/newsfirstlive-kannada/media/post_attachments/wp-content/uploads/2025/05/CKD-RAIN.jpg)
ದೇಶದ ನಾನಾ ರಾಜ್ಯದಲ್ಲಿ ಮಳೆಯ ತಾಂಡವ ಜೋರಾಗಿಯೇ ಇದೆ. ಕೆಲವೆಡೆ ಈಗ ಎಂಟ್ರಿ ಕೊಡ್ತಿದ್ರೆ. ಇನ್ನೂ ಕೆಲವೆಡೆ ಈಗಾಗಲೇ ತನ್ನ ಸ್ವರೂಪವನ್ನ ತೋರಿಸೋದಕ್ಕೆ ಶುರು ಮಾಡಿದ್ದಾನೆ.
ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಲ್ಲೋಳ-ಯಡೂರ ಕೆಳ ಹಂತದ ಸೇತುವೆ ಮುಳುಗುವ ಭೀತಿ ಎದುರಾರಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಇದಾಗಿದೆ. ಇನ್ನೊಂದು ಅಡಿ ನೀರು ಬಂದರೆ ಎರಡು ಗ್ರಾಮದ ಸಂಪರ್ಕ ಕಡಿತವಾಗಲಿದೆ.
ಇದನ್ನೂ ಓದಿ: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್ಗೆ ಭಾರೀ ಮುಖಭಂಗ!
ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಕುಸಿತ
ಧಾರಾಕಾರ ಮಳೆ.. ಅಬ್ಬರದ ಗಾಳಿಯ ರಬಸಕ್ಕೆ ದೆಹಲಿಯಲ್ಲಿರೋ ದೇಶದ ಅತೀ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.. ಇಂದಿರಾಗಾಂಧಿ ಏರ್ಪೋರ್ಟ್ ಟರ್ಮಿನಲ್-1ರ ಪ್ರವೇಶ ದ್ವಾರದ ಬಳಿ ಮೇಲ್ಛಾವಣಿಯು ಭಾಗಶಃ ಕುಸಿದಿದೆ. ಇದರಿಂದಾಗಿ 17 ಅಂತರರಾಷ್ಟ್ರೀಯ ವಿಮಾನಗಳು ಸೇರಿ 49 ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ. ದೆಹಲಿಯ ಹಲವೆಡೆ ರಸ್ತೆಗಳು ನದಿಗಳಂತೆ ಭಾಸವಾಗುತ್ತಿವೆ.
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ.. ಜಲಸಂಕಟ
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟವಾಗಿದ್ದು, ಕುಲು, ರಾಂಪುರ್ ಬಳಿ ಕಾರುಗಳು ನೀರಲ್ಲಿ ಕೊಚ್ಚಿ ಹೋಗಿದ್ದಾವೆ. ಜಮತ್ಖಾನಾ ನಾಲಾದ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಾಗಿದ್ದು, ನೀರಿನ ಹರಿವು ಹೆಚ್ಚಾದ ಕಾರಣ ವಾಹನಗಳು ಕೊಚ್ಚಿ ಹೋಗಿವೆ. ವರುಣನ ಅಬ್ಬರಕ್ಕೆ 20ಕ್ಕೂ ಅಧಿಕ ಕಾರುಗಳು ಜಲಸಮಾಧಿಯಾಗಿವೆ. ಇನ್ನೂ, ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಮಳೆಯು ಜನರಿಗೆ ಅಪಾರ ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದೆ.
ಇದನ್ನೂ ಓದಿ: ಮಳೆಯೋ ಮಳೆ.. ಕರ್ನಾಟಕದಲ್ಲಿ ನಿನ್ನೆ ಮಳೆರಾಯ ಏನೆಲ್ಲ ಅನಾಹುತ ಮಾಡಿದ್ದಾನೆ..? Photos
ಬಿರುಗಾಳಿ ಮಳೆಗೆ ಎಸಿಪಿ ಕಚೇರಿಯ ಮೇಲ್ಛಾವಣಿ ಕುಸಿತ
ಬಿರುಗಾಳಿ ಮತ್ತು ಮಳೆಯಿಂದಾಗಿ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಎಸಿಪಿ ಕಚೇರಿಯ ಮೇಲ್ಛಾವಣಿ ಕುಸಿದು ಬಿದ್ದು, ಕಚೇರಿಯಲ್ಲಿದ್ದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ವೀರೇಂದ್ರ ಮಿಶ್ರಾ ಸಾವನ್ನಪ್ಪಿದ್ದಾರೆ. ಎರಡೂವರೆ ವರ್ಷಗಳ ಹಿಂದೆಯಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಕಚೇರಿಯನ್ನ ರಿನೋವೇಶನ್ ಮಾಡಲಾಗಿತ್ತಂತೆ.
ತಮಿಳುನಾಡಿಗೆ ಮಾನ್ಸೂನ್ ಆಗಮಿಸುತ್ತಿದ್ದಂತೆ ಹಲವೆಡೆ ಮಳೆ
ತಮಿಳುನಾಡಿಗೆ ಮಾನ್ಸೂನ್ ಆಗಮಿಸುತ್ತಿದ್ದಂತೆ ನೀಲಗಿರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ನಿರಂತರ ಮಳೆಯ ನಂತರ ನೊಯ್ಯಲ್ ನದಿ ಉಕ್ಕಿ ಹರಿಯುತ್ತಿದ್ದು, ಕೊಯಮತ್ತೂರಿನ ಜಲಾಶಯಗಳಿಗೆ ನೀರು ಹರಿದು ಬರ್ತಿದೆ.
ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಅಪ್ಪಳಿಸಲಿದೆ ನೈಋತ್ಯ ಮಾನ್ಸೂನ್
ಮುಂಬೈಯನ್ನ ಕಪ್ಪು ಮೋಡಗಳು ಆವರಿಸಿವೆ. ಮುಂದಿನ ಎರಡು ಮೂರು ದಿನಗಳವರೆಗೆ ಹವಾಮಾನ ಪರಿಸ್ಥಿತಿಗಳು ಹೀಗೆ ಇರಲಿದೆ. ಇತ್ತ ವಾಶಿಮ್‌ನ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿದೆ. ಜನ ನಿಂತ ನೀರಲ್ಲೇ ಜೀವ ಸಾಗಿಸುವಂತಾಗಿದೆ. ರಾಜ್ಯದಲ್ಲೇ ಮಾತ್ರವಲ್ಲ ದೇಶದ ಹಲವೆಡೆಯೂ ಮಳೆರಾಯನ ಅಬ್ಬರಕ್ಕೆ ಜನ ನಲುಗಿದ್ದಾರೆ. ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ನೈಋತ್ಯ ಮಾನ್ಸೂನ್ ಅಪ್ಪಳಿಸಲಿದೆ.
ಇದನ್ನೂ ಓದಿ: ಶಮಿ, ಸರ್ಫರಾಜ್ ಖಾನ್ಗೂ ಆಘಾತ.. ಐದು ಬಿಗ್ಸ್ಟಾರ್ಗೆ ಬಿಸಿಸಿಐ ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ