/newsfirstlive-kannada/media/post_attachments/wp-content/uploads/2023/11/BNG_RAIN-4.jpg)
ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆ ಮುಂದಿನ ವಾರವೂ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮುಂದಿನ 4 ದಿನಗಳ ಕಾಲ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎನ್ನಲಾಗಿದೆ.
ಇವತ್ತು ವೀಕೆಂಡ್ ಅಂತ ಸಿಲಿಕಾನ್ ಸಿಟಿ ಸುತ್ತಾಡುತ್ತಿದ್ದವರಿಗೆ ಬೆಳಗ್ಗೆ ವರ್ಷಧಾರೆಯ ಸಿಂಚನವಾಗಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್, ಜೆ.ಪಿ ನಗರ, ಹೊರಮಾವು, ಮಲ್ಲೇಶ್ವರಂ, ಯಶವಂತಪುರ ಸೇರಿ ಹಲವೆಡೆ ಬೆಳಗ್ಗೆಯೇ ಸಾಧಾರಣ ಮಳೆಯಾಗಿದೆ. ಇಂದು ಸಂಜೆ ಮೂರು ಗಂಟೆಗಳ ಕಾಲ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ನಿನ್ನೆ ಕೂಡ ಬೆಂಗಳೂರು ನಗರದಲ್ಲಿ 3.1 ಮಿ.ಮೀ ಮಳೆಯಾಗಿದೆ. ನಂದಿನಿ ಲೇಔಟ್‌ನಲ್ಲಿ ಅತಿ ಹೆಚ್ಚು ಅಂದ್ರೆ 4.6. ಸೆಂ.ಮೀ ಮಳೆ. ಮಾರಪ್ಪನಪ್ಯಾಳದಲ್ಲಿ 3.6 ಸೆಂ.ಮೀ, ವಿದ್ಯಾರಣ್ಯಪುರದಲ್ಲಿ 3.2, ಬಾಗಲಗುಂಟೆ, ನಾಗಪುರ, ಶೆಟ್ಟಹಳಿಯಲ್ಲಿ ತಲಾ 3.1 ಸೆ..ಮೀ, ಪೀಣ್ಯ ಕೈಗಾರಿಕಾ ಪ್ರದೇಶ 2.8, ಯಲಹಂಕ 2.7, ಕೊಟ್ಟಗೆಪಾಳ್ಯ 1.8, ರಾಜಾಜಿನಗರ 1.6, ಚೊಕ್ಕಸಂದ್ರ 1.5, ಕಾಟನ್ ಪೇಟೆ1.3, ಗುಟ್ಟಹಳ್ಳಿ & ಚಾಮರಾಜಪೇಟೆಯಲ್ಲಿ 1.2 ಸೆಂ.ಮೀ ಮಳೆ ಸುರಿದಿದೆ.
ಇದನ್ನೂ ಓದಿ:ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ ಕೇಸ್.. 2ನೇ ಮದ್ವೆಯ ರೂಮರ್ಸ್‌ಗೆ ಹೊಸ ಟ್ವಿಸ್ಟ್
ರಾಜ್ಯದ ಹಲವೆಡೆ ವರ್ಷಧಾರೆ
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಬೆಳ್ಳಂಬೆಳಗ್ಗೆ ಜೋರು ಮಳೆ ಆರಂಭವಾಗಿದೆ. ನಿನ್ನೆಯಿಂದಲೂ ಮೈಸೂರಲ್ಲಿ ಮೋಡ ಕವಿದ ವಾತಾವರಣ ಇದ್ದು, ಬೆಳ್ಳಂಬೆಳಗ್ಗೆ ಆಗಮಿಸಿದ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ರೇಷ್ಮೆನಗರಿ ರಾಮನಗರದಲ್ಲೂ ವರುಣನ ಸಿಂಚನ ಆಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮೇಘ ರಾಜನ ಕಂಡು ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಬಿಸಿಲಿನಿಂದ ಬಸವಳಿದ ಇಳೆಗೆ ವರುಣನ ಸಿಂಚನವಾಗಿದೆ. ಮೇ 18 ರಿಂದ ಮೇ 26ರವರೆಗೆ ರಾಜ್ಯದಾದ್ಯಂತ ತುಂತುರು ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ