/newsfirstlive-kannada/media/post_attachments/wp-content/uploads/2024/12/bng-accident5.jpg)
ಡಿಸೆಂಬರ್ ಬಂದರೇ ಸಾಕು ಎದೆ ನಡುಗುತ್ತೆ. ಒಂದಿಲ್ಲೊಂದು ದಾರುಣ ನಡೆದು ಹೋಗುತ್ತೆ. ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ಭೀಕರ ಅಪಘಾತವೊಂದು ನಡೆದು ಹೋಗಿದೆ. ಒಂದೇ ಕುಟುಂಬದ 6 ಮಂದಿಯನ್ನ ಬಲಿ ಪಡೆದಿದೆ. ಕಂಟೈನರ್ ಬಿದ್ದ ಏಟಿಗೆ ಕಾರೇ ಅಪ್ಪಚ್ಚಿ ಆಗಿದೆ. ಸಣ್ಣದೊಂದು ಸದ್ದೇ ಮಾಡದೇ 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡೆಡ್ಲಿ ಡಿಸೆಂಬರ್ನ ಆ್ಯಕ್ಸಿಡೆಂಟ್ ಎಷ್ಟು ಭೀಕರ ಆಗಿತ್ತು ಅನ್ನೋದಕ್ಕೆ ಆ ಕೋಟಿ ಬೆಲೆಯ ಕಾರು ಸಾಕ್ಷಿ ನುಡಿಯುತ್ತಿದೆ
ಸಿಸಿಟಿವಿ ದೃಶ್ಯ ಭಯಾನಕ ಅಪಘಾತದ ಸಾಕ್ಷಿ ಹೇಳುತ್ತಿದೆ!
ದೈತ್ಯ ಕಂಟೈನರ್ ಕಾರಿನ ಮೇಲೆ ಬಿದ್ದ ಕ್ಷಣಗಳು ಭೀಕರವಾಗಿತ್ತು. ಸಿಸಿಟಿವಿಯ ದೃಶ್ಯಾವಳಿಗಳೇ ಹೇಳುವಂತೆ ಕಂಟೈನರ್ ಡಿವೈಡರ್ ಮೇಲೆ ಹತ್ತಿತ್ತು. ಇದೇ ಸಂದರ್ಭ ಎದುರಿಗೆ ಬರ್ತಿದ್ದ ವೋಲ್ವೋ ಕಾರಿನ ಮೇಲೆ ಬಿದ್ದಿದೆ. ಈ ಟೈಮಲ್ಲೇ ನೋಡಿ, ಸಣ್ಣದೊಂದು ಕಿರುಚಾಟ, ಅರಚಾಟವೂ ಇಲ್ಲದೇ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ರು. 6 ಜನರು.ಮನೆಯ ಯಜಮಾನ, ಆತನ ಹೆಂಡ್ತಿ ಇಬ್ಬರು ಮಕ್ಕಳು, ತಮ್ಮನ ಹೆಂಡ್ತಿ ಮತ್ತವರ ಮಗು ಸೇರಿ 6 ಜನರು ಗುರುತೇ ಸಿಗದ ರೀತಿಯಲ್ಲಿ ನಜ್ಜುಗುಜ್ಜಾಗಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವು ಮಾತುಗಳನ್ನ ಕೇಳಿದರೆ ಎದೆ ಅಕ್ಷರಶಃ ಝಲ್ ಅನಿಸುತ್ತೆ.
ಸಿಸಿಟಿವಿ ದೃಶ್ಯವೂ ಇದನ್ನೇ ಹೇಳ್ತಿದೆ. ಪ್ರತ್ಯಕ್ಷದರ್ಶಿಗಳು ಇದನ್ನೇ ಸಾರಿ ಸಾರಿ ಹೇಳ್ತಿದ್ದಾರೆ. ಕಂಟೈನರ್ ವೇಗವಾಗಿ ಬರ್ತಿತ್ತು. ಅದೇನಾಯ್ತೋ? ಏನೋ? ಕಂಟೈನರ್ ಏಕಾಏಕಿ ಡಿವೈಡರ್ಗೆ ಹತ್ತಿಬಿಡ್ತು. ಆ ಕಡೆಯಿಂದ ಬರ್ತಿದ್ದ ಕಾರಿನ ಮೇಲೆ ದೈತ್ಯ ಕಂಟೈನರ್ ಬಿದ್ದುಬಿಟ್ಟಿತ್ತು. ಸ್ಥಳದಲ್ಲಿಯೇ 6 ಮಂದಿಯ ಒಂದೇ ಕುಟುಂಬ ಉಸಿರಾಡೋದಕ್ಕೂ ಆಸ್ಪದವಿಲ್ಲದೇ ದಾರುಣ ಸಾವು ಕಂಡಿದ್ದಾರೆ ಅಂತಿದ್ದಾರೆ.
ಚಂದ್ರಮ್ ಯೋಗಪ್ಪಗೋಳ ಕುಟುಂಬದ ದಾರುಣ ಸಾವು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಮಡಿದ 6 ಜನರ ಕುಟುಂಬದ ಮನೆ ಮಾಲೀಕನ ಚಂದ್ರಮ್ ಯೋಗಪ್ಪಗೋಳ. ಚಂದ್ರು ಮಹಾರಾಷ್ಟ್ರದ ಸಾಂಗ್ಲಿಯ ಮೊರಬಗಿ ಗ್ರಾಮದವರಾಗಿದ್ದು, ಅಲ್ಲೂ ಕೂಡ ಆಕ್ರಂದನ ಮುಗಿಲು ಮುಟ್ಟಿದೆ. ಚಂದ್ರಮ್ ಅಪ್ಪ ಅಸ್ವಸ್ಥರಾಗಿದ್ರು. ಮಕ್ಕಳಿಗೆ ಕ್ರಿಸ್ಮಸ್ ರಜೆ ಕೂಡ ಸಿಕ್ಕಿತ್ತು. ಹಾಗಾಗಿಯೇ ಇಡೀ ಕುಟುಂಬ ಊರಿನತ್ತ ಹೊರಟಿತ್ತು. ಆದರೇ, ವಿಧಿ ಯಮನೂರಿಗೇ ಕಳಿಸಿಬಿಟ್ಟ. ತಮ್ಮ ಕುಟುಂಬವನ್ನೇ ಕಳೆದುಕೊಂಡಿದ್ದೀವಿ ಅಂತ ಬಿಕ್ಕಳಿಸಿ ಅಳ್ತಿರೋ ಸಂಬಂಧಿಕರ ಮಾತು ಕರುಳು ಕಿವುಚುತ್ತಿದೆ.
ಒಂದೇ ಕುಟುಂಬದ 6 ಮಂದಿಯ ದುರ್ಮರಣ ನಿಜಕ್ಕೂ ಘೋರವಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಬಿದ್ದಿರೋ ಕಾರಿನ ಸಣ್ಣ ಸಣ್ಣ ಚೂರೂ ಸಹ ದಾರುಣ ಎಂಥದ್ದು? ಎಷ್ಟು ಗಂಭೀರವಾದ ಅಪಘಾತ ಇದು ಅನ್ನೋದನ್ನ ಹೇಳುತ್ತಿದೆ. ಕಂಟೈನರ್ ಬಿದ್ದ ರಭಸಕ್ಕೆ ಒಳಗಿಂದ ಸಣ್ಣದೊಂದು ಅರಚಾಟ, ಕಿರುಚಾಟವೂ ಕೇಳಲಿಲ್ಲ ಅಂದ್ರೆ ಅರ್ಥ ಮಾಡಿಕೊಳ್ಳಿ ಇದು ಇನ್ನೆಂತಹ ಡೆಡ್ಲಿ ಆ್ಯಕ್ಸಿಡೆಂಟ್ ಇರಬಹುದು ನೀವೇ ಊಹಿಸಿ.
ತಿಂಗಳುಗಳ ಹಿಂದೆಯಷ್ಟೇ ಕೋಟಿ ಬೆಲೆಯ ಕಾರು ಖರೀದಿ!
ನಿಜಕ್ಕೂ ಇವರು ಹತಭಾಗ್ಯರೇ ಬಿಡಿ, ಇಲ್ಲಿ ಅಪಘಾತದಲ್ಲಿ ಮಡಿದ ಕುಟಂಬಸ್ಥರು ಜಸ್ಟ್ ಎರಡು ತಿಂಗಳ ಹಿಂದಷ್ಟೇ ಐಷಾರಾಮಿ ವೋಲ್ವೋ XC90 ಕಾರನ್ನ ಖರೀದಿಸಿದ್ದರು. ಇನ್ನು ಕಾರಿನ ಬೆಲೆ ಒಂದು ಕೋಟಿಗೂ ಅಧಿಕ ಅಂತಲೇ ಹೇಳಲಾಗುತ್ತೆ. ಅಷ್ಟೇ ಅಲ್ಲ, ಮಾರ್ಟಿಯಲ್ ವೋಲ್ವೋ ಶೋರೂಂನಲ್ಲಿ ಚಂದ್ರಮ್ ಕಾರು ಖರೀದಿಸಿದ ಎಕ್ಸ್ಕ್ಲೂಸಿವ್ ವಿಡಿಯೋ ನಮಗೆ ಸಿಕ್ಕಿದ್ದು, ಅವರ ಪತ್ನಿ ಹಾಗೂ ಪುಟಾಣಿ ಮಗು ಸಂಭ್ರಮಿಸಿದ್ದು ಕರುಳು ಕಿವುಚುವಂತಿದೆ. ಶೋರೂಮ್ ಕೂಡ ಕೇಕ್ ಕತ್ತರಿಸಿ ಇವರನ್ನ ವೋಲ್ವೋ ಫ್ಯಾಮಿಲಿಗೆ ಸ್ವಾಗತ ಮಾಡಿತ್ತು.
ಇದನ್ನೂ ಓದಿ:ಕರಾಳ ಶನಿವಾರಕ್ಕೆ 13 ಮಂದಿ ಬಲಿ.. ರಾಜ್ಯದ ವಿವಿಧೆಡೆ ಇಂದು ಭೀಕರ ಅಪಘಾತ; ಎಲ್ಲೆಲ್ಲಿ? ಏನಾಯ್ತು?
ಇವತ್ತು ಈ ಇಡೀ ಕುಟುಂಬವೇ ಕಟುಕ ಕಂಟೈನರ್ ಕಾರಣಕ್ಕೆ ಬಲಿ ಆಗಿದೆ. ವಿಪರ್ಯಾಸ ನೋಡಿ, ಬಹುಪಾಲು ಮಂದಿ ವೋಲ್ವೋದಂಥಾ ಕಾರನ್ನ ಖರೀದಿಸೋದು ಸೇಫ್ಟಿ ಕಾರಣಕ್ಕೆ. ಏರ್ ಬ್ಯಾಗ್ ವಿಚಾರ ಇರ್ಬಹುದು, ಅಥವಾ ಕಾರನ್ನ ತುಂಬಾನೇ ಸ್ಟ್ರಾಂಗ್ ಆಗಿ ಡಿಸೈನ್ ಮಾಡಿದ್ದಾರೆ ಅಂತಲೂ ಇರಬಹುದು. ಎಲ್ಲಾ ಲೆಕ್ಕಾಚಾರದಲ್ಲೂ ವೋಲ್ವೋದಂಥಾ ಕಾರು ಸೇಫ್ಟಿ ನೀಡುತ್ತದೆ. ಯಾರೋ ಎದುರಿಗೆ ಬಂದು ಗುದ್ದಿದ್ದಿದ್ದರೇ ಬದುಕುಳಿಯುತ್ತಿದ್ದರೋ? ಏನೋ? ಆದರೇ ವಿಧಿ ಆಟ ಕಂಟೈನರ್ ಕಾರಿನ ಮೇಲೆ ಬಿದ್ದು ಇಡೀ ಕುಟುಂಬವನ್ನೇ ಬಲಿ ಪಡೆದಿದೆ.
ಮುದ್ದು ಮುದ್ದಾಗಿ ಓಡಾಡುತ್ತಿದ್ದ ಕಂದಮ್ಮಗಳ ಆ ಮೃತ ದೇಹಗಳನ್ನು ಆಂಬ್ಯಲೆನ್ಸ್ಗೆ ತುಂಬಿದ ಸಿಬ್ಬಂದಿಯೇ ಕ್ಷಣಕಾಲ ಕಣ್ಣೀರಿಟ್ಟಿದ್ದರು. ಕಂಟೈನರ್ ಎಂಥಾ ತಣ್ಣನೆಯ ಕ್ರೌರ್ಯಗೈದಿತ್ತು ಅಂದರೆ ಮೃತ ದೇಹದ ಮರ್ಮಾಂಗಗಳಿಂದಲೂ ರಕ್ತಸ್ರಾವ ಆಗಿರುವುದು ಕಂಡುಬಂದಿದೆ.
ಇದನ್ನೂ ಓದಿ:ಮಳವಳ್ಳಿಯಲ್ಲಿ ಭೀಕರ ಅಪಘಾತ.. ಮೂವರು IIT ವಿದ್ಯಾರ್ಥಿಗಳ ದುರಂತ; ಹೃದಯ ವಿದ್ರಾವಕ ಘಟನೆ
ಆರು ವರ್ಷದ ಕಂದಮ್ಮನ ದೃಶ್ಯವಂತೂ ಕಣ್ಣಿಂದ ನೋಡೋದಕ್ಕೆ ಆಗೋದೇ ಇಲ್ಲ. ಊರಿಗೆ ಹೋಗಿ ಹಾವು ಏಣಿ ಆಟ ಆಡಬೇಕು ಅಂತ ಬಯಸಿದ್ರೋ? ಏನೋ? ಆದರೇ, ಕಂಟೈನರ್ ಬಿದ್ದ ಏಟಿಗೆ ಆಟ ಆಡಬೇಕಿದ್ದ ಕಂದಮ್ಮಗಳು ಸಾವನ್ನಪ್ಪಿವೆ. ಹಾವು ಏಣಿ ಆಟದ ಚಾರ್ಟ್ ಮಾತ್ರ ತಣ್ಣನೆಯ ಕ್ರೌರ್ಯದ ಭೀಕರ ಅಪಘಾತದ ಕಥೆ ಹೇಳುತ್ತಿದೆ. ಇನ್ನು, ತಮಗೆ ಅನ್ನ ನೀಡುತ್ತಿದ್ದ ಮಾಲೀಕ ಸತ್ತ ಅನ್ನೋದು ಗೊತ್ತಾದ ಕೂಡಲೇ ಸ್ಥಳಕ್ಕೆ ಆಗಮಿಸಿದಿ ಚಂದ್ರಮ್ ಕಂಪನಿಯ ಸಿಬ್ಬಂದಿ ಬಿಕ್ಕಳಿಸುತ್ತಲೇ ಹೇಳಿದ ಮಾತುಗಳು ಹೃದಯ ಹಿಂಡುವಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ