ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಬರುವಾಗ ಕಾರಿನ ಮೇಲೆ ಬಿದ್ದ ಲಾರಿ; ಕರ್ನಾಟಕದ ಮೂವರು ಸಾವು

author-image
Ganesh
Updated On
ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಬರುವಾಗ ಕಾರಿನ ಮೇಲೆ ಬಿದ್ದ ಲಾರಿ; ಕರ್ನಾಟಕದ ಮೂವರು ಸಾವು
Advertisment
  • ಎರಡು ಕಾರುಗಳಲ್ಲಿ ತಿರುಪತಿಗೆ ಹೋಗಿದ್ದ ಕುಟುಂಬ
  • ದುರ್ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ
  • ತಿರುಪತಿ-ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ

ಚಿಕ್ಕಬಳ್ಳಾಪುರ: ಕಾರಿನ ಮೇಲೆ ಲಾರಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಬಳಿಯ ತಿರುಪತಿ-ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ತಿರುಪತಿಯಿಂದ ವಾಪಸ್ ಬರುತ್ತಿದ್ದ ಕಾರಿನ ಮೇಲೆ ಲಾರಿ ಉರುಳಿ ಬಿದ್ದು ಕಾರು ಸಂಪೂರ್ಣ ಜಖಂ ಆಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಹೆಚ್ ಜಿ ಮುನಿವೆಂಕಟರೆಡ್ಡಿ (55), ಹೆಚ್.ಕೆ.ಮಂಜುನಾಥ್ (38), ಹಾಗೂ ರಮೇಶ್ (34) ಮೃತ ದುರ್ದೈವಿಗಳು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚಿಕ್ಕಬಳ್ಳಾಪುರಕ್ಕೆ ವಾಪಸ್ ಬರುವ ವೇಳೆ ಅಪಘಾತ ನಡೆದಿದೆ. ಮೃತರೆಲ್ಲರೂ ಒಂದೇ ಕುಟುಂಬಸ್ಥರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ತೇಜಸ್ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಎರಡು ಕಾರುಗಳಲ್ಲಿ ಗುರುವಾರ ಸಂಜೆ ತಿರುಪತಿಗೆ ಹೋಗಿದ್ದರು. ಮೃತರೆಲ್ಲರೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಹರಿಸ್ಥಳ ಹಾಗೂ ಗೊಲ್ಲಚೆನ್ನೇನಹಳ್ಳಿ ಗ್ರಾಮದರು ಎನ್ನಲಾಗಿದೆ.

ಇದನ್ನೂ ಓದಿ:ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ ನಡೆಸಿದ ವಿಲಿಯಮ್ಸ್; ಕಷ್ಟಗಳ ಬಗ್ಗೆ ಪತ್ರಕರ್ತರಿಗೆ ಕೊಟ್ಟ ಮಾಹಿತಿ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment