newsfirstkannada.com

ಹೆಚ್ಚುತ್ತಿದೆ ಬಿಸಿಲ ಧಗೆ.. ಮಕ್ಕಳಿಗಾಗಿ 3 ದಿನ ಶಾಲೆಗಳಿಗೆ ರಜೆ

Share :

Published April 17, 2024 at 12:36pm

  ಮಕ್ಕಳ ಆರೋಗ್ಯ ದೃಷ್ಟಿಯಿಂದ ಮೂರು ದಿನ ರಜೆ ಘೋಷಣೆ

  ವಿಪರೀತ ಬಿಸಿ ಗಾಳಿಯಿಂದ ತತ್ತರಿಸಿರುವ ಜನರು.. ಎಚ್ಚರಿಕೆಯಿಂದಿರಿ

  ಮಹಾರಾಷ್ಟ್ರದಲ್ಲಿ 46 ದಿನಗಳಲ್ಲಿ 86 ಹೀಟ್​ ಸ್ಟ್ರೋಕ್​ ಪ್ರಕರಣಗಳು ಬೆಳಕಿಗೆ

ಬಿಸಿಲ ಧಗೆ ಹೆಚ್ಚುತ್ತಿದ್ದು, ತಾಪಮಾನ ವಿಪರೀತ ಏರುತ್ತಿದೆ. ಮತ್ತೊಂದೆಡೆ ಬಿಸಿ ಗಾಳಿ ಬಿಟ್ಟು ಬಿಡದೆ ಕಾಡುತ್ತಿದೆ. ಇದನ್ನರಿತ ಒಡಿಶಾದ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಮಕ್ಕಳಿಗೆ ಮೂರು ದಿನ ರಜೆ ಘೋಷಿಸಿದೆ.

ಒಡಿಶಾ ತುಂಬೆಲ್ಲಾ ಜನರು ಬಿಸಿ ಗಾಳಿಯಿಂದ ಬಾಧೆ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿಕೊಂಡು ಸರ್ಕಾರವು ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಏಪ್ರಿಲ್​ 18ರಿಂದ ಏಪ್ರಿಲ್​ 20ರವರೆಗೆ ರಜೆ ಘೋಷಿಸಿದೆ.

ಇತ್ತ ಮಹಾರಾಷ್ಟ್ರ ಕೂಡ ಬಿಸಿಲ ಧಗೆಯಿಂದ ಬಳಲುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 46 ದಿನಗಳಲ್ಲಿ 86 ಹೀಟ್​ ಸ್ಟ್ರೋಕ್​ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳೆದ ವರ್ಷ 353 ಹೀಟ್​ ಸ್ಟ್ರೋಕ್​ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: VIDEO: ವಾಟರ್ ಟ್ಯಾಂಕರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ.. ಓರ್ವ ಸಾವು, ಮತ್ತೋರ್ವ ಗಂಭೀರ

ಹವಾಮಾನ ಇಲಾಖೆಯ ಪ್ರಕಾರ ಓಡಿಶಾ ಏಪ್ರಿಲ್​ 20ರವರೆಗೆ ಬಿಸಿಲ ಧಗೆ ಹೆಚ್ಚಿರಲಿದೆ ಎಂದು ಹೇಳಿದೆ. ಇನ್ನು ಸಾರ್ವಜನಿಕರಲ್ಲಿ ಮದ್ಯಾಹ್ನ 11ರಿಂದ 3 ಗಮಟೆಯವರೆಗೆ ಓಡಾಟ ಮಾಡಬೇಡಿ ಎಂದು ಹೇಳಿಕೆ. ಜೊತೆಗೆ ಮುನ್ನೆಚ್ಚರಿಕೆಯ ಕ್ರಮವಹಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್ಚುತ್ತಿದೆ ಬಿಸಿಲ ಧಗೆ.. ಮಕ್ಕಳಿಗಾಗಿ 3 ದಿನ ಶಾಲೆಗಳಿಗೆ ರಜೆ

https://newsfirstlive.com/wp-content/uploads/2024/03/heat-wave-1.jpg

Load More