ನಿರಂತರ ಮಳೆಗೆ ಮನೆ ಕುಸಿದು ಅವಳಿ ಮಕ್ಕಳು, ಓರ್ವ ಮಹಿಳೆ ಸಾವು.. ಮೂವರು ಗಂಭೀರ

author-image
Bheemappa
Updated On
ನಿರಂತರ ಮಳೆಗೆ ಮನೆ ಕುಸಿದು ಅವಳಿ ಮಕ್ಕಳು, ಓರ್ವ ಮಹಿಳೆ ಸಾವು.. ಮೂವರು ಗಂಭೀರ
Advertisment
  • ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದುರಂತ
  • ಕುಟುಂಬಸ್ಥರ ಮೇಲೆ ಕುಸಿದು ಬಿದ್ದಿರುವ ಮನೆ, ಮೂವರು ಸಾವು
  • ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇನ್ನೂ ಮೂವರು

ಹಾವೇರಿ: ನಿರಂತರ ಮಳೆಯಿಂದಾಗಿ ಮನೆ ಕುಸಿದು ಅವಳಿ ಮಕ್ಕಳು ಹಾಗೂ ಮಹಿಳೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸವಣೂರಿನ ಮಾದಾಪುರದಲ್ಲಿ ನಡೆದಿದೆ.

ಇದನ್ನೂ ಓದಿ: ಹಿಟ್ ಅಂಡ್​ ರನ್​​ಗೆ ASI ಬಲಿ.. ಅಪಘಾತದ ಹೊಡೆತಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜು..

ಒಂದೂವರೆ ವರ್ಷದ ಅಮೂಲ್ಯ, ಅನನ್ಯ ಹಾಗೂ ಚನ್ನಮ್ಮ (30) ಮೃತಪಟ್ಟ ದುರ್ದೈವಿಗಳು. ಕುಟುಂಬದ ಯಲ್ಲವ್ವ, ಮುತ್ತು ಹರಕೂನಿ, ಸುನೀತಾ ಎಂಬುವರಿಗೆ ಗಂಭೀರ ಗಾಯಗಳು ಆಗಿವೆ. ನಿರಂತರ ಮಳೆಯಿಂದ ಮನೆ ನೆನೆದು ಹೋಗಿತ್ತು. ಏಕಾಏಕಿ ಮನೆ ಕುಸಿದಿದ್ದರಿಂದ ಮನೆಯಲ್ಲಿದ್ದ 6 ಜನರ ಪೈಕಿ ಎರಡು ಮಕ್ಕಳು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಭಾರೀ ಮಳೆ-ಗಾಳಿ.. ಅಪಾಯದ ಮಟ್ಟ ಮೀರಿದ ಕಾವೇರಿ.. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

publive-image

ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment