/newsfirstlive-kannada/media/post_attachments/wp-content/uploads/2025/05/banu_mushtaq_NEW_1.jpg)
ಕನ್ನಡದ ಪ್ರಸಿದ್ಧ ಸಾಹಿತಿ ಹಾಸನ ಜಿಲ್ಲೆಯ ಬಾನು ಮುಷ್ತಾಕ್ ಅವರ ಸಣ್ಣ ಕಥಾಸಂಕಲನ ಹಾರ್ಟ್ ಲ್ಯಾಂಪ್ ಕೃತಿಗೆ 2025ರ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿದೆ.
ಟೇಟ್ ಮಾಡರ್ನ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಾರಂಭದಲ್ಲಿ ಮಾತನಾಡಿದ ಬಾನು ಮುಷ್ತಾಕ್ ಅವರು, ವೈವಿಧ್ಯತೆಗೆ ದೊರೆತ ಗೆಲುವು. ಯಾವುದನ್ನು ಸಣ್ಣದು ಎಂದು ತಿಳಿಯಬೇಡಿ. ಪ್ರತಿ ಎಳೆಯು ಕಥೆಯ ಭಾರವನ್ನು ಹೊಂದಿರುತ್ತದೆ. ಇದರಿಂದಲೇ ಈ ಅದ್ಭುತವಾದ ಪುಸ್ತಕ ಸಿದ್ಧವಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂತಿಮ ಪಂದ್ಯ, ಮತ್ತೆ ಎಲ್ಲರ ಹೃದಯ ಗೆದ್ದ ವೈಭವ್ ಸೂರ್ಯವಂಶಿ.. ಏನ್ ಮಾಡಿದರು?
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕಥೆಯನ್ನು ಬರೆಯಲಾಗಿತ್ತು.
ಹಾರ್ಟ್ ಲ್ಯಾಂಪ್ ಕೃತಿಯು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿ ಮಹಿಳೆಯರ ಜೀವನದ ಕಥೆಗಳನ್ನು ಹೊಂದಿದೆ. ಈ ಪುಸ್ತಕವನ್ನು ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಅವರು ಸುಂದರವಾದ, ಜೀವನವನ್ನು ದೃಢೀಕರಿಸುವ ಕಥೆಗಳು. ಓದುಗರಿಗೆ ಇದು ಹೊಸದೊಂದು ಅನುಭವ ನೀಡುತ್ತದೆ ಎಂದಿದ್ದಾರೆ.
ಬಾನು ಮುಷ್ತಾಕ್ ಅವರು ಬರೆದ ಹಾರ್ಟ್ ಲ್ಯಾಂಪ್ ಕೃತಿಯನ್ನು ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿದವರು ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಆಗಿದ್ದಾರೆ. ಲಂಡನ್ನಲ್ಲಿ ಪ್ರಶಸ್ತಿ ಪಡೆಯುವಾಗ ದೀಪಾ ಬಸ್ತಿ ಕೂಡ ಜೊತೆಯಲ್ಲಿದ್ದರು. ಮೇ 21 ರಂದು ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇನ್ನು ಈ ಪ್ರಶಸ್ತಿಯು ಒಟ್ಟು 50,000 ಪೌಂಡ್ (57.28 ಲಕ್ಷ ರೂಪಾಯಿ ) ಹೊಂದಿರುತ್ತದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ