/newsfirstlive-kannada/media/post_attachments/wp-content/uploads/2024/10/RAIN-SCHOOL.jpg)
ರಾಜ್ಯದಲ್ಲಿ ಅವಧಿಗೂ ಮುನ್ನ ಅತಿಯಾದ ಮಳೆಯಾಗ್ತಿದೆ. ಕರಾವಳಿ, ಮಲೆನಾಡು ಭಾಗ ಸೇರಿದಂತೆ ಹಲವೆಡೆ ವರುಣನ ಅಬ್ಬರ ಮುಂದುವರೆದಿದೆ. ಹೊರಗೆ ಹೋಗೋಕೆ ಹಿಂದೇಟು ಹಾಕುವಂತಾಗಿದೆ. ಚಳಿ ಗಾಳಿ ಜೊತೆಗೆ ಸುರೀತಿರೋ ಮಳೆ ರಾಜ್ಯದ ಜನರನ್ನ ಸಂಕಷ್ಟಕ್ಕೆ ದೂಡಿದೆ.
ಕೊಡಗಿನಲ್ಲಿ ಭಾರಿ ಮಳೆ.. ಇಂದು, ನಾಳೆ ಶಾಲೆಗೆ ರಜೆ
ಭಾರೀ ಮಳೆ ಹಿನ್ನೆಲೆ ಇವತ್ತೂ ಕೂಡ ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಇವತ್ತು ಮತ್ತು ನಾಳೆ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ 2 ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟರಾಜು ಆದೇಶ ಹೊರಡಿಸಿದ್ದಾರೆ. ಪ್ರವಾಹದ ಆತಂಕ ಇನ್ನೂ ಮುಂದುವರಿದಿದ್ದು, ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ.
ಇದನ್ನೂ ಓದಿ: ಕನ್ನಡಕ್ಕೆ 2,500 ವರ್ಷದ ಇತಿಹಾಸವಿದೆ.. ಕಮಲ್ ಹಾಸನ್ ಹೇಳಿಕೆಗೆ ನಟ ಜಗ್ಗೇಶ್ ಖಡಕ್ ತಿರುಗೇಟು
ಮನೆ ಮೇಲೆ ಬಿದ್ದ ಬೃಹತ್ ಮರ, ಮಹಿಳೆಗೆ ಗಂಭೀರ ಗಾಯ
ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆಯ ಅಬ್ಬರ ಪ್ರತಿ ನಿತ್ಯ ಜನರಿಗೆ ಸಮಸ್ಯೆ ಸೃಷ್ಟಿಸುತ್ತಿದೆ. ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡು ಮನೆಯೊಳಗಿದ್ದ ಮಹಿಳೆಗೆ ಗಾಯಗಳಾಗಿರುವ ಘಟನೆ ಮೈಲಿಮನೆ ಗ್ರಾಮದಲ್ಲಿ ನಡೆದಿದೆ. ನಂದಿನಿ ಎಂಬುವವರಿಗೆ ಸೊಂಟ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ.
ಮಳೆಯ ನಡುವೆ ಪರಿಸರ ಪ್ರೇಮಿಗಳಿಂದ ಮಾದರಿ ಕಾರ್ಯ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಇದರ ನಡುವೆ ಸದಾ ಪರಿಸರ ಮೇಲೆ ಕಾಳಜಿ ಇಟ್ಟುಕೊಂಡಿರುವ ಹಸಿರು ಫೌಂಡೇಶನ್ ಮಾದರಿ ಕಾರ್ಯ ಮಾಡಿದೆ. ಎತ್ತಿನಭುಜದ ಅರಣ್ಯ ಪ್ರದೇಶಗಳಲ್ಲಿ ಮೊಳಕೆಯೊಡೆದ ಹಲಸು, ಬೈನೆ ಬೀಜಗಳನ್ನ ಎಸೆಯುವ ಮೂಲಕ ಮುಂದಿನ ವರುಷಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ನೆರವಾಗುವಂತೆ ಮಾಡಿದೆ.
ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆ ಇಂದಿನಿಂದ ಶಾಲೆ ಆರಂಭ; ಪೋಷಕರು ಓದಲೇಬೇಕಾದ ಸ್ಟೋರಿ ಇದು!
ಬಿರುಗಾಳಿ ಸಹಿತ ಮಳೆ ಹಿನ್ನೆಲೆ ದಾಳಿಂಬೆ ಬೆಳೆ ನಷ್ಟ
ಕಳೆದ 15 ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯ ಜೊತೆಗೆ ಬಿರುಗಾಳಿಯಿಂದ ದಾಳಿಂಬೆ ಬೆಳೆಗಾರರಿಗೆ ನಷ್ಟವನ್ನುಂಟುಮಾಡಿದೆ. ಆಷಾಢಮಾಸದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ದಾಳಿಂಬೆಗಳಲ್ಲಿನ ಹೂಗಳು ಉದುರುತ್ತಿದ್ದು, ಇದರಿಂದ ದಾಳಿಂಬೆ ಬೆಳಗಾರರಿಗೆ ಸಂಕಷ್ಟ ತಂದಿದೆ.
ಗಡಿ ಜಿಲ್ಲೆ ಬೀದರ್‌ನಲ್ಲಿ ವರುಣಾರ್ಭಟಕ್ಕೆ ಸೇತುವೆ ಜಲಾವೃತ
ಗಡಿ ಜಿಲ್ಲೆ ಬೀದರ್‌ನಲ್ಲಿ ವರುಣನಾರ್ಭಟಕ್ಕೆ ಸೇತುವೆ ಜಲಾವೃತವಾಗಿ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಪರದಾಡುವಂತಾಗಿದೆ. ಆಲಗೂಡ, ಭೋಸಗಾ ಲಾಡವಂತಿ, ಕೊಹಿನೂರ್ ಹೋಬಳಿಯಲ್ಲಿ ಹಲವು ಗ್ರಾಮಗಳ ರಸ್ತೆ ಕಾಣದಂತಾಗಿದೆ. ಎತ್ತರದ ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಒತ್ತಾಯಿಸ್ತಿದ್ದಾರೆ.
ಇದನ್ನೂ ಓದಿ: RCB vs PBKS; ಮಳೆ ಬಂದು ಪಂದ್ಯ ವಾಶ್ಔಟ್ ಆದರೆ ನೇರ ಫೈನಲ್ಗೆ ಹೋಗೋದು ಯಾರು..?
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿಗಳಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಹಿನ್ನಲೆ ಇಂದು ಜಿಲ್ಲೆಯ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲೂ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ಹಾಗೂ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಒಂದೆಡೆ ಕೃಷ್ಣಾ ನದಿಗೆ ನೀರು ಬರುತ್ತಿರುವ ಹಿನ್ನಲೆಯಲ್ಲಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಭೀಮಾನದಿಗೆ ಏಕಾಏಕಿ ನೀರು ಬಿಟ್ಟಿದ್ದರಿಂದ ರೈತರ ಪಂಪ್ ಸೆಟ್ಗಳು ಜಲಾವೃತವಾಗಿವೆ. ಒಟ್ನಲ್ಲಿ ಮಳೆಗಾಲದ ಆರಂಭದಲ್ಲೇ ಮಳೆರಾಯ ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದಾನೆ.
ಇದನ್ನೂ ಓದಿ: RCB vs PBKS: ಇಂದು ಫೈನಲ್ಗೆ ಎಂಟ್ರಿ ನೀಡೋ ತಂಡ ಯಾವುದು..? ಹೇಗಿದೆ ಪಿಚ್..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ