newsfirstkannada.com

ರಾಮಲಲ್ಲಾನಿಗೂ ವಿಶ್ರಾಂತಿ ಬೇಕು.. ಅಯೋಧ್ಯೆಗೆ ಬರ್ತಿರೋ ಭಕ್ತಸಾಗರಕ್ಕೆ ಚಂಪತ್ ರೈ ಮನವಿ; ಕಾರಣವೇನು?

Share :

Published February 10, 2024 at 4:54pm

  ರಾಮಲಲ್ಲಾನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಬಂದ ಭಕ್ತರು

  ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ

  ರೈಲು ನಿಲ್ದಾಣ, ಬಸ್‌ ನಿಲ್ದಾಣದವರೆಗೆ ಎಲ್ಲಿ ನೋಡಿದರೂ ಭಕ್ತರ ದಂಡು

ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾನ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ರೈಲು ನಿಲ್ದಾಣ, ಬಸ್‌ ನಿಲ್ದಾಣದವರೆಗೆ ಎಲ್ಲಿ ನೋಡಿದರೂ ಭಕ್ತರ ದಂಡು ಹರಿದು ಬರುತ್ತಿದೆ.

ಇದನ್ನು ಓದಿ: BIGG BOSS: ಆ ಫ್ಯಾನ್ಸ್‌ಗಳಿಗೆ ಶೂಟ್ ಮಾಡಿಬಿಡು.. ‘ಬೆಂಕಿ’ ತನಿಷಾಗೆ ಬಿಗ್ ಡೀಲ್ ಕೊಟ್ಟ ಕಾರ್ತಿಕ್​​!

ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ರಾಮಲಲ್ಲಾ ದರ್ಶನಕ್ಕೆ ಉತ್ತರಪ್ರದೇಶ ಸರ್ಕಾರ ಹಾಗೂ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಪ್ರತಿದಿನ 14 ತಾಸು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

ಈ ಬಗ್ಗೆ ಮಾತಾಡಿರುವ ಚಂಪತ್ ರೈ, ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ದೇಗುಲಕ್ಕೆ ಪ್ರತಿದಿನ ಒಂದು ಲಕ್ಷ ಜನರು ಬರುತ್ತಿದ್ದಾರೆ. ಭಕ್ತರ ಒತ್ತಡವನ್ನು ಕಡಿಮೆ ಮಾಡಲು ಜನವರಿ 24ರಿಂದ ಈ ದೇವಾಲಯದಲ್ಲಿ ಪ್ರತಿದಿನ 14 ಗಂಟೆಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಭಗವಾನ್ ಶ್ರೀರಾಮನ ಬಾಲರೂಪಕ್ಕೆ ವಿಶ್ರಾಂತಿ ಬೇಕು ಎಂದು ಹಲವರು ಹೇಳುತ್ತಾರೆ. ದೇವರ ಮಗುವಿನ ರೂಪವನ್ನು 14 ಗಂಟೆಗಳ ಕಾಲ ಎಚ್ಚರವಾಗಿರಿಸುವುದು ಎಷ್ಟು ಉಪಯೋಗ ಇದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾನಿಗೂ ವಿಶ್ರಾಂತಿ ಬೇಕು.. ಅಯೋಧ್ಯೆಗೆ ಬರ್ತಿರೋ ಭಕ್ತಸಾಗರಕ್ಕೆ ಚಂಪತ್ ರೈ ಮನವಿ; ಕಾರಣವೇನು?

https://newsfirstlive.com/wp-content/uploads/2024/02/rama-lalla.jpg

Load More