newsfirstkannada.com

ಬಿಸಿಲ ಉರಿಗೆ ಬೆಂದ ಬೆಂಗಳೂರು; ನಿಮ್ಮ ಜೀವ ರಕ್ಷಣೆಗೆ ಸಲಹೆ, ವೈದ್ಯರಿಂದ ಎಚ್ಚರಿಕೆ..!

Share :

Published February 19, 2024 at 11:30am

    ಕಳೆದ ಬಾರಿಗೆ ಹೋಲಿಸಿದರೆ ಭಾರೀ ಬಿಸಿಲು

    ಬಿಸಿಲ ಏರಿಕೆಗೆ ಇದೆ 4 ಪ್ರಮುಖ ಕಾರಣ

    ಬಿಸಿಲಿನಿಂದ ಪಾರಾಗಲು ಜನ ಏನ್ಮಾಡ್ತಿದ್ದಾರೆ ಗೊತ್ತಾ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ‌ ತಾಪಮಾನ‌ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ನೆತ್ತಿ ಸುಡುತ್ತಿರುವ ಬಿಸಿಲಿನ ತಾಪಕ್ಕೆ ಬೆಂಗಳೂರಿನ ಮಂದಿ ಹೈರಾಣಾಗಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಫೆಬ್ರವರಿಯಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ವೇಳೆ ಗರಿಷ್ಠ ಉಷ್ಠಾಂಶ 30 ಡಿಗ್ರಿ ಸೆಲ್ಸಿಯಷ್ ಹಾಗೂ ಕನಿಷ್ಠ ಉಷ್ಠಾಂಶ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಶಿವರಾತ್ರಿ ಕಳೆಯುವವರೆಗೂ ರಾಜ್ಯದಲ್ಲಿ ಚಳಿಗಾಲ ಇರುತ್ತದೆ. ಈ ವರ್ಷ ಈಗಾಗಲೇ ಬಿಸಿಲು ಹೆಚ್ಚಾಗಿದೆ. ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಆಗುತ್ತಿದ್ದ ಬಿಸಿಲು ಈಗಲೇ ಹೆಚ್ಚಾಗಿದೆ. ಕಳೆದ 10 ದಿನಗಳಿಂದ ಸತತವಾಗಿ ಉಷ್ಣತೆ ಏರಿಕೆಯಾಗಿದ್ದು ಜನರ ಪರದಾಟ ನಡೆಸುತ್ತಿದ್ದಾರೆ.

ನೆತ್ತಿ ಸುಡ್ತಿರುವ ಬಿಸಿಲು?

  • ಫೆಬ್ರವರಿ 14: 31.2 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
  • ಫೆಬ್ರವರಿ 15: 31.4 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
  • ಫೆಬ್ರವರಿ 16: 30 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
  • ಫೆಬ್ರವರಿ 17: 32 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
  • ಫೆಬ್ರವರಿ 18: 32.6 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌

ಬಿಸಿಲು ಏರಿಕೆಗೆ ಕಾರಣ?

  • ಮಳೆ ಮತ್ತು ಚಳಿಯ ಪ್ರಮಾಣ ಕಡಿಮೆ ಇದ್ದು, ತಾಪಮಾನ ಹೆಚ್ಚಿದೆ
  • ವಾಹನಗಳ ಸಂಖ್ಯೆಯಲ್ಲಿ ಏರಿಕೆ, ಸಮತೋಲನಕ್ಕೆ ಬೇಕಾದ ಮರಗಳ ಪ್ರಮಾಣದಲ್ಲಿ ಇಳಿಕೆ
  • ನಿರಂತರ ಅರಣ್ಯ ನಾಶದಿಂದ ಭೂಮಿಯಲ್ಲಿ ತೇವಾಂಶದ ಕೊರತೆ ಇದೆ
  • ವಾತಾವರಣದಲ್ಲಿ ತೇವಾಂಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವುದು

ಎಚ್ಚರ ಅಂತಾರೆ ವೈದ್ಯರು..!
ಹೆಚ್ಚನ ತಾಪಮಾನದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಜನರು ಹೆಚ್ಚು ನೀರು ಕುಡಿಯಬೇಕು. ಬಿಸಿಲಿನಲ್ಲಿ ಹೆಚ್ಚು ಓಡಾಡದೆ ಇರುವಂತೆ ಸಲಹೆ ನೀಡಿದ್ದಾರೆ. ಬಿಸಿಲ ಝಳ ಹೆಚ್ಚಿರುವುದರಿಂದ ದೇಹದಲ್ಲಿನ ನೀರಿನಂಶ ಸಾಕಷ್ಟು ಕಡಿಮೆಯಾಗುತ್ತಿದೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಕುಡಿಯುವಂತೆ ಸಲಹೆ ನೀಡಿದ್ದಾರೆ.

ನೀರು ಕುಡಿಯದಿದ್ದರೆ ಉರಿ ಮೂತ್ರದ ಸಮಸ್ಯೆ, ಜತೆಗೆ ಕಿಡ್ನಿ ಸ್ಟೋನ್ ಸಮಸ್ಯೆ ಉಲ್ಬಣಿಸೋ‌ ಸಾಧ್ಯತೆ ಇದೆ. ಈ ಸಮಯದಲ್ಲಿ ಅಲರ್ಜಿ ಕೂಡ ಹೆಚ್ಚಾಗಿ ಜನರನ್ನು ಕಾಡುತ್ತದೆ‌. ಬಿಸಿಲ ಬೇಗೆಯಿಂದ ಪಾರಾಗಲು ಜನರು ತಂಪು ಪಾನೀಯ, ಮಜ್ಜಿಗೆ, ಎಳನೀರು, ಹಣ್ಣು, ಜ್ಯೂಸ್ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳುವುದಕ್ಕಾಗಿ ಛತ್ರಿ ಆಶ್ರಯ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಸಿಲ ಉರಿಗೆ ಬೆಂದ ಬೆಂಗಳೂರು; ನಿಮ್ಮ ಜೀವ ರಕ್ಷಣೆಗೆ ಸಲಹೆ, ವೈದ್ಯರಿಂದ ಎಚ್ಚರಿಕೆ..!

https://newsfirstlive.com/wp-content/uploads/2024/02/HEAT-WAVES.jpg

Load More