newsfirstkannada.com

ಬಿಸಿಲಲ್ಲಿ ತಿರುಗಾಡೋ ಜನರೇ ಎಚ್ಚರ! ಚೂರು ಯಾಮಾರಿದ್ರೂ ಈ ರೋಗಗಳು ಗ್ಯಾರಂಟಿ!

Share :

Published April 29, 2024 at 6:25am

    ಹಣ್ಣಿನ ರಸ ಮತ್ತು ದ್ರವ ಆಹಾರ ಸೇವನೆ ಮಾಡುವಂತೆ ವೈದ್ಯರಿಂದ ಸಲಹೆ

    ಕೂಲ್​ ಸಿಟಿ ಅಂತಾನೇ ಫೇಮಸ್​​ ಆಗಿದ್ದ ಸಿಲಿಕಾನ್​ ಸಿಟಿ ಈಗ ಸಖತ್​ ಹಾಟ್​

    ರಾಜ್ಯದಲ್ಲಿ ಕೇವಲ ಎರಡು ವಾರದಲ್ಲಿ ನಾಲ್ಕು ಸಾವಿರ ಅತಿಸಾರ ಕೇಸ್ ಪತ್ತೆ

ಬಿಸಿಲ ಬೇಗೆಯಿಂದ‌ ರೋಸಿ ಹೋಗಿ ದಾಹ ತಣಿಸಲು ಕಂಡ ಕಂಡಲ್ಲಿ ಪಾನೀಯಗಳನ್ನ ಕುಡಿಯುವ ಬೆಂದಕಾಳೂರಿನ‌ ಮಂದಿ ಈ ಸ್ಟೋರಿ ನೋಡಲೇಬೇಕು. ಬಿಸಿಲಾಘಾತದ ಜೊತೆಗೆ ಬೆಂಗಳೂರಿಗರನ್ನ ಇದೀಗ ನಾನಾ ಕಾಯಿಲೆಗಳು ಕಾಡೋಕೆ ಶುರುಮಾಡಿವೆ. ಅದೊಂದು ಅಂಕಿ ಅಂಶ ಖುದ್ದು ಆರೋಗ್ಯ ಇಲಾಖೆಯನ್ನೇ ಅಲರ್ಟ್ ಮಾಡಿದೆ‌.

ಸಿಲಿಕಾನ್ ಸಿಟಿಯ ಅದ್ಯಾವ ಮೂಲೆಗೆ ಹೋದ್ರೂ, ಅದ್ಯಾವ ವ್ಯಕ್ತಿಯನ್ನ ಮಾತ್ನಾಡಿಸಿದ್ರೂ ಮೊದಲಿಗೆ ಕೇಳಿ ಬರ್ತಿರುವ ಮಾತೇ ಇದು. ಒಂದು ಕಾಲದಲ್ಲಿ ಬೆಂಗಳೂರಿಗೆ ಯಾವಾಗ ಎಂಟ್ರಿ ಕೊಟ್ರು ಕೂಲ್​ ಕೂಲ್​ ಸಿಟಿ ಅಂತಾನೇ ಫೇಮಸ್​ ಆಗಿತ್ತು. ಆದರತೆ ಈಗ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಯಾಕಂದ್ರೆ ಬಿಸಿಲ ಬೇಗೆಯಲ್ಲಿ ಬೆಂಗಳೂರಿಗರು ಬಸವಳಿದು ಹೋಗಿದ್ದಾರೆ. ಹೀಗಾಗಿ, ದಾಹತಣಿಸಲು ಕಂಡ ಕಂಡಲ್ಲಿ ಪಾನೀಯಗಳನ್ನ ಕುಡಿಯುತ್ತಿದ್ದಾರೆ. ಆದ್ರೆ, ಬಿಸಿಲಾಘಾತದ ಜೊತೆಗೆ ಅಸುರಕ್ಷಿತ ಪಾನೀಯದಿಂದ ಅತಿಸಾರ ಅನ್ನೋ ಭೂತ ಕಾಡತೊಡಗಿದೆ. ಹೌದು, ರಾಜ್ಯದಲ್ಲಿ ಕೇವಲ ಎರಡು ವಾರದಲ್ಲಿ ನಾಲ್ಕು ಸಾವಿರ ಅತಿಸಾರ ಕೇಸ್​ಗಳು ಪತ್ತೆಯಾಗಿದ್ದು, ಇದು ಆರೋಗ್ಯ ಇಲಾಖೆಯ ತಲೆ ನೋವು ಹೆಚ್ಚಿಸಿದೆ. ಇದೇ ಕಾರಣಕ್ಕೆ ಕೆಲವೊಂದು ಮುನ್ನೆಚ್ಚೆರಿಕೆಗಳನ್ನ ಪಾಲಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

ಮುನ್ನೆಚ್ಚರಿಕೆಗಳೇನು?

ಈ ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಲು ನೈಸರ್ಗಿಕ ಹಣ್ಣಿನ ರಸ ಮತ್ತು ದ್ರವ ಆಹಾರ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ‌. ನಾರಿನ ಅಂಶ ಇರುವ ತರಕಾರಿ ಬಳಕೆ ಮಾಡೋದರ ಜೊತೆಗೆ, ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡೋದು ಒಳಿತು ಅಂದಿದ್ದಾರೆ. ಅಷ್ಟೇ ಅಲ್ಲ ಮನೆಯ ಆಹಾರ ಸೇವನೆಗೆ ಆದ್ಯತೆ ಕೊಡೋದು ಉತ್ತಮ ಅಂದಿರುವ ವೈದ್ಯರು, ಎಳನೀರು ಕುಡಿಯುವುದು ಬೆಸ್ಟ್ ಅನ್ನೋ ಸಲಹೆ ಕೊಟ್ಟಿದ್ದಾರೆ. ಶುದ್ಧ ಕುದಿಸಿ ಆರಿಸಿದ ನೀರು ಸೇವನೆ ಮಾಡೋದರಿಂದ ಈ ರೀತಿಯ ಆರೋಗ್ಯ ಸಮಸ್ಯೆಗೆ ಬ್ರೇಕ್ ಹಾಕ್ಬೋದು ಅನ್ನೋದು ವೈದ್ಯರ ಸಲಹೆ. ಬಾಯಿ ಒಣಗೋದು, ಕಣ್ಣುಗಳಲ್ಲಿ ಆಯಾಸ, ಹಸಿವಾಗದೆ ಇರೋದು, ನಿರ್ಜಲೀಕರಣ, ಹೊಟ್ಟೆನೋವು, ವಾಕರಿಕೆ, ವಾಂತಿ,ತೀವ್ರ ಜ್ವರ ಇದು ಅತಿಸಾರದ ಲಕ್ಷಣಗಳಾಗಿದ್ದು, ಜನರು ಕೂಡ ಸೂಕ್ತ ಮುನ್ನೆಚ್ಚರಿಕೆಗಳನ್ನ ಫಾಲೋ ಮಾಡಿ, ಈ ಗಂಡಾಂತರದಿಂದ ಪಾರಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಸಿಲಲ್ಲಿ ತಿರುಗಾಡೋ ಜನರೇ ಎಚ್ಚರ! ಚೂರು ಯಾಮಾರಿದ್ರೂ ಈ ರೋಗಗಳು ಗ್ಯಾರಂಟಿ!

https://newsfirstlive.com/wp-content/uploads/2024/04/heat-wave3.jpg

Load More