Advertisment

Video: ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ.. ಕುಸಿದು ಬಿದ್ದು ಪುಣೆ ‘ಗರ್ಬಾ ಕಿಂಗ್’ ​ಸಾವು

author-image
AS Harshith
Updated On
Video: ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ.. ಕುಸಿದು ಬಿದ್ದು ಪುಣೆ ‘ಗರ್ಬಾ ಕಿಂಗ್’ ​ಸಾವು
Advertisment
  • ನವರಾತ್ರಿ ಉತ್ಸವದ ಡ್ಯಾನ್ಸ್​ ಮಾಡಿದ ಗರ್ಬಾ ಕಿಂಗ್​
  • ನೃತ್ಯ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಸಾವು
  • ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಸಾವಿನ ಕೊನೆಯ ಘಳಿಗೆ

ಗರ್ಬಾ ಕಿಂಗ್​ ಎಂದೇ ಪ್ರಸಿದ್ಧರಾಗಿರುವ ನಟ ಅಶೋಕ್​ ಮಾಲಿ ಹೃದಯಾಘಾತಕ್ಕೆ ನಿಧನರಾದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ನೃತ್ಯ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ.

Advertisment

ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ ಅಶೋಕ್​ ಮಾಲಿ ಸಾವನ್ನಪ್ಪಿದ್ದಾರೆ. ಅಶೋಕ್​ ಮಾಲಿ ಹೃದಯಾಘಾತದಿಂದ ಕುಸಿದು ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಇಂದೂ ಮುಂದುವರೆಯಲಿದೆ ದರ್ಶನ್​ ವಿಚಾರಣೆ.. ದಸರಾ ಒಳಗಾಗಿ ರಿಲೀಸ್ ಆಗ್ತಾರಾ? ಇಲ್ಲಿದೆ ಮಾಹಿತಿ

ದಸರಾ ಸಮಯದಲ್ಲಿ ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್​ ಗ್ರಾಮದಲ್ಲಿ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಶೋಕ್​ ಮಾಲಿ ಭಾಗವಹಿಸಿದ್ದು, ಪ್ರದರ್ಶನ ನೀಡಲು ಆಗಮಿಸಿದ್ದರು. ಅಶೋಕ್​ ಅವರ ಗರ್ಬಾ ನೃತ್ಯ ಕಾಣಲು ಅನೇಕ ಜನರು ನೆರೆದಿದ್ದರು.

Advertisment


">October 8, 2024

ಇದನ್ನೂ ಓದಿ: ಚಿನ್ನ ಖರೀದಿ ಮಾಡೋ ಮುನ್ನ ಎಚ್ಚರ! ಎಚ್ಚರ! ಈ ಸ್ಟೋರಿ ಓದದಿದ್ರೆ ಮೋಸ ಹೋಗ್ತೀರಾ!

ಪ್ರದರ್ಶನದ ವೇಳೆ ಅಶೋಕ್​ಗೆ ಹೃದಯಾಘಾತವಾಗಿದೆ. ನೃತ್ಯ ಮಾಡುತ್ತಿರುವಾಗಲೇ ಅಶೋಕ್​​ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಅಶೋಕ್​ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment