/newsfirstlive-kannada/media/post_attachments/wp-content/uploads/2025/06/heart-attack1.jpg)
ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ಅನ್ನೋ ಶಬ್ಧ ಸೃಷ್ಟಿಸಿರೋ ಆತಂಕ ಎಲ್ಲರ ನಿದ್ದೆಗೆಡಿಸಿದೆ. ನಿಂತಲ್ಲಿ-ಕುಂತಲ್ಲಿ ಜನ ಎದೆ ಹಿಡಿದು ಬೀಳುತ್ತಿರುವ ದೃಶ್ಯ ಭಯಹುಟ್ಟಿಸುತ್ತಿದೆ. ಹಾಸನದಲ್ಲಿ ಹೃದಯಾಘಾತದ ಮರಣ ಮೃದಂಗ ನಿಲ್ಲದಾಗಿದ್ದು ಇದು ಬೇರೆ ಜಿಲ್ಲೆಗಳಲ್ಲೂ ಆತಂಕ ಮೂಡಿಸಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಭಯ ಹುಟ್ಟಿಸುವ ಅನುಮಾನ ಹೊರಹಾಕಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 26ನೇ ಬಲಿ
ಅದ್ಯಾಕೋ ಮನುಷ್ಯನ ಇಂಜಿನ್.. ಹಾರ್ಟ್ ಅಂತಾರಲ್ಲ ಇದು ಪದೇ ಪದೆ ಕೈ ಕೊಡ್ತಿದೆ. ಜನರು ನಿಂತಲ್ಲೇ ಎದೆ ಹಿಡಿದುಕೊಂಡು ಇಹಲೋಕ ತೈಜಿಸುತ್ತಿದ್ದಾರೆ. ಆರೋಗ್ಯವಾಗಿದ್ದವರನ್ನೂ ಹಾರ್ಟ್ ಅಟ್ಯಾಕ್ ಅನ್ನೋ ಭೂತ ಬಲಿ ಪಡೆಯುತ್ತಿದೆ.. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾದಿಹಳ್ಳಿಯ 30 ವರ್ಷದ ರವಿಕುಮಾರ್ ಎಂಬುವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ರವಿಕುಮಾರ್ ಪತ್ನಿಯ ತವರು ಮನೆಗೆ ಹೋಗಿದ್ದಾಗ ಕುಸಿದು ಬಿದ್ದು ಸಾವಿನಮನೆ ಸೇರಿದ್ದಾರೆ. ಈ ಮೂಲಕ ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಹಲ್ಲುಗಳು ಫಳಫಳ ಹೊಳಿಬೇಕಂತ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ಈ ಟಿಪ್ಸ್ ಪಾಲಿಸಿ..!
ಹೃದಯಾಘಾತದಿಂದ ಸರ್ಕಾರಿ ಆಸ್ಪತ್ರೆ ವೈದ್ಯ ಸಾವು
ಹೃದಯಾಘಾತಕ್ಕೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯ ಬಲಿಯಾಗಿದ್ದಾರೆ.. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅರಸನಘಟ್ಟ ಗ್ರಾಮದ 48 ವರ್ಷದ ಡಾ. ಎನ್. ಸಂದೀಪ್ ನಿಶಕ್ತಿ ಹಿನ್ನೆಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು.. ಚಿಕಿತ್ಸೆ ಫಲಕಾರಿಯಾಗದೇ ಡಾ. ಸಂದೀಪ್ ಹೃದಯಾಘಾತದಿಂದ ಜೀವಕಳೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ 2 ತಿಂಗಳಲ್ಲಿ ಹೃದಯಾಘಾತಕ್ಕೆ 6 ಬಲಿ
ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ಪ್ರಕರಣಗಳು ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಬೆಳಗಾವಿಯಲ್ಲೂ ಕಳವಳಕ್ಕೆ ಕಾರಣವಾಗಿದೆ.. ಬೆಳಗಾವಿಯಲ್ಲಿ ಎರಡೇ ತಿಂಗಳಲ್ಲಿ ಹಾರ್ಟ್ ಅಟ್ಯಾಕ್ಗೆ ಆರು ಮಂದಿ ಪ್ರಾಣಬಿಟ್ಟಿದ್ದಾರೆ. ಮೇ ತಿಂಗಳಲ್ಲಿ 5 ಮಂದಿ ಮತ್ತು ಜೂನ್ ತಿಂಗಳಲ್ಲಿ ಒಬ್ಬರು ಬಲಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲೂ ಹೃದಯಾಘಾತ ಪ್ರಕರಣಗಳ ಆತಂಕ
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಹಾರ್ಟ್ ಅಟ್ಯಾಕ್ ಪ್ರಕರಣಗಳು ಆತಂಕ ಮೂಡಿಸಿವೆ.. ಮೇ ಮತ್ತು ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತದಿಂದ 37 ಮಂದಿ ಸಾವನ್ನಪ್ಪಿದ್ದಾರೆ.. ಜಿಲ್ಲೆಯಲ್ಲಿ ದಾಖಲಾದ ಹೃದಯ ಸಂಬಂಧಿಸಿದ ಒಟ್ಟು 187 ಪ್ರಕರಣ ಪೈಕಿ 37 ಮಂದಿ ಸಾವನ್ನಪ್ಪಿದ್ದಾರೆ.
ಕೋವಿಡ್ ಲಸಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ
ಹಾರ್ಟ್ ಅಟ್ಯಾಕ್ನಿಂದ ಸಾಲು ಸಾವು ಸಾವಾಗ್ತಿರೋ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಅಂತ ಸಿದ್ದರಾಮಯ್ಯ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುವಕರ ಹೃದಯ ಹಿಂಡ್ತಿರುವ ಹೃದಯಾಘಾತ.. ಸರ್ಕಾರದಿಂದ 10 ತಜ್ಞರ ತಂಡ ರಚನೆಗೆ ನಿರ್ಧಾರ
ಕೋವಿಡ್ ಲಸಿಕೆ ದುಷ್ಪರಿಣಾಮ?
ರಾಜ್ಯದಲ್ಲಿ ಎಳೆಯ ವಯಸ್ಸಿನವರ, ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೃದ್ರೋಗಿಗಳನ್ನು ಪರಿಶೀಲನೆಗೊಳಪಡಿಸಿ, ವಿಶ್ಲೇಷಣೆ ಮಾಡುವ ಕಾರ್ಯ ಕೂಡ ಪ್ರಗತಿಯಲ್ಲಿದೆ - ಸಿದ್ದರಾಮಯ್ಯ, ಸಿಎಂ
ಹೃದಯಾಘಾತದ ಬಗ್ಗೆ ಭಯ ಬೇಡ ಎಂದ ಆರೋಗ್ಯ ಸಚಿವರು
ಹೃದಯಾಘಾತ ಕೇಸ್ಗಳು ಹೆಚ್ಚಳ ಆಗ್ತಿರೋ ಬಗ್ಗೆ ಯಾವುದೇ ಭಯ ಬೇಡ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವರದಿ ಬರಲಿ ಬಂದಮೇಲೆ ಈ ಬಗ್ಗೆ ಕ್ರಮ ಅಂತ ಹೇಳಿದ್ದಾರೆ. ಒಟ್ನಲ್ಲಿ ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ಅನ್ನೋ ಹಲ್ಚಲ್ ಸೃಷ್ಟಿಸಿರೋ ಆತಂಕ ಸದ್ಯ ಎಲ್ಲರ ನಿದ್ದೆಗೆಡಿಸಿದೆ.. ಬ್ಯಾಕ್ ಟು ಬ್ಯಾಕ್ ಹೃದಯಾಘಾತಕ್ಕೆ ಕಾರಣವೇನು ಅನ್ನೋ ಪ್ರಶ್ನೆಗೆ ತಜ್ಞರ ಸಮಿತಿಯೇ ಉತ್ತರಿಸಬೇಕಿದೆ.
ಇದನ್ನೂ ಓದಿ: ಪೋಷಕರೇ ಎಚ್ಚರ.. ಈ ಲಕ್ಷಣ ನಿಮ್ಮ ಮಕ್ಕಳಿಗೆ ಬಂದಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ