳ ಸೃಷ್ಟಿಸಿದೆ.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲೇ ಹೃದಯಾಘಾತ ಹೆಚ್ಚಾಗ್ತಿದೆ ಎಂಬ ಆಘಾತಕಾರಿ ಸುದ್ದಿ ಸಾರ್ವಜನಿಕರನ್ನ ಚಿಂತೆಗೀಡು ಮಾಡಿದೆ. ಇದರಿಂದ ತಪ್ಪಿಸಿಕೊಳ್ಳೋಕೆ ವಿವಿಧ ಮಾರ್ಗಗಳನ್ನ ಅನುಸರಿಸ್ತಿದ್ದರೂ ಯಾವಾಗ ಏನ್ ಆಗುತ್ತೋ ಅನ್ನೋ ಭಯ ಕಾಡ್ತಾನೇ ಇದೆ. ಅಷ್ಟಕ್ಕೂ, ಇಂಥಹದೊಂದು ಬೆಳವಣಿಗೆಗೆ ಕಾರಣವೇನು? ಸಣ್ಣ ವಯಸ್ಸಿನಲ್ಲಿಯೇ ಹೃದಯಘಾತ ಆಗ್ತಿರೋದೇಕೆ? ಅದರಲ್ಲೂ ಕಳೆದ ಮೂರು ವರ್ಷಗಳಿಂದಲೇ ಹಾರ್ಟ್ ಅಟ್ಯಾಕ್​ ಕೇಸ್​ಗಳು ಜಾಸ್ತಿ ಆಗಿರೋದೇಕೆ ಅಂತ ಗಮನಿಸಿದ್ರೆ ಕೋವಿಡ್ ಲಸಿಕೆಯೂ ಒಂದು ಕಾರಣ ಇರಬಹುದು ಎಂಬ ಉತ್ತರ ಬರ್ತಿದೆ.

2020ರಲ್ಲಿ ಕೊರೊನಾ ವೈರಸ್ ಇಡೀ ಜಗತ್ತನ್ನೇ ಕಾಡಿತ್ತು. ಅದರಿಂದ ಹೊರಬರೋದಕ್ಕಾಗಿ ಹಲವು ದೇಶಗಳು ಹಲವು ರೀತಿಯ ಔಷಧಗಳನ್ನ ಕಂಡು ಹಿಡಿದರು. ಭಾರತದಲ್ಲಿ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್ ಎಂಬ ಲಸಿಕೆ ಹಾಕಲಾಯ್ತು. ಬಹುತೇಕ ಎಲ್ಲರೂ ಕೋವಿಡ್​ ವ್ಯಾಕ್ಸಿನ್ ಹಾಕಿಸಿದ್ದರು. ನಿಧಾನವಾಗಿ ಕೋವಿಡ್​ ಪ್ರಭಾವವೂ ಕಮ್ಮಿ ಆಗಿತ್ತು. ಆದರೆ ದಿನ ಕಳೆದಂತೆ ರೋಗಗಳ ಸಂಖ್ಯೆ ಹೆಚ್ಚಾಯ್ತು. ಅದರಲ್ಲೂ ಯುವಜನತೆ ಹೆಚ್ಚಾಗಿ ಕಾಯಿಲೆಗಳಿಗೆ ತುತ್ತಾದರು. 30 ರಿಂದ 40 ವರ್ಷದ ಯುವಜನತೆ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾದರು. ಇದಕ್ಕೆ ಈಗಿನ ಜೀವನ ಶೈಲಿ ಮತ್ತು ಅತಿಯಾದ ಒತ್ತಡವೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟರೂ, ಇದರ ಜೊತೆ ಮತ್ತೊಂದು ಆಘಾತಕಾರಿ ವಿಷಯವನ್ನೂ ಸಹ ಹೊರಹಾಕಿದ್ದಾರೆ.

ಕೊರೊನಾ ಲಸಿಕೆ ಬಗ್ಗೆ ಹೃದ್ರೋಗ ತಜ್ಞರು ಹೇಳೋದೇನು?

ಹೌದು, ಇಂದಿನ ಯುವ ಜನತೆಯಲ್ಲಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ವರದಿ ಆಗ್ತಿವೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಈ ಕಾರಣಗಳಲ್ಲಿ ಕೋವಿಡ್ ಲಸಿಕೆಯ ಪರಿಣಾಮವೂ ಇರಬಹುದು ಎಂಬ ಅನುಮಾನವನ್ನ ವೈದ್ಯರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸದಾನಂದ ಅವರು ನ್ಯೂಸ್ ಫಸ್ಟ್ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತಾಡಿದ್ದಾರೆ. ಈಗಿನ ಜನರೇಷನ್​ ಮಾಡ್ತೊರೋ ತಪ್ಪುಗಳು ಹಾಗೂ ಅದರಿಂದ ಹೇಗೆ ಎಚ್ಚೆತ್ತುಕೊಳ್ಳಬೇಕು ಎಂಬ ವಿಷಯವನ್ನ ಪ್ರಸ್ತಾಪಿಸಿದ್ದಾರೆ. ಈಗಿನ ಜನರೇಶನ್​ ಅವ್ರು ಅನುಸರಿಸ್ತಿರುವ ಜೀವನ ಶೈಲಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಡಾ. ಸದಾನಂದ ಅವರು ಇದಕ್ಕೆ ಕೋವಿಡ್ ಲಸಿಕೆಯೂ ಒಂದು ಕಾರಣ ಇರಬಹುದು ಎಂದು ಅಭಿಪ್ರಾಯಪಟ್ಟರು. ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆಯೂ ಜಾಸ್ತಿ ಆಗಿದೆಯಂತೆ. ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆಯಾದಾಗಿಂದಲೂ ಪ್ರತಿ ವರ್ಷ ರೋಗಿಗಳ ಸಂಖ್ಯೆಯಲ್ಲಿ 15 ಪರ್ಸೆಂಟ್​ ಜಾಸ್ತಿ ಆಗ್ತಿದೆಯಂತೆ. ಕಳೆದ ವರ್ಷ ಸ್ವಲ್ಪ ಜಾಸ್ತಿನೇ ಆಗಿದೆ ಅಂತಾರೆ.

ಕೆಲವು ಸೆಲೆಬ್ರಿಟಿಗಳು ಸಣ್ಣ ವಯಸ್ಸಿನಲ್ಲೇ ಹೃದಯಸ್ತಂಭನ ಹಾಗೂ ಹೃದಯಾಘಾತಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಜನ ಹೆಚ್ಚಾಗಿ ಭಯಭೀತಗೊಂಡ ಹೃದಯ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗಳ ಬಳಿ ಕ್ಯೂ ನಿಂತಿದ್ದರಂತೆ. ಆದರೆ ಈ ರೀತಿ ಆಗಬಾರದು ಅನ್ನೋ ತಜ್ಞರು ಅಭಿಪ್ರಾಯ. ವರ್ಷಕ್ಕೆ ಒಂದು ಸಲ ಹೃದಯ ಬಗ್ಗೆ ಆರೋಗ್ಯದ ಬಗ್ಗೆ ಕಾಳಜಿ ತೋರಿಸುವುದಕ್ಕಿಂತ ತಮ್ಮ ದೈನಂದಿನ ಜೀವನ ಶೈಲಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಇಂದಿನ ಜನರೇಶನ್​ನಲ್ಲಿ ಯುವಕ-ಯುವತಿಯರೇ ಫಾಸ್ಟ್​ ಲೈಫ್​ಗೆ ಒಳಗಾಗ್ತಿದ್ದಾರೆ. ಬೇಗ ಶ್ರೀಮಂತರಾಗ್ಬೇಕು, ಬೇಗ ದುಡ್ಡು ಮಾಡ್ಬೇಕು ಅಂತ ಒತ್ತಡಕ್ಕೆ ಬೀಳ್ತಿದ್ದಾರೆ. ಆರೋಗ್ಯಕರ ಜೀವನದ ಬಗ್ಗೆ ಯೋಚಿಸದೇ ಅನಗತ್ಯ ವಿಷ್ಯಗಳ ಬಗ್ಗೆ ಹೆಚ್ಚು ತಲೆಗೆ ಹಾಕಿಕೊಳ್ತಿದ್ದಾರೆ. ಇದರಿಂದ ಹೊರಬೇಕು. ಆಗಲೇ ಆರೋಗ್ಯಕರ ಮನಸು ಹಾಗೂ ಆರೋಗ್ಯ ಸಾಧ್ಯ ಎನ್ನುವುದು ವೈದ್ಯರ ಸಲಹೆ. ನಮ್ಮ ಜೀವನ ನಮ್ಮ ಕೈಯಲ್ಲಿ. ನಮ್ಮ ಆರೋಗ್ಯವೂ ನಮ್ಮ ಕೈಯಲ್ಲಿಯೇ ಇದೆ. ನಾವು ಹೇಗೆ ಬದುಕು ಸಾಗಿಸ್ತೀವೋ ಹಾಗೇ ನಮ್ಮ ಆರೋಗ್ಯ ನಮ್ಮ ಮಾತು ಕೇಳುತ್ತೆ. ಇಲ್ಲವಾದಲ್ಲಿ ಇಂಥಹ ಅಪಾಯಗಳು ಕಟ್ಟಿಟ್ಟಬುತ್ತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವಕರಲ್ಲೇ ಹಾರ್ಟ್ ಅಟ್ಯಾಕ್ ಹೆಚ್ಚು; ಕಾರಣವೇನು? ನೀವು ಓದಲೇಬೇಕಾದ ಸ್ಟೋರಿ..!

https://newsfirstlive.com/wp-content/uploads/2023/06/HEART_ATTACK.jpg

Load More