/newsfirstlive-kannada/media/post_attachments/wp-content/uploads/2024/10/RAIN-SCHOOL.jpg)
ಕರುನಾಡಿಗೆ ಹೊಸ ಕಳೆ ತಂದಿರೋ ಮುಂಗಾರುಮಳೆ ಕರಾವಳಿ-ಮಲೆನಾಡು ಭಾಗದಲ್ಲಿ ಚುರುಕುಗೊಂಡಿದೆ. ಮಲೆನಾಡಿನ ಮಳೆಗೂ ಶಾಲೆಗೂ ಅವಿನಾಭಾವ ಸಂಬಂಧ ಅನ್ನೋ ಹಾಗೆ ಇಂದು ಸಹ ಕೆಲ ತಾಲೂಕುಗಳ ಶಾಲೆಗಳಿಗೆ ವರುಣ ಬೀಗ ಜಡಿದಿದ್ದಾನೆ.
ಕಾಫಿನಾಡಿನ 6 ತಾಲೂಕುಗಳ ಶಾಲೆಗಳಿಗೆ ಇಂದು ರಜೆ
ಮಲೆನಾಡಿನೆಲ್ಲೆಡೆ ಗಾಳಿ-ಮಳೆ ಅಬ್ಬರ ಮುಂದುವರಿದೆ. ವರುಣಾರ್ಭಟಕ್ಕೆ ಇಂದು ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ರಜೆ
ಉತ್ತರ ಕನ್ನಡ ಜಿಲ್ಲೆಯಲ್ಲೂ ವರುಣಾ ರೆಸ್ಟ್ ತೆಗೆದುಕೊಳ್ಳದೇ ದೋ ಅಂತ ಸುರಿಯುತ್ತಿದ್ದಾನೆ.. ಈ ಹಿನ್ನೆಲೆ ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಗಾಗಿ ಯುವರಾಜ್ ಸಿಂಗ್ಗೆ ವಿಲನ್ ಆದ್ರಾ ಕ್ರಿಕೆಟ್ ದೇವ್ರು ಸಚಿನ್..?
ಮಳೆ ನಡುವೆ ನಿವೃತ್ತ ಯೋಧನ ಪಾರ್ಥೀವ ಶರೀರ ಸಾಗಾಟಕ್ಕೆ ಸರ್ಕಸ್
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಮಳೆರಾಯ ರೌದ್ರನರ್ತನ ತೋರುತ್ತಿದ್ದಾನೆ.. ಭಾರೀ ಮಳೆಯಿಂದ ತಾಲೂಕಿನ ಬಾಳುಗೋಡುವಿನಲ್ಲಿ ನಿವೃತ್ತ ಯೋಧನ ಶವ ಸಾಗಾಟಕ್ಕೆ ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಭಾರೀ ಮಳೆಗೆ ಸಂಪರ್ಕ ಸೇತುವೆ ಕೊಚ್ಚಿ ಹೋದ ಪರಿಣಾಮ ಅಡಿಕೆ ಮರದ ತಾತ್ಕಾಲಿಕ ಸೇತುವೆ ಮೇಲೆ ಮಾಜಿ ಯೋಧ ಧನಂಜಯ ಬಾಳುಗೋಡು ಪಾರ್ಥೀವ ಶರೀರ ರವಾನೆ ಮಾಡಲಾಗಿದೆ.
ವಿದ್ಯುತ್ ಅಲಂಕಾರದಿಂದ ಟಿಬಿ ಡ್ಯಾಂ ಝಗಮಗ
ಮುಂಗಾರು ಮಳೆ ಅಬ್ಬರಕ್ಕೆ ತುಂಗಭದ್ರಾ ಜಲಾಶಯದ ಮೈದುಂಬಿದೆ.. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರಭಾಗದಲ್ಲಿರೋ ಜಲಾಶಯ ಭರ್ತಿಯಾಗಿರೋದ್ರಿಂದ ಕ್ರಸ್ಟ್ ಗೇಟ್ ಮೂಲಕ ನೀರು ಹೊರಬಿಡಲಾಗ್ತಿದೆ.. ಈ ಹಿನ್ನೆಲೆ ಕ್ರಸ್ಟ್ ಗೇಟ್ಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.. ಬಣ್ಣ ಬಣ್ಣದ ಲೈಟ್ಗಳಿಂದ ಡ್ಯಾಂ ಝಗಮಗ ಎನ್ನುತ್ತಿದ್ದು, ನೋಡುಗರ ಕಣ್ಣು ಕೋರೈಸುವಂತಿದೆ.. ಇನ್ನೂ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರೋ ಹಿನ್ನೆಲೆ ಐತಿಹಾಸಿಕ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆ ಹಂತಕ್ಕೆ ತಲುಪಿವೆ.
ಶರಾವತಿ ಹಿನ್ನೀರಿನಲ್ಲಿ ಕೆಟ್ಟು ನಿಂತ ಲಾಂಚ್
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಒಂದು ಕೆಟ್ಟುನಿಂತು ಆತಂಕ ಸೃಷ್ಟಿಸಿತ್ತು.. ಹೊಳೆ ಬಾಗಿಲಿನಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್ ನೀರಿನ ಮಧ್ಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತುಹೋಗಿತ್ತು.. ಇದ್ರಿಂದ ಲಾಂಚಿನಲ್ಲಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರು ಕೆಲಕಾಲ ಆತಂಕಗೊಂಡಿದ್ರು.. ಬಳಿಕ ಸೇತುವೆ ಕಾಮಗಾರಿಯ ಲಾಂಚ್ ಮೂಲಕ ಹಗ್ಗ ಕಟ್ಟಿಕೊಂಡು ಕೆಟ್ಟು ನಿಂತಿದ್ದ ಲಾಂಚ್ ದಡಕ್ಕೆ ಸೇರಿಸಲಾಯ್ತು.
ಒಟ್ನಲ್ಲಿ ಮುಂಗಾರು ಮಳೆ ಮಹಾ ಅವತಾರ ತೋರಿ ಆರಂಭದಲ್ಲೇ ಕೆಲವೆಡೆ ಆತಂಕ ಮೂಡಿಸಿದೆ. ಇನ್ನೂ ಮಳೆ ಚುರುಕುಗೊಂಡಿರೋದ್ರಿಂದ ರೈತರು ಫುಲ್ ಖುಷ್ ಆಗಿದ್ದು ಕೃಷಿ ಚಟುವಟಿಕೆಯತ್ತ ಮುಖಮಾಡಿದ್ದಾರೆ.
ಇದನ್ನೂ ಓದಿ: ಪ್ರಸಾರ ಭಾರತಿಯಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಉದ್ಯೋಗಗಳು ಖಾಲಿ.. ಅಪ್ಲೇ ಮಾಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ