/newsfirstlive-kannada/media/post_attachments/wp-content/uploads/2024/02/HEAT-WAVES.jpg)
ಕಳೆದ ಮೂರು ತಿಂಗಳಿನಿಂದ ಕೂಲ್ ಕೂಲ್ ಆಗಿದ್ದ ರಾಜ್ಯ ಇನ್ಮೇಲೆ ಹಾಟ್ ಹಾಟ್ ಆಗಿರಲಿದೆ. ಮುಂದಿನ ನಾಲ್ಕು ದಿನ ರಣ ರಣ ಬಿಸಿಲು ನೆತ್ತಿ ಸುಡಲಿದ್ದು, ಜನರು ಎಚ್ಚರವಾಗಿ ಓಡಾಡ್ಬೇಕು. ಇದಕ್ಕೆ ಖುದ್ದು ಆರೋಗ್ಯ ಇಲಾಖೆಯೇ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಶಂಖನಾದಕ್ಕೂ ಹಿಮಪಾತಕ್ಕೂ ಇದೆಯಂತೆ ನಂಟು.. ಬದ್ರಿನಾಥ್ ಮಂದಿರದ ಅರ್ಚಕರು ಬಿಚ್ಚಿಟ್ಟ ರಹಸ್ಯ ಏನು?
ರಾಜ್ಯದ ಜನರೇ ಅಲರ್ಟ್ ಅಲರ್ಟ್ ಬಿ ಅಲರ್ಟ್. ಮುಂದಿನ 4 ದಿನ ‘ಬೆಂದ’ಕಾಳೂರು ಬಿಸಿಲ ಬೇಗೆಯಲ್ಲಿ ಬೇಯೋದು ಪಕ್ಕಾ. ರಣ ರಣ ಬಿಸಿಲು ಕರುನಾಡ ಮಂದಿಯ ನೆತ್ತಿ ಸುಡೋದು ಗ್ಯಾರಂಟಿ. ಖುದ್ದು ರಾಜ್ಯ ಆರೋಗ್ಯ ಇಲಾಖೆಯೇ ಎಚ್ಚರಿಕೆ ನೀಡಿದೆ.
ಮಾರ್ಚ್ನಲ್ಲಿ ರಾಜ್ಯದಲ್ಲಿ ತಾಪಮಾನ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ದಾಟಲಿದೆಯಂತೆ. ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಕಾರವಾರ ಹಾಗೂ ಕರಾವಳಿ ಭಾಗದಲ್ಲಿ 40 ರಿಂದ 42 ಡಿ.ಸೆಲ್ಸಿಯಸ್ವರೆಗೂ ಗರಿಷ್ಟ ಉಷ್ಣಾಂಶ ತಲುಪೋ ಸಾಧ್ಯತೆ ಇದ್ರೆ, ಇತ್ತ ಬೆಂಗಳೂರಿನಲ್ಲಿ ಮಾರ್ಚ್ನಲ್ಲಿ ಗರಿಷ್ಟ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಸಾಧ್ಯತೆ ಇದೆ. ಹೀಗಾಗಿ ಹೀಟ್ ವೇವ್ನಿಂದ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಆರೋಗ್ಯ ಇಲಾಖೆ ಮಾರ್ಗ ಸೂಚಿಯಲ್ಲಿ ಏನಿದೆ?
ಬಾಯಾರಿಕೆ ಇಲ್ಲದಿದ್ದರೂ ಸಹ ಆಗಾಗ ಹೆಚ್ಚು ಹೆಚ್ಚು ನೀರನ್ನ ಸೇವಿಸಬೇಕು. ಪ್ರಯಾಣದ ವೇಳೆಯೂ ನೀರನ್ನು ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ. ನಿಂಬೆ ಶರಬತ್ತು, ಮಜ್ಜಿಗೆ ಲಸ್ಸಿ, ಹಣ್ಣಿನ ಜ್ಯೂಸ್ ಉಪ್ಪಿನೊಂದಿಗೆ ಸೇವಿಸುವುದು ಒಳ್ಳೆಯದು. ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನ ಹೆಚ್ಚು ಸೇವಿಸಿ. ತಿಳಿ ಬಣ್ಣದ, ಹತ್ತಿಯ ಬಟ್ಟೆಗಳನ್ನ ಧರಿಸುವುದು ಉತ್ತಮ. ಛತ್ರಿ, ಟೋಪಿ, ಹ್ಯಾಟ್ ಬಳಕೆ ಒಳ್ಳೆಯದು. ಬಿಸಿಲಿನಲ್ಲಿ ನಡೆಯುವ ವೇಳೆ ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಒಳಾಂಗಣದಲ್ಲಿ, ಗಾಳಿ ಬೀಸುವ, ತಣ್ಣಗಿರುವ ಪ್ರದೇಶದಲ್ಲಿರಿ. ಹೊರಾಂಗಣ ಚಟುವಟಿಕೆಗಳನ್ನ ಬೆಳಗ್ಗೆ ಅಥವಾ ಸಂಜೆ ಹೊತ್ತು ನಡೆಸುವುದು ಒಳ್ಳೆಯದು. ಈ ಬಾರೀ ಬೇಸಿಗೆಗೂ ಮೊದಲೇ ಬಿಸಿಲು ತನ್ನ ಆಟ ಶುರು ಮಾಡಿದೆ. ಸುಡುಸುಡು ಬಿಸಿಲು ನೆತ್ತಿ ಸುಡೋ ಮೊದಲು ನೀವು ಮುಂಜಾಗೃತೆ ವಹಿಸೋದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ