ಭೂ ಕುಸಿತ, ವಿದ್ಯುತ್​ ಸ್ಪರ್ಶಿಸಿ 4 ಸಾವು.. ರಕ್ಷಣೆಗಾಗಿ ಅಲರ್ಟ್​ ಇರುವಂತೆ ಭಾರತೀಯ ಸೇನೆಗೆ ಸೂಚನೆ

author-image
AS Harshith
Updated On
ಭೂ ಕುಸಿತ, ವಿದ್ಯುತ್​ ಸ್ಪರ್ಶಿಸಿ 4 ಸಾವು.. ರಕ್ಷಣೆಗಾಗಿ ಅಲರ್ಟ್​ ಇರುವಂತೆ ಭಾರತೀಯ ಸೇನೆಗೆ ಸೂಚನೆ
Advertisment
  • ವಿದ್ಯುತ್ ಸ್ಪರ್ಶಿಸಿ ಮೂವರು, ಭೂ ಕುಸಿತದಿಂದ ಓರ್ವ ವ್ಯಕ್ತಿ ಸಾವು
  • ಜನರ ರಕ್ಷಣೆಗಾಗಿ ಇಂಡಿಯನ್ ಏರ್ ಪೋರ್ಸ್​​ಗೆ ಅಲರ್ಟ್ ಇರುವಂತೆ ಸೂಚನೆ
  • ಅಗತ್ಯ ಬಿದ್ದಲ್ಲಿ ಹೆಲಿಕಾಪ್ಟರ್ ಮೂಲಕ ಜನರ ರಕ್ಷಣೆ ಮಾಡಲು ಭಾರತೀಯ ಸೇನೆ ಸಿದ್ಧ

ಮಹಾರಾಷ್ಟ್ರದ ಪುಣೆಯಲ್ಲಿ ಮಳೆಯಾರ್ಭಟ ಮುಂದುವರೆದಿದೆ. ವರುಣನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಕ್ಕಸ ಮಳೆಗೆ ನಾಲ್ವರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮಳೆಯಿಂದಾಗಿ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದಾರೆ. ಭೂ ಕುಸಿತದಿಂದ ಓರ್ವ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ. ಸದ್ಯ ಮಳೆಯಿಂದಾಗುವ ಅವಾಂತರವನ್ನು ಗಮನಿಸಿ ಅಲ್ಲಿನ ಜಿಲ್ಲಾಡಳಿತ ಎಚ್ಚರಿಕೆವಹಿಸಿದೆ.

ಇದನ್ನೂ ಓದಿ: ಸೇಲ್ಸ್​ಮ್ಯಾನ್​, ಪೇಂಟರ್​, ಲಾರಿ ಡ್ರೈವರ್​.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್​ಗಾಗಿ ಕಾಯುತ್ತಿದೆ ಕುಟುಂಬ

publive-image

ಮಳೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಪುಣೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಮಕ್ಕಳಿಗೆ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮಕ್ಕಳೇ.. ಈ ಜಿಲ್ಲೆಯ ಶಾಲಾ-ಕಾಲೇಜಿಗಳಿಗೆ ಇಂದು ಮತ್ತು ನಾಳೆ ರಜೆ!

ಸಿಎಂ ಏಕನಾಥ್ ಶಿಂಧೆ ಇಂಡಿಯನ್ ಆರ್ಮಿ ಜೊತೆಗೆ ಮಾತಾಡಿದ್ದಾರೆ. ಪ್ರಸ್ತುತ ಸ್ಥಿತಿಯ ಬಗ್ಗೆ ಅರಿತುಕೊಂಡಿದ್ದಾರೆ. ಪುಣೆಯಲ್ಲಿ ಜನರ ರಕ್ಷಣೆಗಾಗಿ ಇಂಡಿಯನ್ ಏರ್ ಪೋರ್ಸ್, ಇಂಡಿಯನ್ ಆರ್ಮಿ ಅಲರ್ಟ್ ಆಗಿದೆ. ಅಗತ್ಯ ಬಿದ್ದಲ್ಲಿ ಹೆಲಿಕಾಪ್ಟರ್ ಮೂಲಕ ಜನರ ರಕ್ಷಣೆ ಮಾಡಲು ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ

ನಾಳೆಯವರೆಗೂ ಪುಣೆ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ಹೊರಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment