Advertisment

ಪವಿತ್ರ ಸ್ಥಳ ಮೆಕ್ಕಾದಲ್ಲಿ ರಣಬಿಸಿಲಾಘಾತ.. 98 ಭಾರತೀಯರು ಸೇರಿ ಸಾವನ್ನಪ್ಪಿರುವವರ ಸಂಖ್ಯೆ 1,000ಕ್ಕೆ ಏರಿಕೆ

author-image
AS Harshith
Updated On
ಪವಿತ್ರ ಸ್ಥಳ ಮೆಕ್ಕಾದಲ್ಲಿ ರಣಬಿಸಿಲಾಘಾತ.. 98 ಭಾರತೀಯರು ಸೇರಿ ಸಾವನ್ನಪ್ಪಿರುವವರ ಸಂಖ್ಯೆ 1,000ಕ್ಕೆ ಏರಿಕೆ
Advertisment
  • ಬಿಸಿಲ ಧಗೆ ತಡೆಯದೆ ಮೃತಪಟ್ಟವರ ಸಂಖ್ಯೆ 1,000ಕ್ಕೆ ಏರಿಕೆ
  • 175,000 ಭಾರತೀಯ ನಾಗರಿಕರು ಹಜ್ ಯಾತ್ರೆಯಲ್ಲಿದ್ದಾರೆ
  • ತಾಪಮಾನ ಏರಿಕೆಯಿಂದಾಗಿ ದುರಂತ್ಯ ಅಂತ್ಯ ಕಾಣುತ್ತಿರುವ ಹಜ್​ ಯಾತ್ರಿಕರು

ಮುಸ್ಲೀಮರ ಪವಿತ್ರ ಸ್ಥಳ ಮೆಕ್ಕಾಗೆ ಬಿಸಿಲಿನ ತಾಪ ತಟ್ಟಿದೆ. ಹಜ್​​ ಯಾತ್ರೆಗೆ ತೆರಳಿದ್ದವರು ಹೀಟ್​​​ವೇವ್​​ನಿಂದಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

Advertisment

ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದಲ್ಲಿ ರಣಬಿಸಿಲಾಘಾತ

ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು ಅನ್ನೋ ಮಹದಾಸೆ ಪ್ರತಿಯೊಬ್ಬ ಮುಸ್ಲೀಮರದ್ದು. ಅಂತಹ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ರಣಬಿಸಿಲಿನಿಂದ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಇದೀಗ ಮೆಕ್ಕಾದಲ್ಲಿ ಬಿಸಿಲ ಧಗೆಗೆ ಬಲಿಯಾದ ಯಾತ್ರಿಕರ ಸಂಖ್ಯೆ 1,000ದ ಗಡಿ ದಾಟಿದ್ದು, ಈ ಆಘಾತಕಾರಿ ಸುದ್ದಿ ಕೇಳಿ ವಿಶ್ವವೇ ಬೆಚ್ಚಿಬಿದ್ದಿದೆ.

publive-image

ಇದನ್ನೂ ಓದಿ: ಇಂದು ದರ್ಶನ್ ಆ್ಯಂಡ್​ ಗ್ಯಾಂಗ್ ಕಸ್ಟಡಿ ಅಂತ್ಯ.. ಕೋರ್ಟ್​ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ?

ಮೆಕ್ಕಾದ ಹಜ್ ಯಾತ್ರೆಯಲ್ಲಿ 98 ಭಾರತೀಯರು ಸಾವು

ಮೆಕ್ಕಾದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ಉಷ್ಣಾಘಾತಕ್ಕೆ ಕುಸಿದು ಬಿದ್ದು, ಇಹಲೋಕದ ಯಾತ್ರೆ ಮುಗಿಸುತ್ತಿದ್ದಾರೆ. ರಣಬಿಸಿಲಿನಿಂದ ಮೆಕ್ಕಾದಲ್ಲಿ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗ್ತಿದೆ. ಸುಡುವ ಶಾಖದ ನಡುವೆ ಮೆಕ್ಕಾಗೆ ವಾರ್ಷಿಕ ಮುಸ್ಲಿಂ ತೀರ್ಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದ ಸಾವಿರ ಯಾತ್ರಿಕರಲ್ಲಿ 98 ಭಾರತೀಯರು ಸೇರಿದ್ದಾರೆ.

Advertisment

publive-image

ಇದನ್ನೂ ಓದಿ: ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದ A1 ಪವಿತ್ರಾ.. ಮತ್ತೊಂದು ಮಹತ್ವದ ಸಾಕ್ಷ್ಯ ಸಂಗ್ರಹ!

ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಸೌದಿ ಅರೇಬಿಯಾದಲ್ಲಿ ಈಗಾಗಲೇ 175,000 ಭಾರತೀಯ ನಾಗರಿಕರು ಹಜ್ ಯಾತ್ರೆಯಲ್ಲಿದ್ದಾರೆ. ಅದರಲ್ಲಿ 98 ಮಂದಿ ಸಾವನ್ನಪ್ಪಿದ್ದಾರೆ. ನೈಸರ್ಗಿಕ ಕಾರಣಗಳು, ದೀರ್ಘಕಾಲದ ಕಾಯಿಲೆಗಳು ಮತ್ತು ವೃದ್ಧಾಪ್ಯದ ಕಾರಣದಿಂದಾಗಿ ಸಾವುಗಳು ಸಂಭವಿಸಿವೆ ಎಂದು ವಿವರಿಸಿದ್ದಾರೆ. ಪ್ರತಿ ವರ್ಷ ಭಾರತದಿಂದ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಹಜ್‌ಗೆ ಹಾಜರಾಗುತ್ತಾರೆ ಮತ್ತು ಅವರಲ್ಲಿ ಕೆಲವರು ದುರದೃಷ್ಟವಶಾತ್ ಹಜ್ ಅವಧಿಯಲ್ಲಿ ನಿಧನರಾಗುತ್ತಾರೆ. ಈ ವರ್ಷ 175000 ಭಾರತೀಯ ಯಾತ್ರಿಕರು ಹಜ್‌ಗಾಗಿ ಮಕ್ಕಾಕ್ಕೆ ಭೇಟಿ ನೀಡಿದ್ದಾರೆ ಎಂದು ಜೈಸ್ವಾಲ್ ತಿಳಿಸಿದ್ರು.

publive-image

ಇದನ್ನೂ ಓದಿ: ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ

Advertisment

ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಾರತೀಯ ಯಾತ್ರಿಕರು ಹಜ್‌ಗೆ ಹಾಜರಾಗುತ್ತಾರೆ. ಈ ವರ್ಷ, ಇದುವರೆಗೆ 175,000 ಭಾರತೀಯ ಯಾತ್ರಿಕರು ಭೇಟಿ ನೀಡಿದ್ದಾರೆ. ಮುಖ್ಯ ಹಜ್ ಅವಧಿಯು ಮೇ 9 ರಿಂದ ಜುಲೈ 22 ರ ವರೆಗೆ ಎಂದು ನಾನು ನಂಬುತ್ತೇನೆ. ಇಲ್ಲಿಯವರೆಗೆ 98 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದಾರೆ.

-ರಣಧೀರ್ ಜೈಸ್ವಾಲ್, ಎಂಇಎ ವಕ್ತಾರ

ಒಟ್ಟಾರೆ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು ಅನ್ನೋ ಮಹದಾಸೆಯೊಂದಿಗೆ ಮೆಕ್ಕಾಗೆ ತೆರಳಿದ್ದರು ಯಾತ್ರಿಕರು ದುರಂತ ಅಂತ್ಯ ಕಂಡಿದ್ದಾರೆ. ತಾಪಮಾನ ಏರಿಕೆಯಿಂದಾಗಿ ಏನೆಲ್ಲಾ ಅವಾಂತರ ಸೃಷ್ಟಿಯಾಗಬಹುದು ಎಂಬುದಕ್ಕೆ ಮೆಕ್ಕಾದಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment