ಕರ್ನಾಟಕದ ಈ ಜಿಲ್ಲೆಯಲ್ಲಿ ಭಾರೀ ಚಳಿ; ರೆಡ್ ಅಲರ್ಟ್ ಘೋಷಣೆ, ಜನ ಗಾಬರಿ!

author-image
Ganesh
Updated On
ಕರ್ನಾಟಕದ ಈ ಜಿಲ್ಲೆಯಲ್ಲಿ ಭಾರೀ ಚಳಿ; ರೆಡ್ ಅಲರ್ಟ್ ಘೋಷಣೆ, ಜನ ಗಾಬರಿ!
Advertisment
  • ಜನರಿಗೆ 5 ಖಡಕ್ ಎಚ್ಚರಿಕೆ ಕೊಟ್ಟ ಜಿಲ್ಲಾಡಳಿತ
  • ದಿನೇ ದಿನೆ ಕನಿಷ್ಠ ತಪಮಾನ ಕುಸಿಯುತ್ತಿದೆ
  • ಮೂರು ದಿನಗಳ ಕಾಲ ರೆಡ್​​ ಅಲರ್ಟ್ ಘೋಷಣೆ

ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ ರಣಭೀಕರ ಚಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ.

10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7.5 ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗಿದೆ. ಮುಂದಿನ ಮೂರು ದಿನಗಳಲ್ಲಿ 5 ರಿಂದ 6 ಡಿಗ್ರಿ ತಾಪಮಾನ ದಾಖಲು ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:ಬೆಚ್ಚಗಿರಿ ಬೆಂಗಳೂರಿಗರೇ; ಇಂದು ರಾತ್ರಿ ನಿಮ್ಮನ್ನು ಕಾಡಲಿದೆ ಮೈ ಕೊರೆಯುವ ಚಳಿ; IMD ಎಚ್ಚರಿಕೆ!

publive-image

ಜಿಲ್ಲಾಡಳಿತ 4 ಖಡಕ್ ಸೂಚನೆ

  • ಸಾರ್ವಜನಿಕರು ಬೆಚ್ಚನೆಯ ಉಡುಪು ಧರಿಸಿ
  • ಸೂರ್ಯೋದಯಕ್ಕಿಂತ ಮುನ್ನ, ಸೂರ್ಯಾಸ್ತದ ನಂತರ ವಾಕಿಂಗ್ ಬೇಡ
  • ದ್ವಿಚಕ್ರ ವಾಹನದಲ್ಲಿ ಓಡಾಡೋದನ್ನು ಕಡಿಮೆ ಮಾಡಿ
  • ರಾತ್ರಿ ಹೊತ್ತು, ಬೆಳಗಿನ ವೇಳೆ ಕೃಷಿ ಚಟುವಟಿಕೆ ಬೇಡ

ಕಳೆದ ಒಂದು ವಾರದಿಂದ ಬೀದರ್‌ನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಗರಿಷ್ಠ ತಾಪಮಾನ 28 ಇದ್ದರೆ ಕನಿಷ್ಠ ತಾಪಮಾನ 7ಕ್ಕೆ ಇಳಿಕೆಯಾಗಿದೆ. ಬಾರಿ ಚಳಿಗೆ ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪಾರ್ಕ್‌‌ಗಳು, ಸಾರ್ವಜನಿಕ ಸ್ಥಳಗಳು ಖಾಲಿ ಖಾಲಿ ಆಗಿವೆ. ಥಂಡಿಯಿಂದ ಕಾಪಾಡಿಕೊಳ್ಳಲು ಬೆಂಕಿ ಹಾಕಿ ಚಳಿಕಾಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ:ಮನೆ.. ಮನೆ.. ರಾಮಾಯಣ, ನೋ ಬ್ರೋಕರ್ ಆ್ಯಪ್​ ನಂಬಿ ಹಣ ಕೊಡುವ ಮುಂಚೆ ಹುಷಾರ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment