/newsfirstlive-kannada/media/post_attachments/wp-content/uploads/2025/01/DR-AJAY-3.jpg)
ಏರ್ಲಿಫ್ಟ್, ಝೀರೋ ಟ್ರಾಫಿಕ್ ಮೂಲಕ ದೇಹದ ಅಂಗಾಂಗಳ ಸಾಗಾಟದ ಬಗ್ಗೆ ಇಲ್ಲಿವರೆಗೆ ಕೇಳಿದ್ದೇವು. ಕಳೆದ ಎರಡು ದಿನಗಳಿಂದ ಹೈದರಾಬಾದ್ ವಿಶೇಷ ಕಾರಣಕ್ಕೆ ಸುದ್ದಿ ಆಗ್ತಿದೆ. ಮೆಟ್ರೋದಲ್ಲಿ ವೈದ್ಯಕೀಯ ಚಮತ್ಕಾರ ನಡೆದಿದ್ದು, ಜೀವಂತ ಹೃದಯ ಸಾಗಾಟ ಮಾಡಲಾಗಿದೆ. ಇನ್ನೋ ಒಂದು ವಿಶೇಷ ಅಂದರೆ ಅದರ ನೇತೃತ್ವ ವಹಿಸಿರೋದು ಕನ್ನಡಿಗ!
ಏನಿದು ಖುಷಿ ಸುದ್ದಿ..?
ಜನವರಿ 17 ರಂದು ಮೆಟ್ರೋದಲ್ಲಿ ಜೀವಂತ ಹೃದಯ ಸಾಗಿಸಲಾಗಿದೆ. 35 ವರ್ಷದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದರು. ಇದೇ ಅವಧಿಯಲ್ಲಿ ಗ್ಲೆನ್ ಗೆಲ್ಸ್ ಗ್ಲೊಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯದ ಅಗತ್ಯವಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯಾಧಿಕಾರಿಗಳ ತಂಡ ಮೆಟ್ರೋದಲ್ಲಿ ಹೃದಯವನ್ನು ಸಾಗಾಟ ಮಾಡಲು ನಿರ್ಧರಿಸಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಭಾರತದ ಚಿನ್ನದ ರಾಜ ಯಾರು? ದೇಶದ ಎಷ್ಟು ಪರ್ಸೆಂಟ್ ಬಂಗಾರ ಇಲ್ಲಿದೆ?
ದೇಶದಲ್ಲೇ ಮೊದಲು..
- ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮೆಟ್ರೋದಲ್ಲಿ ಹೃದಯ ಸಾಗಾಟ
- 13 ಕಿಮೀ ಅಂತರದ ಆಸ್ಪತ್ರೆಗೆ ಕೇವಲ 13 ನಿಮಿಷದಲ್ಲಿ ತಲುಪಿಸಿ ದಾಖಲೆ
- 13 KM ಅಂತರದಲ್ಲಿ 13 ನಿಮಿಷದಲ್ಲಿ 13 ಸ್ಟೇಷನ್ಗಳ ಕ್ರಾಸ್ ಆದ ಮೆಟ್ರೋ
- ಮೆಟ್ರೋ ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ನಿರ್ಮಿಸಿ ಹೃದಯ ಸಾಗಾಟ
- ಹೈದರಾಬಾದ್ನ ಕಾಮಿನೇನಿ ಆಸ್ಪತ್ರೆಯಿಂದ ಗ್ಲೆನ್‌ಗೆಲ್ಸ್ ಆಸ್ಪತ್ರೆಗೆ ಸಾಗಾಟ
- ಹೃದಯ ಸಾಗಾಟಕ್ಕೆ ಹೈದರಾಬಾದ್ ಮೆಟ್ರೋ ಅಧಿಕಾರಿಗಳು ಸಾಥ್
- ಹೈದರಾಬಾದ್ನಲ್ಲಿ ಒಟ್ಟು ಮೆಟ್ರೋದ ಮೂರು ಕಾರಿಡಾರ್ಗಳಿವೆ
- 69.2 ಕಿಲೋ ಮೀಟರ್ ದೂರವನ್ನು ಮೂರು ಕಾರಿಡರ್ಗಳು ಕವರ್ ಮಾಡ್ತವೆ
- ಹೈದರಾಬಾದ್ನ ಮೆಟ್ರೋದಲ್ಲಿ ಪ್ರತಿನಿತ್ಯ 5 ಲಕ್ಷ ಪ್ರಯಾಣಿಕರು ಓಟಾಟ
ಕನ್ನಡಿಗನ ನೇತೃತ್ವದಲ್ಲಿ ಕಾರ್ಯಾಚರಣೆ..!
ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟದ ಉಸ್ತುವಾರಿ ವಹಿಸಿರೋದು ಕನ್ನಡಿಗ. ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞರಾದ ಡಾ.ಅಜಯ್ ಜೋಶಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಡಾ. ಅಜಯ್, ಧಾರವಾಡ ಮೂಲದವರು. ಸದ್ಯ ಹೈದರಬಾದ್ನ ಗ್ಲೆನ್‌ಗೆಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡ-ಹುಬ್ಬಳ್ಳಿಯಲ್ಲಿ ಶಿಕ್ಷಣ ಪೂರೈಸಿರೋ ಡಾ.ಅಜಯ್, ಬಳಿಕ ಇಂಗ್ಲೆಂಡ್ನಲ್ಲಿ ಶ್ವಾಸಕೋಶ ಮತ್ತು ಹೃದಯ ಕಸಿ ಚಿಕಿತ್ಸೆ ಕುರಿತು ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಇವರ ಪತ್ನಿ ಡಾ. ನಂದಿನಿ ಕೂಡ ವೈದ್ಯರಾಗಿದ್ದು, ಸ್ತ್ರಿರೋಗ ತಜ್ಞೆ ಆಗಿದ್ದಾರೆ. ಇವರ ಪಾಲಕರು ಹುಬ್ಬಳ್ಳಿಯ ನವನಗರದಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ:ಮುಂದಿನ ತಿಂಗಳು ಮದುವೆ ನಿಶ್ಚಯ.. ರಸ್ತೆ ಅಪಘಾತದಲ್ಲಿ ಕಣ್ಮುಚ್ಚಿದ ನರೇಗಾ ಇಂಜಿನಿಯರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ