Advertisment

Rain News: ಅರೆಬೈಲ್ ಫಾಲ್ಸ್​​ನಲ್ಲಿ ಸಿಲುಕಿದ ಮೂವರು.. ಕರ್ನಾಟಕಕ್ಕೆ ಮತ್ತೆ ಹವಾಮಾನ ಇಲಾಖೆ ಎಚ್ಚರಿಕೆ..!

author-image
Ganesh
Updated On
Rain News: ಅರೆಬೈಲ್ ಫಾಲ್ಸ್​​ನಲ್ಲಿ ಸಿಲುಕಿದ ಮೂವರು.. ಕರ್ನಾಟಕಕ್ಕೆ ಮತ್ತೆ ಹವಾಮಾನ ಇಲಾಖೆ ಎಚ್ಚರಿಕೆ..!
Advertisment
  • ಮಳೆಯ ಎಫೆಕ್ಟ್​.. ಕೊಡಗು ಶಾಲಾ-ಕಾಲೇಜುಗಳಿಗೆ ರಜೆ!
  • ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ!
  • ರಾಜಸ್ತಾನದಲ್ಲಿ ಭಾರೀ ಮಳೆ.. ಕೇರಳದಲ್ಲಿ ಆರೆಂಜ್ ಅಲರ್ಟ್!

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೂನ್​​ ಆರಂಭದಲ್ಲಿ ಅಬ್ಬರಿಸಿದ್ದ ವರುಣ ಇದೀಗ ಏಕಾಏಕಿ ಸೈಲೆಂಟ್ ಆಗಿದೆ. ಮಳೆಗಾಗಿ ಜನರು ಆಕಾಶದತ್ತ ನೋಡುವಂತಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾರ್ಭಟ ಕಡಿಮೆಯಾಗಿಲ್ಲ. ರಾಜ್ಯ ಮಾತ್ರವಲ್ಲ ದೇಶದ ಹಲವು ಭಾಗಗಳಲ್ಲಿ ಮಳೆಯಿಂದಾದ ಅನಾಹುತಗಳು ಅಷ್ಟಿಷ್ಟಲ್ಲ.

Advertisment

ಮಳೆಯ ಎಫೆಕ್ಟ್​.. ಕೊಡುಗು ಶಾಲಾ-ಕಾಲೇಜುಗಳಿಗೆ ರಜೆ!

ಮಲೆನಾಡು.. ಕರಾವಳಿ ಹಾಗೂ ಕೊಡುಗು ಭಾಗದ ಜಿಲ್ಲೆಗಳಲ್ಲಿ ವರುಣನಾರ್ಭಟ ಮುಂದುವರೆದಿದೆ. ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲ ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಮಾತ್ರವಲ್ಲ, ಇಂದು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಕೊಡಗಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ವೆಂಕಟೇಶ್ ರಾಜಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ರಾಮಾಚಾರಿ ಬೆನ್ನಲ್ಲೇ ವೀಕ್ಷಕರ ನೆಚ್ಚಿನ ಮತ್ತೊಂದು ಸೀರಿಯಲ್​ ಅಂತ್ಯ.. ಯಾವುದು..?

ಜಲಪಾತ ಮಧ್ಯದಲ್ಲೇ ಸಿಲುಕಿಕೊಂಡ ಪ್ರವಾಸಿಗರ ರಕ್ಷಣೆ

ಜಲಪಾತ ವೀಕ್ಷಣೆಗೆ ಹೋಗಿ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು ಜಲಪಾತ ಮಧ್ಯದಲ್ಲೇ ಪ್ರವಾಸಿಗರು ಸಿಲುಕಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅರೆಬೈಲ್ ಘಟ್ಟ ಭಾಗದ ಅರೆಬೈಲ್ ಜಲಪಾತದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು, ಅರೆಬೈಲ್ ಘಟ್ಟದ ಕಾಡಿನ ಮಧ್ಯದಲ್ಲಿ ಇರುವ ಅರೆಬೈಲ್ ಜಲಪಾತಕ್ಕೆ ತೆರಳಿದ್ದರು. ಇದೇ ವೇಳೆ, ಚಿಕ್ಕ ಹಳ್ಳ ದಾಟುತ್ತಿರುವಾಗ ಏಕಾಏಕಿ ಜಲಪಾತ ಅಬ್ಬರಿಸಿದೆ. ಜಲಪಾತದ ಮಧ್ಯದಲ್ಲಿ ಸಿಲುಕಿದ್ದ ಮೂರು ಜನ ಪ್ರವಾಸಿಗರನ್ನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ.

Advertisment

ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ!

ದೇಶದಲ್ಲಿ ಮಾನ್ಸೂನ್ ತನ್ನ ಉತ್ತುಂಗ ಸ್ಥಿತಿಯಲ್ಲಿದೆ. ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ NCR ನ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇನ್ನೂ ಮೂರು ದಿನ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶ, ಉತ್ತರಾಖಂಡ, ಪೂರ್ವ ಉತ್ತರ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಘೋಷಿಸಿದೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು..?

ರಾಜಸ್ತಾನದಲ್ಲಿ ಭಾರೀ ಮಳೆ.. ಕೇರಳದಲ್ಲಿ ಆರೆಂಜ್ ಅಲರ್ಟ್!

ರಾಜಸ್ಥಾನದ ಜೋಧ್‌ಪುರ, ಬಿಕಾನೇರ್, ಅಜ್ಮೀರ್ ವಿಭಾಗದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗ್ತಿದೆ. ಕಳೆದ ಮೂರು ದಿನದಲ್ಲಿ ಸುರಿದ ಮಳೆಗೆ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಹಲವು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಹವಾಮಾನ ಇಲಾಖೆ 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ನೀಡಿ ಜನರಿಗೆ ಎಚ್ಚರಿಕೆ ಕೊಟ್ಟಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯುವ್ಯ ಭಾರತ.. ಬಿಹಾರ.. ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಮಳೆ ಮುಂದುವರೆದಿದೆ.

ಪಾಕಿಸ್ತಾನದಲ್ಲಿ ವರುಣನ ಅಬ್ಬರ, 180 ಜನರು ಮೃತ

ಪಾಕಿಸ್ತಾನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸುಮಾರು 180 ಜನರು ಮೃತಪಟ್ಟಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಸರ್ಕಾರ ಮಳೆ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ.ನೇರ ಪ್ರಸಾರದ ವೇಳೆ ಕುತ್ತಿಗೆ ಮಟ್ಟದ ನೀರಿನಲ್ಲಿ ಪಾಕಿಸ್ತಾನಿ ವರದಿಗಾರನೊಬ್ಬ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಚಕ್ವಾಲ್‌ನಲ್ಲಿ ರಕ್ಷಣಾ ಸಿಬ್ಬಂದಿ ಸಹಾಯ ಮಾಡುತ್ತಿದ್ದು, ನದಿ ತೀರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಪಂಜಾಬ್‌ನ ಮುಖ್ಯಮಂತ್ರಿ ಮರಿಯಮ್ ನವಾಜ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಒಟ್ಟಾರೆ, ಮಳೆಯ ಅಬ್ಬರಕ್ಕೆ ಕಂಗಾಲಾಗಿರೋದು ಮಾತ್ರ ಸಾಮಾನ್ಯ ಜನ.

Advertisment

ಇದನ್ನೂ ಓದಿ: Gold news: ಯಾವ ದೇಶದ ಬಳಿ ಅತಿ ಹೆಚ್ಚು ಚಿನ್ನ ಇದೆ..? ಭಾರತದ ಸ್ಥಾನ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment