ವರುಣಾರ್ಭಟಕ್ಕೆ ಪ್ರಾಣ ಬಿಟ್ಟ 3 ವರ್ಷದ ಕಂದಮ್ಮ; ದುರಂತದ ಬಗ್ಗೆ ಮಗುವಿನ ಮಾವ ಹೇಳಿದ್ದೇನು?

author-image
Veena Gangani
Updated On
ವರುಣಾರ್ಭಟಕ್ಕೆ ಪ್ರಾಣ ಬಿಟ್ಟ 3 ವರ್ಷದ ಕಂದಮ್ಮ; ದುರಂತದ ಬಗ್ಗೆ ಮಗುವಿನ ಮಾವ ಹೇಳಿದ್ದೇನು?
Advertisment
  • ಈ ಘಟನೆ ಬಗ್ಗೆ ಮೃತ ಮಗುವಿನ ಮಾವ ವಿಜಯ್ ಏನಂದ್ರು?
  • ಮುಗಿಲು ಮುಟ್ಟಿದೆ ಮೃತ ಮಗಳ ಕುಟುಂಬಸ್ಥರ ಆಕ್ರಂದನ
  • ಅಕಾಲಿಕ ಮಳೆಗೆ ಮರಬಿದ್ದು ಪ್ರಾಣ ಬಿಟ್ಟ 3 ವರ್ಷದ ಬಾಲಕಿ

ಬೆಂಗಳೂರು: ಇಷ್ಟು ದಿನ ಬಿರು ಬಿಸಿಲಿನ ತಾಪಮಾನ ರೋಸಿ ಹೋಗಿದ್ದ ಜನಕ್ಕೆ ನಿನ್ನೆ ಮಳೆರಾಯ ತಂಪೆರೆದಿದ್ದ. ಒಂದು ಕಡೆ ಸಿಲಿಕಾನ್​ ಸಿಟಿ ಕೂಲ್​ ಕೂಲ್​ ಆಗಿದ್ದರೇ, ಮತ್ತೊಂದು ಕಡೆ ವಿಧಿಯಾಟವೇ ಬೇರೆಯಾಗಿತ್ತು. ಹೌದು, ನಿನ್ನೆ ರಾಜಧಾನಿಯಲ್ಲಿ ಅಕಾಲಿಕ ಮಳೆಗೆ ಮರಬಿದ್ದು 3 ವರ್ಷದ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಏಕಾಏಕಿ ವರುಣಾರ್ಭಟ..! ಬುಡಸಮೇತ ನೆಲಕ್ಕೆ ಬಿದ್ದ ಮರಕ್ಕೆ 3 ವರ್ಷದ ಕಂದಮ್ಮ ಬಲಿ!

publive-image

ನಿನ್ನೆ ರಾತ್ರಿ ಜೀವನ್ ಭೀಮಾನಗರದಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ತಡರಾತ್ರಿ ಸುರಿದ ಭಾರೀ ಮಳೆಗೆ ಮರಬಿದ್ದು 3 ವರ್ಷದ ಬಾಲಕಿ ರಕ್ಷಾ ಮೃತಪಟ್ಟಿದ್ದಾಳೆ. ಅಲ್ಲದೇ ಮರ ಬಿದ್ದ ಪರಿಣಾಮ ಮಗುವಿನ ತಂದೆಯೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

publive-image

ಈ ಘಟನೆ ಬಗ್ಗೆ ಮಾತಾಡಿದ ಮೃತ ಮಗುವಿನ ಮಾವ ವಿಜಯ್, ರಾತ್ರಿ 8.30ರ ಸುಮಾರಿಗೆ ಮರ ಬಿದ್ದ ವಿಷಯ ತಿಳಿತು. ಆಸ್ಪತ್ರೆಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಮಗು ಉಳಿಯಲಿಲ್ಲ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಗು ರಕ್ತಸ್ರಾವ ಆಗಿ ಮೃತಪಟ್ಟಿದೆ. ಮಗು ತಂದೆಗೂ ಬೆನ್ನುಮೂಳೆ ಮುರಿದಿದೆ ಅಂತಿದ್ದಾರೆ. ಬಿಬಿಎಂಪಿಯವರು ಮರಗಳನ್ನ ತೆರವು ಮಾಡಬೇಕು. ಮಳೆ ಬಂದಾಗ ಪದೇ ಪದೇ ಇಂತ ಘಟನೆ ಆಗುತ್ತಲೇ ಇರುತ್ತವೆ. ಈಗ ರಾತ್ರಿ ಬಂದು ಪರಿಹಾರ ಕೊಡ್ತೀವೆ ಅಂತಿದ್ದಾರೆ. ಬದುಕಿ ಬಾಳಬೇಕಿದ್ದ ಪುಟ್ಟ ಕಂದಮ್ಮನ ಜೀವ ತೆಗೆದು ಬಿಟ್ಟಿದೆ. ಮರಗಳ ಬಗ್ಗೆ ಗಮನಹರಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment