ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮಾರ್ಚ್​​ ತಿಂಗಳಲ್ಲೇ ಅತ್ಯಧಿಕ ಬಿಸಿಲು ದಾಖಲು

author-image
Ganesh Nachikethu
Updated On
ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿ; ಮಾರ್ಚ್​​ ತಿಂಗಳಲ್ಲೇ ಅತ್ಯಧಿಕ ಬಿಸಿಲು ದಾಖಲು
Advertisment
  • ಮಾರ್ಚ್​​ 18ರಂದು ಬೆಂಗಳೂರಲ್ಲಿ ಅತ್ಯಧಿಕ ತಾಪಮಾನ
  • ಮಂಗಳವಾರ ಸುಡೋ ಬಿಸಿಲಿಗೆ ಬಸವಳಿದ ಸಿಟಿಯ ಜನ!
  • ಮುಂದಿನ ತಿಂಗಳು ಏಪ್ರಿಲ್​​ನಲ್ಲಿ ಭಾರೀ ಬಿಸಿಲು ಮುನ್ಸೂಚನೆ

ಈ ಬಾರಿಯ ಮಾರ್ಚ್​​ ತಿಂಗಳು ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ಸಾಕಪ್ಪಾ ಸಾಕು ಅನ್ನೋ ಹಾಗಾಗಿದೆ. ಮಧ್ಯಾಹ್ನ ಆದ್ರೆ ನೆತ್ತಿ ಸುಡುವ ಬಿಸಿಲಿನ ಶಾಖ ತಾಳಲಾರದೇ ಒದ್ದಾಡುತ್ತಿದ್ದಾರೆ. ಬಿಸಿಲೇರಿದ ಬೆಂಗಳೂರಿನ ತಾಪಮಾನ ಮಾರ್ಚ್​​​​ 18 ಅಂದ್ರೆ ಮಂಗಳವಾರ ಹೊಸ ದಾಖಲೆ ಬರೆದಿದೆ. ಉದ್ಯಾನನಗರಿಯಲ್ಲಿ ಮಾರ್ಚ್​​ ತಿಂಗಳಲ್ಲಿ ಅಧಿಕ ತಾಪಮಾನ (Temperature) ದಾಖಲಾಗಿದೆ.

ಮಾರ್ಚ್​​ ಆರಂಭದಿಂದಲೂ ಬೆಂಗಳೂರಲ್ಲಿ ಬಿಸಿಲಿನ ಸೆಕೆ ಸುಸ್ತಾಗುವಂತೆ ಮಾಡುತ್ತಿದೆ. ದಿನ ಕಳೆದಂತೆ ತಾಪಮಾನ ಏರಿಕೆಯಾಗುತ್ತಿದ್ದು, ಮಾರ್ಚ್​​ 18ರಂದು ಅತ್ಯಧಿಕ ತಾಪಮಾನ ಅಂದ್ರೆ 35 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಕಳೆದ ವರ್ಷದಲ್ಲೇ ಇಷ್ಟೊಂದು ಉಷ್ಣಾಂಶ ಕಂಡು ಬಂದಿರಲಿಲ್ಲ. ದಾಖಲೆಯ ತಾಪಮಾನ ವರದಿಯಾಗಿರೋದು ಬೆಂದಕಾಳೂರಿನ ಬಿಸಿ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ನೀಡಿದೆ.

publive-image

2016ರಲ್ಲಿ ಬೆಂಗಳೂರಿನ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್‌ಗೆ ಗುರಿಯಾಗಿತ್ತು. ಕಳೆದ ವರ್ಷ ಮಾರ್ಚ್ 5ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎನ್ನಲಾಗಿದೆ. ದಿನ ಕಳೆದಂತೆ ಬಿಸಿಲಿನ ತಾಪಮಾನ ಮತ್ತಷ್ಟು ಏರಿಕೆಯಾಗುತ್ತಾ ಇದ್ದು, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಲರ್ಟ್ ಕೂಡ ನೀಡಿದೆ.

ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳ ಪ್ರಕಾರ ಮಾರ್ಚ್​​​ 20ರ ಜೊತೆಗೆ 25ರವರೆಗೂ ಇದೇ ರೀತಿಯ ತಾಪಮಾನ ಮುಂದುವರಿಯಲಿದೆ. ಮಾರ್ಚ್​​ ಬಳಿಕ ಮತ್ತೆ ಏಪ್ರಿಲ್‌ ತಿಂಗಳು ಅತ್ಯಧಿಕ ತಾಪಮಾನಕ್ಕೆ ಗುರಿಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment