ಹೃದಯ ಸಮಸ್ಯೆ ಇರೋರಿಗೆ ಸೋಮವಾರ ಡೇಂಜರ್; ಯಾಕೆ ಈ ದಿನ ಹೆಚ್ಚು ಹೃದಯಾಘಾತ ಸಂಭವಿಸುತ್ತದೆ?

author-image
Ganesh
Updated On
Heart attack ಭುಜ ಮತ್ತು ತೋಳಿನ ನೋವು ಕೂಡ ಡೇಂಜರ್​; ಈ 6 ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ..
Advertisment
  • ಸೋಮವಾರ ಹೃದಯಾಘಾತದ ಅಪಾಯ ಹೆಚ್ಚು
  • ಬ್ರಿಟಿಷ್ ಹಾರ್ಟ್ ಫೌಂಡೇಶನ್​​ನಿಂದ ಅಚ್ಚರಿ ಮಾಹಿತಿ
  • ಹೃದಯ ಸಂಬಂಧಿತ ತಜ್ಞರು ಹೇಳೋದು ಏನು ಗೊತ್ತಾ?

ಹೃದಯಾಘಾತ ಪ್ರಕರಣಗಳ ವೇಗ ಹೆಚ್ಚುತ್ತಿದೆ. ಹೃದಯಾಘಾತವು ಯಾವುದೇ ಸಮಯದಲ್ಲಿ ಸಂಭವಿಸಬಹುದಾದರೂ, ಸೋಮವಾರದಂದು ಅದರ ಅಪಾಯವು ಹೆಚ್ಚು! ಹಾರ್ಟ್​ ಅಟ್ಯಾಕ್​ನ ಅಪಾಯ ಇತರ ದಿನಗಳಿಗಿಂತ ಸೋಮವಾರ ಶೇಕಡಾ 13 ರಷ್ಟು ಹೆಚ್ಚಾಗಿದೆ ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ (BHF) ವರದಿ ಮಾಡಿದೆ.

ನಟಿ ಮಾಧುರಿ ದೀಕ್ಷಿತ್ ಅವರ ಪತಿ, ಪ್ರಸಿದ್ಧ Cardiothoracic ಸರ್ಜನ್ ಡಾ.ಶ್ರೀರಾಮ್ ನೆನೆ ಕೂಡ, ಸೋಮವಾರ ಬೆಳಗ್ಗೆ ಹೃದಯಾಘಾತದ ಅಪಾಯವು ಹೆಚ್ಚು ಎಂದಿದ್ದಾರೆ. ಹೀಗಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ಜಾಗರೂಕರಾಗಿರಬೇಕು.
ಅಂಕಿ-ಅಂಶಗಳ ಪ್ರಕಾರ.. ಸೋಮವಾರ ಹೃದಯಾಘಾತದ ಸಂಭವ ಇತರ ದಿನಗಳಿಗಿಂತ ಹೆಚ್ಚಿದೆ. ಇದನ್ನು ‘ನೀಲಿ ಸೋಮವಾರ’ (Blue Monday) ಎಂದು ಕರೆಯಲಾಗುತ್ತದೆ. ಸೋಮವಾರ ಬೆಳಗ್ಗೆ 6 ರಿಂದ 10 ಗಂಟೆಯ ನಡುವೆ ಹೃದಯಾಘಾತದ ಅಪಾಯ ಹೆಚ್ಚು ಎಂದು ನಂಬಲಾಗಿದೆ. ಇದು ಕೇವಲ ಊಹೆ ಆಗಿದೆ. ಮತ್ತು ಅದರ ಬಗ್ಗೆ ಯಾವುದೇ ನಿರ್ದಿಷ್ಟ ಅಧ್ಯಯನ ಇಲ್ಲ.

ಇದನ್ನೂ ಓದಿ:ಆರ್​ಸಿಬಿಗೆ ಹಿಟ್​​ಮ್ಯಾನ್..? ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ -Video

ಡಾ.ನೆನೆ ಪ್ರಕಾರ.. ಸೋಮವಾರ ಬೆಳಗ್ಗೆ ಎದ್ದಾಗ, ರಕ್ತದ ಕಾರ್ಟಿಸೋಲ್ (Cortisol) ಮತ್ತು ಹಾರ್ಮೋನ್​ಗಳು ತುಂಬಾ ಹೆಚ್ಚಾಗಬಹುದು. ಇದಕ್ಕೆ ಕಾರಣ ಸಿರ್ಕಾಡಿಯನ್ ರಿದಮ್ (ಬಾಡಿ ಕ್ಲಾಕ್, Circadian rhythm) ಆಗಿರಬಹುದು. ಇದು ನಮ್ಮ ನಿದ್ರೆ ಮತ್ತು ಎಚ್ಚರದಲ್ಲಿ ಬದಲಾವಣೆಯನ್ನು ಸೃಷ್ಟಿಸುತ್ತದೆ. ತಜ್ಞರ ಪ್ರಕಾರ, ನಿದ್ರೆ ಮತ್ತು ಎಚ್ಚರದಲ್ಲಿ ಆಗುವ ಬದಲಾವಣೆಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎನ್ನುತ್ತಾರೆ.

ಸೋಮವಾರ ಬೆಳಗ್ಗೆ ಯಾಕೆ ಹೃದಯಾಘಾತ?
ತಜ್ಞರ ಪ್ರಕಾರ.. ಹೆಚ್ಚಿನ ಜನರು ವಾರಾಂತ್ಯದಲ್ಲಿ ತಡವಾಗಿ ಮಲಗುತ್ತಾರೆ. ವಾರಾಂತ್ಯದಲ್ಲಿ ಕೆಲವರು ಸಿನಿಮಾ ನೋಡಲು ಹೋಗುತ್ತಾರೆ, ಕೆಲವರು ಪಾರ್ಟಿ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ನಿದ್ರೆಯ ವಿಳಂಬ ಮತ್ತು ಬೆಳಗ್ಗೆ ಏಳುವ ಸಮಯದಲ್ಲಿ ಬದಲಾವಣೆ ಆಗುತ್ತದೆ. ಇದರಿಂದ ಸಿರ್ಕಾಡಿಯನ್ ರಿದಮ್ ಬದಲಾಯಿಸುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡ ಮತ್ತು ಕಾರ್ಟಿಸೋಲ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ:Watch: ಪಾಂಡ್ಯ ಐಷಾರಾಮಿ ಲೈಫ್​ಸ್ಟೈಲ್​​ಗೆ ಮತ್ತೊಂದು ಸಂಗಾತಿ; ಈ ಹೊಸ ರೇಂಜ್ ರೋವರ್ ಹೆಂಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment