ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತ; ವಿಜಯಪುರದಲ್ಲಿ 28 ವರ್ಷ ಯುವಕನ ದುರಂತ ಅಂತ್ಯ

author-image
admin
Updated On
ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತ; ವಿಜಯಪುರದಲ್ಲಿ 28 ವರ್ಷ ಯುವಕನ ದುರಂತ ಅಂತ್ಯ
Advertisment
  • ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಯುವಕ
  • ಖುಷಿಯಲ್ಲಿ ಭರ್ಜರಿ ಡ್ಯಾನ್ಸ್ ಮಾಡುವ ಕೊನೆ ಗಳಿಗೆಯ ದೃಶ್ಯ ಸೆರೆ
  • ಸ್ನೇಹಿತರ ಜೊತೆ ಸಖತ್ ಸ್ಟೆಪ್ಸ್ ಹಾಕುತ್ತಿದ್ದ ಯುವಕನ ದಾರುಣ ಅಂತ್ಯ

ವಿಜಯಪುರ: ವಿಧಿಯಾಟ ಬಲ್ಲವರು ಯಾರು? ಸಾವು ಯಾವಾಗ ಬರುತ್ತೆ ಅನ್ನೋದನ್ನ ಹೇಳಲು ಸಾಧ್ಯವಿಲ್ಲ. ಡ್ಯಾನ್ಸ್ ಮಾಡುವಾಗಲೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ನಡೆದಿದೆ.

ಮಹಮ್ಮದ್ ಪೈಗಂಬರ್ ಗಂಗನಹಳ್ಳಿ (28) ಹಾರ್ಟ್ ಅಟ್ಯಾಕ್‌ನಿಂದ ಉಸಿರು ಬಿಟ್ಟ ನತದೃಷ್ಟ ಯುವಕ. ಮಹಮ್ಮದ್‌ ಪೈಗಂಬರ್‌ ತನ್ನ ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ. ಸ್ನೇಹಿತರ ಜೊತೆ ಸಂಗೀತಕ್ಕೆ ಸಖತ್ ಸ್ಟೆಪ್ಸ್ ಹಾಕುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಯುವಕ ಕುಸಿದು ಬಿದ್ದಿದ್ದು, ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಇದನ್ನೂ ಓದಿ: ಮತ್ತೆ ವಕ್ಕರಿಸಿದ ಕೊರೊನಾ.. ಮಾಸ್ಕ್ ಧರಿಸಿದ ಸಿಎಂ ಸಿದ್ದರಾಮಯ್ಯ; ನಾಳೆಯಿಂದ ಟೆಸ್ಟಿಂಗ್ ಆರಂಭ 

publive-image

ಮೃತ ಮಹಮ್ಮದ್ ಪೈಗಂಬರ್ ಅವರು ವಿಜಯಪುರದಲ್ಲಿ ಅಲೋಮಿನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದ. ಮಹಮ್ಮದ್ ಪೈಗಂಬರ್ ಹೃದಯಾಘಾತ ಸ್ನೇಹಿತರು, ಸಂಬಂಧಿಕರು ಬೆಚ್ಚಿ ಬೀಳುವಂತೆ ಮಾಡಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕ ಸಾವಿಗೂ ಮುನ್ನ ಖುಷಿಯಾಗಿ ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment