/newsfirstlive-kannada/media/post_attachments/wp-content/uploads/2025/06/MYS_JAYADEVA.jpg)
ಮೈಸೂರು: ಕಳೆದ ಕೆಲವು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಯುವಕ- ಯುವತಿಯರು ಸೇರಿದಂತೆ ಮಧ್ಯವಯಸ್ಕರು ಬಲಿ ಆಗುತ್ತಿರುವುದು ಆತಂಕ ಮೂಡಿಸಿದೆ. ಇಂದು ಬೆಳಗ್ಗೆಯೇ ಬೇಲೂರಿನ ಜೆಪಿ ನಗರದ ಮಹಿಳೆಯೊಬ್ಬರು ಜೀವ ಬಿಟ್ಟಿದ್ದಾರೆ. ಇದೆಲ್ಲಾ ಈಗೀರುವಾಗಲೇ ಎದೆನೋವು, ಹೃದಯ ಸಮಸ್ಯೆ ಇರುವವರು ಹಾಸನದಿಂದ ಮೈಸೂರಿಗೆ ಬಂದು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಎದೆನೋವು, ಹೃದಯ ಸಮಸ್ಯೆ ಇರುವವರು ಹಾಸನದಿಂದ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ 300 ರಿಂದ 400 ಮಂದಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಹಾಸನದಿಂದ ಮೈಸೂರಿಗೆ ಎದೆನೋವು ಎಂದು ಚಿಕಿತ್ಸೆಗೆ ಬರುವವರ ಸಂಖ್ಯೆ ಏರಿಕೆ ಆಗಿದೆ.
ಇದನ್ನೂ ಓದಿ: 800 ಗ್ರಾಂ ಚಿನ್ನ, ವೋಲ್ವೋ ಕಾರು ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಬಲಿ!
/newsfirstlive-kannada/media/post_attachments/wp-content/uploads/2025/06/MYS_JAYADEVA_1.jpg)
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 100 ಜನರು ಉಸಿರು ಚೆಲ್ಲುತ್ತಾರೆ. ಏಪ್ರಿಲ್ ತಿಂಗಳಲ್ಲಿ 109 ಮಂದಿ ಜೀವ ಬಿಟ್ಟರೇ, ಮೇ ತಿಂಗಳಲ್ಲಿ 106 ಜನ ನಿಧನರಾಗಿದ್ದಾರೆ. ತೀವ್ರ ಹೃದಯಾಘತಾದಿಂದ ಪ್ರತಿ ತಿಂಗಳು 70 ರಿಂದ 80 ಮಂದಿ ನಿಧನರಾಗುತ್ತಿದ್ದಾರೆ. ಈ ಪೈಕಿ ಬಹುತೇಕ ಯುವಕರೇ ಎನ್ನುವುದು ಅಚ್ಚರಿ ಮೂಡಿಸಿದೆ.
ಏಪ್ರಿಲ್- ಮೇ ತಿಂಗಳಲ್ಲಿನ ವರದಿ
- ಅಡ್ಮಿಷನ್: 1690- 1782
- Death: 109- 106
- Brought Dead: 24- 33
- ತೀವ್ರ ಹೃದಯಾಘಾತ- 750- 780
- ಹೃದಯಾಘಾತದಿಂದ ಸಾವು- 70- 82
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us