newsfirstkannada.com

ಮಹಾರಾಷ್ಟ್ರದಲ್ಲೂ ಭಾರೀ ಪ್ರಮಾಣದಲ್ಲಿ ಮಳೆ.. ಭಯಾನಕ ಪರಿಸ್ಥಿತಿ- ವಿಡಿಯೋ

Share :

Published July 25, 2024 at 7:35am

    ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

    ರಸ್ತೆಗಳು ನದಿಗಳಂತೆ ಕಾಣುತ್ತಿವೆ, ಉಕ್ಕಿ ಹರಿಯುತ್ತಿದೆ ನೀರು

    ಎಲ್ಲೆಲ್ಲೂ ನೀರೂ ನೀರು, ನೆನೆದು ಹೋದ ಬದುಕು

ಕರ್ನಾಟಕ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರದಲ್ಲೂ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಮಳೆಯ ರೌದ್ರ ನರ್ತನಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿನ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಆತಂಕದ ಮನೆ ಮಾಡಿದೆ.

ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಊಟ -ನಿದ್ರೆ ಇಲ್ಲದೆ ಪರದಾಡುವಂತಾಗಿದೆ. ಮಹಾರಾಷ್ಟ್ರದ ಮಲೌಲಿ ಭಾಗದಲ್ಲೂ ಭಾರೀ ಮಳೆಯಾಗ್ತಿದ್ದು, ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮನೆಗಳಿಗೆ ನೀರು ನುಗ್ಗಿ ಜನ ಸಿಲುಕಿಕೊಂಡ ಬಗ್ಗೆ ತಿಳಿದು ರಕ್ಷಣಾ ಪಡೆ ಜನರನ್ನು ರಕ್ಷಿಸಿದೆ.

ಅಲ್ಲದೇ ಮುಂದಿನ 24 ಗಂಟೆಗಳ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

https://twitter.com/nagendr_24/status/1816202718207209807

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಷ್ಟ್ರದಲ್ಲೂ ಭಾರೀ ಪ್ರಮಾಣದಲ್ಲಿ ಮಳೆ.. ಭಯಾನಕ ಪರಿಸ್ಥಿತಿ- ವಿಡಿಯೋ

https://newsfirstlive.com/wp-content/uploads/2024/07/MAHARASTRA-RAIN.jpg

Load More