Advertisment

ಚಾರ್ಮಾಡಿ ಘಾಟ್​ನಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು.. ಕಾಫಿನಾಡಿನತ್ತ ಪ್ರವಾಸಿಗರ ಪಯಾಣ

author-image
Bheemappa
Updated On
ಚಾರ್ಮಾಡಿ ಘಾಟ್​ನಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು.. ಕಾಫಿನಾಡಿನತ್ತ ಪ್ರವಾಸಿಗರ ಪಯಾಣ
Advertisment
  • ಸೆಲ್ಫಿ, ಜಲಪಾತಗಳ ಫೋಟೋ ಕ್ಲಿಕ್ಕಿಸಿಕೊಂಡಾಗ ಸಖತ್ ಮಜಾ
  • 100 ಅಡಿಗೂ ಎತ್ತರದಿಂದ ಧುಮ್ಮುಕ್ಕುತ್ತಿರೋ ನೀರು
  • ನಿರಂತರ ಮಳೆ, ಕಾಫಿನಾಡಲ್ಲಿ ಉಕ್ಕಿ ಹರಿಯುತ್ತಿರೋ ಜಲಪಾತಗಳು

ಕಾಫಿನಾಡು ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್​ನಲ್ಲಿ ಮುಂಗಾರು ಮಳೆಯಿಂದ ಉಂಟಾಗಿರೋ ದೃಶ್ಯ ವೈಭವ ಪ್ರಯಾಣಿಕರ ಕಣ್ಣುಗಳನ್ನ ಕೊರೈಸುತ್ತಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಜಲಪಾತದ ವೈಭವವನ್ನ ಕಣ್ತುಂಬಿಕೊಳ್ಳಲು ಜನರು ಮುಗಿಬೀಳ್ತಿದ್ದು ಅಪಾಯಗಳು ಸಂಭವಿಸದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.

Advertisment

ಇದನ್ನೂ ಓದಿ: T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!

ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಜಲಧಾರೆಯಿಂದ ಇಡೀ ದೇವಲೋಕದ ಸ್ವರ್ಗವೇ ಧರೆಗಿಳಿದಂತಿದ್ದು ಮಂಜಿನ ಹನಿಗಳ ಜೊತೆಗೆ ಮುಸುಕು ಮನಸನ್ನು ಉಲ್ಲಾಸದಲ್ಲಿ ತೇಲಿ ಹಾರುವಂತೆ ಮಾಡುವಂತಿದೆ. ಕಾಫಿನಾಡು ಹಸಿರಿನ ಸೊಬಗಿನಿಂದ ಮೈದುಂಬಿಕೊಂಡಿದ್ದು, ಹಸಿರಿನ ನಡುವೆ ಝಳ, ಝಳ ನೀರಿನ ಸದ್ದಿನ ಸಪ್ಪಳ, ಆಗಸದಿಂದ ಧರೆಗೆ ಮುತ್ತಿಕ್ಕುತ್ತಿರೋ ಮಳೆ ಹನಿಗಳ ಸಪ್ಪಳ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಇದನ್ನೂ ಓದಿ: ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?

Advertisment

publive-image

ಕಾಫಿನಾಡಲ್ಲಿ ಪ್ರಯಾಣ ಮಾಡುತ್ತಿದ್ದರೆ ಸ್ವರ್ಗಕ್ಕೆ ಸಮೀಪ ಇದಿವೇನೋ ಅನ್ಸುತ್ತೆ. ಸಾಗಿದಷ್ಟು ಪ್ರಯಾಣ ಇನ್ನೂ ಬೇಕು ಅನಿಸುತ್ತೆ. ದೂರ ಇನ್ನು ದೂರ ಅಂತಾ ಹಳೇ ಹಾಡುಗಳನ್ನ ಮೆಲುಕು ಹಾಕ್ತಾ ಈ ದಾರಿಯಲ್ಲಿ ಹೆಜ್ಜೆ ಹಾಕಿದ್ರೆ ಈ ಸಮಯ ಅನಂದಮಯ ಅನ್ನೋ ಫೀಲ್ ಆಗುತ್ತೆ. ಅಷ್ಟಕ್ಕೂ ಇಂತದೊಂದು ಸ್ವರ್ಗದ ದಾರಿ ಇರೋದು ಬೇರೆಲ್ಲೂ ಅಲ್ಲ, ಚಿಕ್ಕಮಗಳೂರಿನ ಚಾರ್ಮಡಿ ಘಾಟ್​ ಅನ್ನೋ ಸೌಂದರ್ಯದ ಸೊಬಗಲ್ಲಿ.

ಕಾಫಿನಾಡಲ್ಲೊಂದು ಸ್ವರ್ಗದ ಬೀಡು.. ರಮಣೀಯ ಜಾಡು

ಚಿಕ್ಕಮಗಳೂರರಿನ ರಾಷ್ಟ್ರೀಯ ಹೆದ್ದಾರಿಯ ಚಾರ್ಮಡಿ ಘಾಟ್​ನಲ್ಲಿರೋ ಈ ಜಲಪಾತ ಸದ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಸುಮಾರು 100 ಅಡಿಗೂ ಎತ್ತರದಿಂದ ಬಂಡೆಯಿಂದ ಬಂಡೆಗೆ ಜಿಗಿಯೋ ನೀರಿನ ದೃಶ್ಯವನ್ನು ನೋಡೋದೆ ಒಂದು ರೀತಿ ಕಣ್ಣಿಗೆ ಹಬ್ಬ. ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಚಾರ್ಮಾಡಿ ಘಾಟ್​ನಲ್ಲಿ ನಿರಂತರ ಮಳೆಯಿಂದ ಈ ಜಲಪಾತ ಸೃಷ್ಟಿಯಾಗಿದ್ದು, ದೃಶ್ಯ ವೈಭವವೇ ಧರೆಗಿಳಿದಿದೆ.

ಚಾರ್ಮಾಡಿ ಘಾಟ್​ನಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್

ಮುಂಗಾರು ಎಂಟ್ರಿಯಾಗ್ತಿದ್ದಂತೆ ಈ ಜಲಪಾತ ಹಾಲ್ನೊರೆಯಂತೆ ಬಂಡೆಗಳ ಹರಿದು ದಾರಿಹೋಕರ ಕಣ್ಮನ ಸೆಳೆಯುತ್ತೆ.. ಈ ದಾರಿಯಲ್ಲಿ ಸಾಗೋ ವಾಹನ ಸವರಾರು ತಮ್ಮ ವಾಹನಗಳನ್ನ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡು, ಜಲಪಾತದ ಫೋಟೋ ಕ್ಲಿಕಿಸಿಕೊಂಡು ಮಜಾ ಮಾಡ್ತಾರೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸರು ವಾಹನ ನಿಲುಗಡೆಗೆ ಬ್ರೇಕ್ ಹಾಕಿದ್ದಾರೆ. ಜಲಪಾತದ ಬಳಿಯೇ ಹೈವೇ ಪಟ್ರೋಲ್​ ಪೊಲೀಸರನ್ನ ನಿಯೋಜಿಸಿದ್ದಾರೆ.

Advertisment

publive-image

‘ಚಾರ್ಮಡಿ ಘಾಟ್​ನಲ್ಲಿ ಜಲಪಾತದ ವೈಭವ’

ಇದನ್ನೆಲ್ಲಾ ನೋಡಿ ಸಖತ್ ಖುಷಿಯಾಗುತ್ತಿದೆ. ಆದರೆ ಯಾರಿಗೂ ತೊಂದರೆ ಆಗಬಾರದು. ಹುಷಾರ್ ಆಗಿ ಹೋಗಿ ಹುಷಾರ್ ಆಗಿ ಬರಬೇಕು. ಪೊಲೀಸರೆಲ್ಲ ತುಂಬಾ ಓಡಾಡುತ್ತಿದ್ದಾರೆ. ವಾಹನಗಳನ್ನು ರಸ್ತೆಯಲ್ಲಿ ನಿಲ್ಲದಂತೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಅನಿಲ್, ಪ್ರವಾಸಿ

ಚಾರ್ಮಾಡಿ ಘಾಟ್​ನ ಜಲವೈಭವ ನೋಡುಗರಿಗೆ ಉಲ್ಲಾಸ ಉತ್ಸಾಹ ಮೂಡಿಸ್ತಿದೆ.. ಆದರೆ ಕೆಲವರು ಅಪಾಯದ ಜೊತೆ ಸರಸವಾಡೋ ಧೈರ್ಯ ಮಾಡಿ ಘಾಟ್​ನಲ್ಲಿ ಹುಚ್ಚಾಟ ಮೆರೆಯುತ್ತಿರೋದು ಪೊಲೀಸರಿಗೆ ತಲೆನೋವು ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment