ದಾಖಲೆಯ ಮಳೆಗೆ ಮುಳುಗಿ ಹೋದ ಗಾಂಧಿ ನಾಡು
ಆಗಸ್ಟ್‌ನಲ್ಲಿ ಇಷ್ಟು ಮಳೆಯನ್ನ ಹಿಂದೆದೂ ಕಂಡಿರಲಿಲ್ಲ
ಮುಂದಿನ ಮೂರ್ನಾಲ್ಕು ದಿನ ಮತ್ತಷ್ಟು ಮಳೆ ಮುನ್ಸೂಚನೆ
ಭಾರೀ ಮಳೆಯು ಗುಜರಾತ್‌ನಲ್ಲಿ ವಿನಾಶವನ್ನ ಉಂಟುಮಾಡಿದೆ. ಒಂದೆಡೆ ರಾಜ್ಯದ ಕೆಲ ಗ್ರಾಮಗಳು, ನಗರಗಳು ನೀರಲ್ಲಿ ಮುಳುಗಿದ್ದರೆ.. ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.. ಏತನ್ಮಧ್ಯೆ, ಗುಜರಾತ್ ಜನರ ಮೇಲೆ ಸದ್ಯಕ್ಕೆ ಮಳೆರಾಯ ಕನಿಕರ ತೋರಲ್ಲ ಅಂತ ಹಠ ಹಿಡಿದಂತೆ ಕಾಣ್ತಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ ಕೂಡ ಇದನ್ನೇ ಹೇಳಿದೆ.
ಗುಜರಾತ್‌ನ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿಕೆ
ದೇವಭೂಮಿ ದ್ವಾರಕಾ ಜಿಲ್ಲೆಯ ಭನ್ವಾಡ್‌ನಲ್ಲಿ 295 ಮಿಲಿ ಮೀಟರ್ನಷ್ಟು ಮಳೆ ದಾಖಲಾಗಿದ್ದರೆ, ಕಚ್‌ನ ಅಬ್ದಾಸಾದಲ್ಲಿ 276 ಮಿಲಿ ಮೀಟರ್ ಮತ್ತು ಕಲ್ಯಾಣಪುರದಲ್ಲಿ 263 ಮಿಲಿ ಮೀಟರ್ ಮಳೆಯಾಗಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಗುಜರಾತ್‌ನ 20 ತಾಲೂಕುಗಳು ಈ ಅವಧಿಯಲ್ಲಿ 100 ಮಿಲಿ ಮೀಟರ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಆಗಸ್ಟ್ ತಿಂಗಳ ಇತಿಹಾಸದಲ್ಲೇ ಗುಜರಾತ್ ಹಿಂದೆದೂ ಈ ಪ್ರಮಾಣದ ಮಳೆಯನ್ನ ಕಂಡಿರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೂಲಿಂಗ್ ಗ್ಲಾಸ್, ಹ್ಯಾಂಡ್ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!
ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆ
ನಿನ್ನೆ.. ಮೊನ್ನೆದು ಬಿಡಿ ಇನ್ನೂ ಐದು ದಿನಗಳ ಕಾಲ ಗುಜರಾತ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಗುಜರಾತ್‌ನ 33 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಮಳೆಗಾಗಿ ರೆಡ್ ಅಲರ್ಟ್ ಮತ್ತು ಉಳಿದ 22 ಜಿಲ್ಲೆಗಳಲ್ಲಿ ಮಳೆಗಾಗಿ ಹಳದಿ ಅಲರ್ಟ್ ಘೋಷಿಸಿದೆ. ಹಾಗೂ ನಾಳೆಯವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ.
ಗುಜರಾತ್‌ನಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿದೆ. ಪ್ರವಾಹದಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಮಳೆ ಕಡಿಮೆ ಆಗಿದ್ರೂ ಪ್ರವಾಹ ಪರಿಸ್ಥಿತಿ ತಗ್ಗಿಲ್ಲ. ಆರು ಸೇನಾ ತುಕಡಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸೇನೆಯ ಜೊತೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ವಾಯುಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಸಹ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಇನ್ನು ಗುಜರಾತ್ ಸಿಎಂ, ವಡೋದರದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಸಂತ್ರಸ್ತರಿಗೆ ದೈರ್ಯ ತುಂಬಿದ್ದಾರೆ.
ಒಟ್ಟಾರೆ.. ರಣಭೀಕರ ಮಳೆಗೆ ಮೋದಿ ನಾಡು ಗುಜರಾತ್ ನಲುಗಿ ಹೋಗಿದ್ದು, ಮುಂದಿನ ಮೂರ್ನಾಲ್ಕು ದಿನ ಮತ್ತಷ್ಟು ಮಳೆ ಮುನ್ಸೂಚನೆ ಇದ್ದು, ಜನರ ನಿದ್ದೆ ಗೆಡಿಸಿದೆ.
ಇದನ್ನೂ ಓದಿ:ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ