ಭಾರೀ ಮಳೆ.. ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

author-image
Ganesh
Updated On
ಭಾರೀ ಮಳೆ.. ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisment
  • ದಕ್ಷಿಣ ಕನ್ನಡದಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ
  • ಕಡಲ್ಕೊರೆತದ ಆರ್ಭಟ.. ಧರೆಗುರುಳಿದ ಮರಗಳು
  • ಮಳೆಯಿಂದಾಗಿ ರಾಜ್ಯದಲ್ಲಿ ಎಲ್ಲಿ ಏನೆಲ್ಲ ಆಯಿತು..?

ರಾಜ್ಯದ ಹಲವೆಡೆ ವರುಣ ತನ್ನ ಆರ್ಭಟವನ್ನ ಮುಂದುವರೆಸಿದ್ದಾನೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಂಪರ್ಕ ಕಡಿತವಾಗಿದೆ. ನಿರಂತರ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇದಿಷ್ಟೇ ಅಲ್ಲದೇ ವರುಣ ಸಾವು-ನೋವಿಗೂ ಕಾರಣವಾಗ್ತಿದ್ದಾನೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆಟ ಶುರುವಾಗಿದೆ. ದಕ್ಷಿಣ ಕನ್ನಡದಲ್ಲಂತೂ ವರುಣದೇವ ಅಕ್ಷರಶಃ ತಾಂಡವವಾಡ್ತಿದ್ದಾನೆ.. ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆಗೆ ಜಿಲ್ಲೆಯಲ್ಲಿ ಅವಾಂತರಗಳ ಸುರಿಮಳೆಯೇ ಸೃಷ್ಟಿಯಾಗಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 15 ಭಕ್ತರು ದಾರುಣ ಸಾವು

publive-image

ವರುಣದೇವನ ವಕ್ರದೃಷ್ಟಿ ದಕ್ಷಿಣ ಕನ್ನಡ ಜಿಲ್ಲೆ ಮೇಲೆ ಬಿದ್ದಂತಿದೆ. ಮನೆಗಳು ಕುಸಿಯುತ್ತಿವೆ. ಮರಗಳು ಧರೆಗುರುಳುತ್ತಿವೆ. ಜೀವವೂ ಬಲಿಯಾಗ್ತಿವೆ. ಇದಕ್ಕೆ ಯಮರೂಪಿ ಮಳೆ ಕಾರಣ. ಇಂದು ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರೆಡ್ ಅಲರ್ಟ್​ ಇರೋದ್ರಿಂದ ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರದಿಂದಿರಲು ಸೂಚಿಸಲಾಗಿದೆ.

ಶಾಲಾ ಕೊಠಡಿಯ ಮೇಲೆ ಕುಸಿದ ಗುಡ್ಡ
ಕೊಡಗು ಜಿಲ್ಲೆ ಸಂಪಾಜೆ ಸಮೀಪದ ಕೊಯ್ನಾಡಿನಲ್ಲಿ ಶಾಲಾ ಕೊಠಡಿಯ ಮೇಲೆ ಗುಡ್ಡ ಕುಸಿದಿದೆ. ಗೋಡೆ, ಕಿಟಕಿ ಜಖಂ ಆಗಿದೆ. ಕೊಡಗಿನ ಅಬ್ಬಿಫಾಲ್ಸ್ ಸಮೀಪ ನಿರ್ಮಾಣವಾಗಿರೋ ಸ್ಕೈವಾಕ್ ಬ್ರಿಡ್ಜ್ ಕೂಡ ವರುಣಾಘಾತಕ್ಕೆ ತುತ್ತಾಗಿದೆ. ಈ ಬ್ರಿಡ್ಜ್​ನ ಪಿಲ್ಲರ್ ಸಮೀಪದ ಮಣ್ಣು ಕುಸಿತಕೊಂಡಿದ್ದು, ಕಂಬಗಳು ಜಾರುವ ಆತಂಕ ಎದುರಾಗಿದೆ.

ಇದನ್ನೂ ಓದಿ:‘ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ’ -ಜೈಲು ಅಧಿಕಾರಿಗಳಿಗೆ ದರ್ಶನ್ ಶಾಕಿಂಗ್ ಹೇಳಿಕೆ

publive-image

ಕಡಲ್ಕೊರೆತದ ಆರ್ಭಟ.. ಧರೆಗುರುಳಿದ ಮರಗಳು
ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ದೇವಭಾಗ ಬೀಚ್ ರೆಸಾರ್ಟ್ಸ್‌ನ 4 ಕಾಟೇಜ್‌ಗಳಿಗೆ ಹಾನಿಯಾಗಿದೆ. ಮೂರ್ನಾಲ್ಕು ದಿನಗಳ ಅಂತರದಲ್ಲೇ 4 ಕಾಟೇಜ್‌ಗಳು ಕಡಲ್ಕೊರೆತದಿಂದ ನೆಲಸಮವಾಗಿದೆ. ಇನ್ನು, ನೂರಾರು ಗಾಳಿಮರಗಳು ನೆಲಕ್ಕುರುಳಿದೆ. ಇನ್ನು, ಅಲೆಗಳ ಅಬ್ಬರ ಹೆಚ್ಚಿದ್ದು ತೀರಪ್ರದೇಶದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಒಟ್ನಲ್ಲಿ, ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇದ್ರೆ ಒಳ್ಳೆಯದು.

ಇದನ್ನೂ ಓದಿ:ಒಂದೇ ದಿನದಲ್ಲಿ ಭರ್ಜರಿಯಾಗಿ KRS ಡ್ಯಾಂ ನೀರಿನಲ್ಲಿ ಹೆಚ್ಚಳ.. ಕಾವೇರಿಗೆ ಹೊಸ ಕಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment