Advertisment

ಕಾರವಾರ ಜಲಾವೃತ.. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕುಸಿದ ಗುಡ್ಡ.. ಮಳೆಗೆ ಭಾರೀ ಅನಾಹುತ -Photos

author-image
Ganesh
Updated On
ಕಾರವಾರ ಜಲಾವೃತ.. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕುಸಿದ ಗುಡ್ಡ.. ಮಳೆಗೆ ಭಾರೀ ಅನಾಹುತ -Photos
Advertisment
  • ಭಾರೀ ಮಳೆಗೆ ತತ್ತರಿಸಿದ ಉತ್ತರ ಕನ್ನಡ ಜಿಲ್ಲೆಯ ಜನ
  • ಪ್ರಮುಖ ಹೆದ್ದಾರಿಗಳು ಬಂದ್, ರಸ್ತೆಯಲ್ಲಿ ನಿಂತ ವಾಹನ
  • ಗ್ರಾಮಗಳಿಗೆ ನುಗ್ಗಿದ ನೀರು, ಅಲ್ಲಲ್ಲಿ ಅನಾಹುತ, ಏನೆಲ್ಲ ಆಗಿದೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಸಹಜವಾಗಿಯೇ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಕಾರವಾರ ತಾಲೂಕಿನಲ್ಲಿ ಹಲವು ರಸ್ತೆಗಳು, ಗ್ರಾಮಗಳು ಜಲಾವೃತಗೊಂಡಿವೆ.

Advertisment

ಇದನ್ನೂ ಓದಿ:ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ; ಸಾವಿಗೆ ಕಾರಣ ಒಂದು ಮಂಗ..

publive-image

ಎಲ್ಲಿ ಏನೇನು ಆಗ್ತಿದೆ..?
ಅರಗಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ‌ ನೀರು ನಿಂತಿದೆ. ಭಾರೀ ಪ್ರಮಾಣದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಗೋವಾ ಮಂಗಳೂರು ನಡುವಿನ ರಸ್ತೆ ಬಂದ್ ಆಗಿದೆ. ಇನ್ನು, ಹಬ್ಬುವಾಡ ರಸ್ತೆ ಕೂಡ ಜಲಾವೃತವಾಗಿದೆ. ಜೋರು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಹತ್ತು ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

publive-image
ಅಷ್ಟೇ ಅಲ್ಲ, ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ. ತಡರಾತ್ರಿ ಗುಡ್ಡ ಕುಸಿದಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರಾಗಿಹೊಸಳ್ಳಿ ಬಳಿ ಘಟನೆ ನಡೆದಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

Advertisment

ಇದನ್ನೂ ಓದಿ: ಆರ್​ಸಿಬಿಯಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಬೆಲೆ, ನಮಗೆ ಕಿಮ್ಮತ್ತೇ ಇರಲಿಲ್ಲ- RCB ಮಾಜಿ ಪ್ಲೇಯರ್ ಆಕ್ರೋಶ

publive-image

ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲೂ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ವರ್ನಕೇರಿ ಬಳಿ ಅನಾಹುತ ಆಗಿದೆ. ಪರಿಣಾಮ ಹೊನ್ನಾವರ-ಗೇರುಸೊಪ್ಪ-ಸಾಗರ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗುಡ್ಡ ಕುಸಿತದಿಂದ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿವೆ.

publive-image

ಇದನ್ನೂ ಓದಿ:ಕೊಚ್ಚಿ ಹೋದ ಯುವಕ.. 2 ದಿನದ ಮಳೆಗೆ 8 ಸಾವು.. ವರುಣದೇವ ಕರುಣೆ ತೋರು ಅಂತಿದ್ದಾರೆ ಜನ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment